Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

ಡಾಕ್ಟರ್-ಇಂಜಿನಿಯರ್ ಅಥವಾ 3-4 ವರ್ಷಗಳ ಡಿಗ್ರಿ ಬದಲು ಯುವ ಜನತೆ ಆಫ್ ಬೀಟ್ ವೃತ್ತಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಸರಿಯಾದ ಆಯ್ಕೆ ಎಂಬುವುದು ಸಾಬೀತಾಗುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಯುವಕರು ಸೆಕೆಂಡ್ ಪಿಯು ಬಳಿಕ ಅಲ್ಪಾವಧಿಯ ಕೋರ್ಸ್ ಗಳನ್ನು ಮಾಡಿ ಲಕ್ಷಗಳಲ್ಲಿ ಸಂಪಾದಿಸುತ್ತಾರೆ.

First published:

  • 17

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಈ ಯಶಸ್ಸನ್ನು ಕಂಡ ವಿದ್ಯಾರ್ಥಿಗಳು ಸೆಕೆಂಡ್ ಪಿಯು ಪರೀಕ್ಷೆಗಳು ಮುಗಿದ ನಂತರ ವಿವಿಧ ಕೋರ್ಸ್ ಗಳ ಬಗ್ಗೆ ಮಾಹಿತಿ ಪಡೆದಯಕೊಳ್ಳುತ್ತಿದ್ದಾರೆ. ಉನ್ನತ ಶಿಕ್ಷಣವನ್ನು ಮುಂದುವರಿಸುವ ಬದಲು, ಅನೇಕ ವಿದ್ಯಾರ್ಥಿಗಳು ಅಂತಹ ಕೋರ್ಸ್ ಗಳತ್ತ ಗಮನ ಹರಿಸುತ್ತಾರೆ. ಈ ಹಾದಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಬಳದ ಉದ್ಯೋಗಗಳನ್ನು ಪಡೆಯುತ್ತಾರೆ.

    MORE
    GALLERIES

  • 27

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಅನೇಕ ಅಲ್ಪಾವಧಿ ಕೋರ್ಸ್ಗಳಿವೆ. ಅವುಗಳ ಮೂಲಕ ಅಭ್ಯರ್ಥಿಗಳು ಸುಲಭವಾಗಿ ಉದ್ಯೋಗಗಳನ್ನು ಪಡೆಯುತ್ತಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ಕೆಲವು ಅಲ್ಪಾವಧಿಯ ಕೋರ್ಸ್ಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

    MORE
    GALLERIES

  • 37

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಡಿಜಿಟಲ್ ಮಾರ್ಕೆಟಿಂಗ್: ಇಂದಿನ ಯುಗ ಡಿಜಿಟಲ್ ಮಾರ್ಕೆಟಿಂಗ್ ಯುಗವಾಗಿದೆ. ಹೀಗಾಗಿ ಈ ಕೋರ್ಸ್ಗೆ ಬೇಡಿಕೆ ಹೆಚ್ಚುತ್ತಿದೆ. ಎಲ್ಲಾ ರೀತಿಯ ವ್ಯಾಪಾರ ಮಾಡುವ ಕಂಪನಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ನಿಪುಣರು ಬೇಕಾಗಿದ್ದಾರೆ.

    MORE
    GALLERIES

  • 47

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಈ ಕೋರ್ಸ್ ಗಳು 6 ತಿಂಗಳಿಂದ ಒಂದು ವರ್ಷದ ಅವಧಿಯದ್ದಾಗಿದೆ. ಅಭ್ಯರ್ಥಿಗಳು ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಕೋರ್ಸ್ಗಳನ್ನು 25 ಸಾವಿರ ರೂಪಾಯಿ ಒಳಗೆ ಪೂರ್ಣಗೊಳಿಸಬಹುದು. ನೀವು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಈ ಕೋರ್ಸ್ ಮಾಡಬಹುದು.

