Interview Tips-4: ಇಂಟರ್ವ್ಯೂ ಕೊನೆಯಲ್ಲಿ ಇದೊಂದು ವಾಕ್ಯ ಹೇಳಿದ್ರೆ, ಕೆಲಸ ಸಿಗುವ ಸಾಧ್ಯತೆ ಹೆಚ್ಚು
ನಮಗೆ ಅಗತ್ಯವಿರುವ ಕೆಲಸ ಇರಲಿ, ಕನಸಿನ ಕೆಲಸವೇ ಆಗಿರಲಿ. ಬೇಕಾದ ಉದ್ಯೋಗ ಪಡೆಯಲು ಜಾಬ್ ಇಂಟರ್ ವ್ಯೂ ಅಟೆಂಡ್ ಮಾಡಲೇಬೇಕು. ಇಂಟರ್ ವ್ಯೂ ಅನ್ನು ಸಂದರ್ಶಕರು ಆರಂಭಿಸಿದರೆ, ನೀವು ಒಳ್ಳೆಯ ರೀತಿಯಲ್ಲಿ ಕೊನೆಗೊಳಿಸಬೇಕು ಎಂಬುವುದನ್ನು ಮರೆಯಬೇಡಿ.
ಪ್ರತಿಯೊಂದು ಆರಂಭಕ್ಕೂ ಒಂದೊಳ್ಳೆ ಅಂತ್ಯ ಇರಬೇಕು. ಅದೇ ರೀತಿ ಕೆಲಸಕ್ಕಾಗಿ ನಡೆಯುವ ಸಂದರ್ಶನಕ್ಕೂ ವೃತ್ತಿಪರವಾದ ಕೊನೆ ಇರಬೇಕು. ಉದ್ಯೋಗಾಕಾಂಕ್ಷಿಗಳು ಇಂಟರ್ ವ್ಯೂ ಕೊನೆಯಲ್ಲಿ ಏನು ಮಾಡಬೇಕು ಎಂದು ಅರಿತರೆ, ಆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚು. (ಸಾಂಕೇತಿಕ ಚಿತ್ರ)
2/ 7
ಹೌದು, ನೀವು ಸಂದರ್ಶನ ಕೊನೆಯಾದ ಬಳಿಕ ಸಿಂಪಲ್ ಆಗಿ ಹೇಳುವ ಒಂದು ವಾಕ್ಯ ನಿಮ್ಮ ಮೇಲಿನ ಅಭಿಪ್ರಾಯವನ್ನೇ ಬದಲಿಸಿಬಿಡಬಹುದು. ಈ ರಹಸ್ಯ ಬಹುತೇಕರಿಗೆ ಗೊತ್ತಿಲ್ಲ. ಇದನ್ನು ತಿಳಿದು, ಬಳಸುವ ಮೂಲಕ ನೀವು ಸಂದರ್ಶಕರ ನೆನಪಿನಲ್ಲಿ ಉಳಿಯಬಹುದು.
3/ 7
ಬಹುತೇಕ ಜಾಬ್ ಇಂಟರ್ ವ್ಯೂಗಳನ್ನು ಸಂದರ್ಶಕರು ಕೊನೆಗೊಳಿಸುತ್ತಾರೆ. ಓಕೆ, HR ನಿಮಗೆ ತಿಳಿಸುತ್ತಾರೆ ಥ್ಯಾಂಕ್ಯೂ ಎಂದೇಳುತ್ತಾರೆ. ಕೂಡಲೇ ನೀವು ಪ್ರತಿಯಾಗಿ ಥ್ಯಾಂಕ್ಯೂ ಹೇಳಿ ಹೊರಟು ಬಿಡಬಾರದು.
4/ 7
ಯಾವುದೇ ಅವಸರ ಮಾಡದೇ ನಗು ಮುಖದಲ್ಲಿ ಎದ್ದು ಸಂದರ್ಶಕರಿಗೆ ಶೇಕ್ ಹ್ಯಾಂಡ್ ಕೊಡಿ. ನಿಮ್ಮ ಕೈ ಹಿಡಿತ ಆತ್ಮವಿಶ್ವಾಸದಿಂದ ಕೂಡಿರಲಿ. ಕಣ್ಣಿನ ಸಂಪರ್ಕ ನೇರವಾಗಿರಲಿ. ಎಲ್ಲೋ ನೋಡಿಕೊಂಡು ಥ್ಯಾಂಕ್ಯೂ ಹೇಳುವುದು, ಕೈಕುಲುಕುವುದು ಮಾಡಬೇಡಿ.
5/ 7
ಥ್ಯಾಂಕ್ಯೂ ಜೊತೆ ಈ ಒಂದು ವಾಕ್ಯ ಹೇಳುವುದನ್ನು ಮರೆಯಬೇಡಿ. ಅದುವೇ, ಥ್ಯಾಂಕ್ಯೂ ಫರ್ ಯುವರ್ ಟೈಮ್. ಎಸ್ ನನಗಾಗಿ ನೀವು ನಿಮ್ಮ ಸಮಯವನ್ನು ವ್ಯಯಿಸಿದ್ದಕ್ಕೆ ಧನ್ಯವಾದ ಎಂದು ಹೇಳುವುದು ನಿಜಕ್ಕೂ ಸಂದರ್ಶಕರನ್ನು ಇಂಪ್ರೆಸ್ ಮಾಡುತ್ತೆ.
6/ 7
ಇದರಿಂದ ಕೆಲಸಗಾರನಾಗಿ ಸಮಯದ ಮೇಲೆ ಎಷ್ಟು ಗೌರವ ಇದೆ. ತಮ್ಮ ಸಮಯ ಮಾತ್ರವಲ್ಲ, ಇತರರ ಸಮಯಕ್ಕೂ ಹೇಗೆ ಬೆಲೆ ನೀಡಬೇಕು ಎಂಬುವುದನ್ನು ಅಭ್ಯರ್ಥಿ ಅರಿತಿದ್ದಾರೆ ಎಂಬುವುದು ಸಂದರ್ಶಕರಿಗೆ ಮನವರಿಕೆ ಆಗುತ್ತದೆ.
7/ 7
Thank you for your TIME sir/madam ಎಂದು ಹೇಳುವುದು ಇಡೀ ಇಂಟರ್ ವ್ಯೂ ಅನ್ನೇ ಬದಲಿಸಿ ಬಿಡುತ್ತೆ. ಜೊತೆಗೆ ಒಂದೊಳ್ಳೆ ನೋಟ್ ನೊಂದಿಗೆ ಸಂದರ್ಶನವನ್ನು ಮುಗಿಸಿದಂತೆ ಆಗುತ್ತದೆ. ಅಭ್ಯರ್ಥಿಯ ಈ ವಿಧೇಯತೆ ಸಂದರ್ಶಕರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತೆ.