Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

ಯಾವುದೇ ಉದ್ಯೋಗದ ಬಹು ಮುಖ್ಯ ಭಾಗ ಸ್ಯಾಲರಿ. ವೇತನದ ವಿಚಾರವಾಗಿ ಅಭ್ಯರ್ಥಿ ಜಾಬ್ ಆಫರ್ ಅನ್ನು ಸ್ವೀಕರಿಸಬಹುದು, ರಿಜೆಕ್ಟ್ ಕೂಡ ಮಾಡಬಹುದು. ಕಂಪನಿಯವರು ಸಹ ಒಬ್ಬ ಅಭ್ಯರ್ಥಿಯನ್ನು ಸಂಬಳದ ವಿಚಾರಕ್ಕೆ ಆಯ್ಕೆ ಮಾಡಬಹುದು, ತಿರಸ್ಕರಿಸಲೂಬಹುದು.

First published:

  • 17

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ಜಾಬ್ ಇಂಟರ್ ವ್ಯೂ ನಿಮ್ಮನ್ನು ಎದುರುಗೊಳ್ಳುವ ಪ್ರಶ್ನೆಯೇ ಎಷ್ಟು ಸಂಬಳ ನಿರೀಕ್ಷಿಸುತ್ತೀರಿ ಎಂದು. ಈ ಪ್ರಶ್ನೆಗೆ ಸರಿಯಾಗಿ ಯೋಚಿಸಿ ಉತ್ತರಿಸುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ಸಂಬಳದ ವಿಚಾರದಲ್ಲಿ ನಿಮಗೆ ಜಿಗುಪ್ಸೆ ಬರಬಹುದು. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ಸ್ಯಾಲರಿ ನೆಗೋಸಿಯೇಷನ್ ವೇಳೆ ನಿರ್ದಿಷ್ಟವಾಗಿ ಇಷ್ಟೇ ಸಾವಿರ ಅಥವಾ ವಾರ್ಷಿಯ ಪ್ಯಾಕೇಜ್ ಬೇಕು ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ಉದಾಹರಣೆಗೆ ನನಗೆ ಹಿಂದಿನ ಕಂಪನಿಯಲ್ಲಿ 50 ಸಾವಿರ ಸಂಬಳ ಇತ್ತು, ಈಗ 70 ಸಾವಿರ ಸಿಕ್ಕರೆ ಚೆನ್ನಾಗಿರುತ್ತೆ ಎಂದು ಉತ್ತರಿಸಲು ಹೋಗಲೇಬೇಡಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ನಿರ್ದಿಷ್ಟವಾದ ನಂಬರ್ ಹೇಳುವುದರಿಂದ ನಿಮಗೇ ನಷ್ಟವಾಗುತ್ತೆ. ಇದರ ಬದಲು ಜಾಬ್ ಮಾರ್ಕೆಟ್ ವ್ಯಾಲ್ಯೂ, ಕಂಪನಿಯಲ್ಲಿ ನಿಮ್ಮನ್ನು ನೇಮಿಸಿಕೊಳ್ಳುತ್ತಿರುವ ಹುದ್ದೆಗೆ ಇರುವ ಬಜೆಟ್ ಬಗ್ಗೆ ತಿಳಿದುಕೊಳ್ಳಿ. ನೀವು ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಕಂಪನಿಯ CTC ವಿಧಾನವನ್ನು ಅರಿತುಕೊಂಡು ಇಂಟರ್ ವ್ಯೂಗೆ ಹೋಗಿ.

