ವಿಶ್ವದಲ್ಲೇ ಸ್ಟಾರ್ಟ್ ಅಪ್ ಗಳ ಮೇಲೆ ಭಾರತ ಹಿಡಿತ ಸಾಧಿಸಲು ಪ್ರಾರಂಭಿಸಿದೆ. ಈಗ ಯುವಕರು ಉದ್ಯೋಗ ಮಾಡುವ ಬದಲು ಸ್ವಂತ ಉದ್ಯಮ ಆರಂಭಿಸಲು ಪ್ರೇರಣೆ ಪಡೆಯುತ್ತಿದ್ದಾರೆ. ಅದರಲ್ಲಿ ಶಾರ್ಕ್ ಟ್ಯಾಂಕ್ ನಂತಹ ಶೋಗಳು ಯುವಕರಲ್ಲಿ ಸ್ಟಾರ್ಟಪ್ ಆರಂಭಿಸುವ ಆಸೆಯನ್ನು ಜಾಗೃತಗೊಳಿಸುತ್ತಿವೆ. ಭಾರತ ಈಗ ಸ್ಟಾರ್ಟಪ್ ವಲಯದಲ್ಲಿ ಪ್ರಗತಿ ಸಾಧಿಸಿದ್ದು, ಬ್ರಿಟನ್ ಮತ್ತು ಚೀನಾದಂತಹ ದೇಶಗಳನ್ನು ಹಿಂದಿಕ್ಕಿದೆ.