    MORE
    GALLERIES

  • 57

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಕೃಷಿಯಲ್ಲಿ ಡಿಪ್ಲೊಮಾ: ನಿಮಗೆ ಕೃಷಿಯಲ್ಲಿ ಆಸಕ್ತಿ ಇದ್ದರೆ, ಈ ಕ್ಷೇತ್ರದಲ್ಲಿ ನಿಮ್ಮ ವೃತ್ತಿಯನ್ನು ಮಾಡಬಹುದು. ಕೃಷಿಯಲ್ಲಿ ಹಲವು ರೀತಿಯ ಡಿಪ್ಲೊಮಾ ಮತ್ತು ಅಲ್ಪಾವಧಿ ಕೋರ್ಸ್ ಗಳಿವೆ. ಜೆನೆಟಿಕ್ಸ್, ಭೂ ವಿಜ್ಞಾನ, ಹೈನುಗಾರಿಕೆ, ತೋಟಗಾರಿಕೆ, ಕೃಷಿ ಹೀಗೆ ಹಲವು ರೀತಿಯ ಕೋರ್ಸ್ ಗಳಲ್ಲಿ ಡಿಪ್ಲೊಮಾ ಮಾಡುವುದರಿಂದ ಉತ್ತಮ ಉದ್ಯೋಗ ಪಡೆಯಬಹುದು.

    MORE
    GALLERIES

  • 67

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಆನ್ಲೈನ್ ಗ್ರಾಫಿಕ್ ಡಿಸೈನ್: ಆನ್ಲೈನ್ ಗ್ರಾಫಿಕ್ ಡಿಸೈನರ್ ಗಳನ್ನು ವಿವಿಧ ಕಂಪನಿಗಳು ನೇಮಿಸಿಕೊಳ್ಳುತ್ತಿವೆ. ನಿಯತಕಾಲಿಕೆಗಳು ಮತ್ತು ಬ್ರೋಷರ್ ಗಳಿಗಾಗಿ ಪೋಸ್ಟರ್ ಗಳು, ಇನ್ಫೋಗ್ರಾಫಿಕ್ಸ್, ಲೋಗೋಗಳು ಮತ್ತು ಲೇಔಟ್ಗಳನ್ನು ರಚಿಸಲು ಉದ್ಯೋಗಿಗಳು ಬೇಕಾಗಿದ್ದಾರೆ. ಈ ಕೆಲಸಕ್ಕೆ ನೀವು ಅಡೋಬ್ ಫೋಟೋಶಾಪ್, ಅಡೋಬ್ ಇಲ್ಲಸ್ಟ್ರೇಟರ್, ಕ್ಯಾನ್ವಾ ಮತ್ತು ಕೋರೆಲ್ ಡ್ರಾ ಮುಂತಾದ ವಿವಿಧ ಪರಿಕರಗಳಲ್ಲಿ ಜ್ಞಾನವನ್ನು ಹೊಂದಿರಬೇಕು.

    MORE
    GALLERIES

  • 77

    Career Tips: ಸೆಕೆಂಡ್ PU ಬಳಿಕ ಈ ಅಲ್ಪಾವಧಿಯ ಕೋರ್ಸ್​ಗಳನ್ನು ಮಾಡಿದ್ರೆ ಸಾಕು, ಲಕ್ಷಗಳಲ್ಲಿ ಸಂಬಳ ಸಿಗುತ್ತೆ

    ಸೋಷಿಯಲ್ ಮೀಡಿಯಾ ಹ್ಯಾಂಡಲ್: ಸಾಮಾಜಿಕ ಮಾಧ್ಯಮವು ಬ್ರ್ಯಾಂಡ್ ಇಮೇಜ್ ನಿರ್ಮಾಣದ ಅಂಗವಾಗಿದೆ. ಪ್ರತಿ ಕಂಪನಿ, ಸೆಲೆಬ್ರಿಟಿ ಮತ್ತು ಸಾರ್ವಜನಿಕ ವ್ಯಕ್ತಿಗಳು ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳುತ್ತಾರೆ. ನೀವು ಸಾಮಾಜಿಕ ಮಾಧ್ಯಮ ನಿರ್ವಾಹಕರಾಗಲು ಬಯಸಿದರೆ, ನೀವು Udemy, Coursera ಮತ್ತು Harvard edX ನಲ್ಲಿ ಆನ್ಲೈನ್ ಕೋರ್ಸ್ ಗಳನ್ನು ಮಾಡಬಹುದು.

    MORE
    GALLERIES