Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

ಪ್ರತಿಯೊಂದು ಆಫೀಸ್ ನಲ್ಲೂ ಸ್ಯಾಲರಿ ಹೈಕ್, ಪ್ರಮೋಷನ್ ಸಮಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರುತ್ತವೆ. ಇಡೀ ವರ್ಷ ಕಷ್ಟಪಟ್ಟು ಕೆಲಸ ಮಾಡಿರುವ ಉದ್ಯೋಗಿಗಳು ವೇತನ ಏರಿಕೆ, ಬಡ್ತಿಗಾಗಿ ಎದುರು ನೋಡುತ್ತಾರೆ. ಈ ಸಮಯದಲ್ಲಿ ನೀವು ಒಂದಷ್ಟು ಸೂಕ್ಷ್ಮ ವಿಷಯಗಳನ್ನು ಗಮನಿಸಬೇಕು.

First published:

  • 18

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    ಆಫೀಸ್ ನಲ್ಲಿ ಕೆಲವು ಬದಲಾವಣೆಗಳು ಕಂಡು ಬಂದರೆ ನಿಮಗೆ ಶೀಘ್ರವೇ ಪ್ರಮೋಷನ್ ಸಿಗಲಿದೆ ಎಂದು ಅರ್ಥ. ಆದರೆ ಬಹುತೇಕರು ಈ ಸೂಚನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನೀವು ಆ ತಪ್ಪನ್ನು ಮಾಡಬೇಡಿ. ಬದಲಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳುವುದು ಒಳ್ಳೆಯದು.

    MORE
    GALLERIES

  • 28

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    1. ಆಫೀಸ್ ನ ಹೆಚ್ಚಿನ ಮೀಟಿಂಗ್ ಗಳಿಗೆ ನಿಮ್ಮನ್ನು ಕರೆಯಲಾಗುತ್ತದೆ. ಇತರೆ ಉದ್ಯೋಗಿಗಳಿಗಿಂತ ನಿಮ್ಮನ್ನು ಹೆಚ್ಚಾಗಿ ಮೀಟಿಂಗ್ ಗಳಿಗೆ ಕರೆಯುತ್ತಿದ್ದರೆ, ಪ್ರಮೋಷನ್ ಲಿಸ್ಟ್ ನಲ್ಲಿ ನೀವು ಇದ್ದೀರಾ ಎಂದು ಅರ್ಥ. ನಿಮ್ಮನ್ನು, ನಿಮ್ಮ ಕೆಲಸವನ್ನು ಕಂಪನಿ ಮತ್ತಷ್ಟು ಗಂಭೀರವಾಗಿ ಪರಿಗಣಿಸುತ್ತಿರುತ್ತದೆ.

    MORE
    GALLERIES

  • 38

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    2. ಹೆಚ್ಚಿನ ಜವಾಬ್ದಾರಿಯನ್ನು ನಿಮಗೆ ನೀಡುತ್ತಾರೆ. ಹೆಚ್ಚಿನ ಕೆಲಸಗಳು ನಿಮ್ಮ ಟೇಬಲ್ ಗೆ ಬರುತ್ತವೆ. ಇದನ್ನು ನೀವು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ದೊಡ್ಡ ಹುದ್ದೆಗೆ, ದೊಡ್ಡ ಜವಾಬ್ದಾರಿಗೆ ನಿಮ್ಮನ್ನು ಕಂಪನಿಯವರು ಸಿದ್ಧಗೊಳಿಸುವ ಪ್ರಕ್ರಿಯೆ ಇದಾಗಿದೆ.

    MORE
    GALLERIES

  • 48

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    3. ಹೊಸ ಉದ್ಯೋಗಿ ಅಥವಾ ಇಂಟರ್ನಿಯನ್ನು ನಿಮ್ಮ ಅಂಡರ್ ಬಿಡುತ್ತಾರೆ. ನೀವು ನಿಮ್ಮ ಕೆಲಸದಲ್ಲಿ ಎಕ್ಸ್ ಪರ್ಟ್ ಆಗಿದ್ದು, ಹೊಸಬರಿಗೆ ಕಲಿಸುವಷ್ಟು ಜ್ಞಾನ ಇರುತ್ತದೆ. ಆದ್ದರಿಂದ ಜೂನಿಯರ್ಸ್ ಅನ್ನು ನಿಮ್ಮ ಕೆಳಗೆ ಅಥವಾ ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಮಾಡಲು ಬಿಡುತ್ತಾರೆ.

    MORE
    GALLERIES

  • 58

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    4. ಇಮೇಲ್, ಆಫೀಸ್ ಗ್ರೂಪ್ ಗಳಲ್ಲಿ, ಮೀಟಿಂಗ್ ಗಳಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತದೆ. ಮಹತ್ವದ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಕೇಳಲಾಗುತ್ತದೆ.

    MORE
    GALLERIES

  • 68

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    5. ಕಂಪನಿಯೊಳಗೆ ಉನ್ನತ ಹುದ್ದೆ ಖಾಲಿ ಇದ್ದರೆ ನಿಮ್ಮನ್ನು ರೆಫರ್ ಮಾಡಲಾಗುತ್ತದೆ. ಪರ್ಫಾಮೆನ್ಸ್ ಆಧಾರದ ಮೇಲೆ ಖಾಲಿ ಇರುವ ದೊಡ್ಡ ಹುದ್ದೆಯನ್ನು ನಿಮಗೆ ನೀಡಲು ಶಿಫಾರಸು ಮಾಡಲಾಗುವುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 78

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    6 ದೊಡ್ಡ ಅಧಿಕಾರಿಗಳು ಕಾಫಿ ಬ್ರೇಕ್, ಲಂಚ್ ಗಾಗಿ ನಿಮ್ಮನ್ನು ಆಹ್ವಾನಿಸುತ್ತಾರೆ. ಕೆಲಸದ ಬಗ್ಗೆ ನಿಮ್ಮೊಂದಿಗೆ ಚರ್ಚೆ ಮಾಡಲು ಆರಂಭಿಸುತ್ತಾರೆ.

    MORE
    GALLERIES

  • 88

    Career Tips: ಆಫೀಸ್​​ನಲ್ಲಿ ಈ ಬದಲಾವಣೆಗಳು ಕಂಡರೆ, ಶೀಘ್ರವೇ ನಿಮಗೆ ಪ್ರಮೋಷನ್ ಸಿಗಲಿದೆ ಎಂದು ಅರ್ಥ

    ನಿಮಗೆ ಹೆಚ್ಚಿನ ಕೆಲಸ ಕೊಡುವುದು. ನಿಮಗೆ ರಜೆ ನೀಡಲು ಹಿಂದೇಟು ಹಾಕುವುದನ್ನು ನೀವು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ನನ್ನ ಅಗತ್ಯ ಸಂಸ್ಥೆಗೆ ಹೆಚ್ಚಿದೆ ಎಂದು ಅರಿತು ಆ ನಿಟ್ಟಿನಲ್ಲಿ ನಡೆದುಕೊಂಡರೆ ನಿಮಗೇ ಲಾಭ. (ಪ್ರಾತಿನಿಧಿಕ ಚಿತ್ರ)

    MORE
    GALLERIES