    MORE
    GALLERIES

  • 47

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ನೀವು ನಿರೀಕ್ಷಿಸುವ ಸಂಬಳದ ಬಗ್ಗೆ ದೃಢವಾಗಿರಿ. ಮೊದಲು ಜಾಸ್ತಿ ಸಂಬಳ ಕೇಳಿ ಮಾತುಕತೆಯ ನಂತರ ಕೊಂಚ ಕಡಿಮೆಗೆ ಒಪ್ಪಿಕೊಳ್ಳೋಣ ಎಂಬ ಚೌಕಾಸಿ ಮಾದರಿಯನ್ನು ಅನುಸರಿಸಬೇಡಿ. ನೀವು ಕೇಳುವ ಸಂಬಳ ಅಂತಿಮ ಹಾಗೂ ಸೂಕ್ತ ಎನಿಸುವಂತೆ ನೋಡಿಕೊಳ್ಳಿ. ಹಿಂದಿನ ಸಂಬಳದ ಮೇಲೆ ಶೇ.30ರಷ್ಟು ಮಾತ್ರ ಹೈಕ್ ಕೇಳಬೇಕು ಎಂಬ ನಿಯಮವನ್ನೂ ಪಾಲಿಸಬೇಡಿ.

    MORE
    GALLERIES

  • 57

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ಕಂಪನಿ ಆಫರ್ ಮಾಡುತ್ತಿರುವ ಪ್ಯಾಕೇಜ್ ನಿಮಗೆ ಇಷ್ಟವಾಗದಿದ್ದರೆ, ಜಾಯ್ನಿಂಗ್ ಬೋನಸ್ ಕೇಳಿ. ಕೆಲಸಕ್ಕಾಗಿ ಬೇರೆ ನಗರಕ್ಕೆ ಶಿಫ್ಟ್ ಆಗುತ್ತಿದ್ದರೆ ರಿಲೋಕೇಷನ್ ಮೊತ್ತವನ್ನೂ ಸಹ ಕೇಳಿ ಪಡೆಯಬಹುದು. ಇದರಿಂದ ನಿಮಗೆ ಸಿಗುವ ಹಣದ ಮೊತ್ತ ದೊಡ್ಡಾಗುತ್ತದೆ.

    MORE
    GALLERIES

  • 67

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ನೀವು ಕಂಪನಿಯ ಬಗ್ಗೆ ತಿಳಿದಿದ್ದರೆ, ನಿಮ್ಮ ಪ್ರೊಫೈಲ್ ಬಗ್ಗೆ ತಿಳಿದಿದ್ದರೆ ಸಂಬಳದ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ವೇತನದ ಜೊತೆಗೆ ಪಿಎಫ್, ಇನ್ಶುರೆನ್ಸ್ ಪಾಲಸಿಗಳ ಬಗ್ಗೆಯೂ ಚರ್ಚಿಸಿ. ಹಿಂದಿನ ಕಂಪನಿಗಿಂತ ಒಳ್ಳೆಯ ಸೌಲಭ್ಯಗಳಿವೆ ಎಂದಾದರೆ ಮುಂದುವರೆಯಿರಿ.

    MORE
    GALLERIES

  • 77

    Salary Negotiation: ಎಚ್ಆರ್ ಬಳಿ ವೇತನದ ಬಗ್ಗೆ ಈ ರೀತಿ ಮಾಡಿದ್ರೆ ದೊಡ್ಡ ಪ್ಯಾಕೇಜ್ ಸಿಗೋದು ಗ್ಯಾರೆಂಟಿ

    ಜಾಬ್ ಇಂಟರ್ ವ್ಯೂ ನಲ್ಲೇ ವೇತನದ ಮಾತುಕತೆ ನಡೆಯುತ್ತೆ ಎಂಬ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ. ನಾನು ಸ್ಯಾಲರಿ ಬಗ್ಗೆ ಮಾತನಾಡಲು ತಯಾರಿಲ್ಲ. ಕೊಂಚ ಸಮಯದ ನಂತರ ಮಾತನಾಡಬಹುದೇ ಎಂದು ಕಾಲಾವಕಾಶ ಪಡೆಯಿರಿ. ರಿಸರ್ಚ್ ಮಾಡಿ ನಂತರ ಸ್ಯಾಲರಿ ನೆಗೋಸಿಯೇಷನ್ ಗೆ ಕುಳಿತುಕೊಳ್ಳಿ.

    MORE
    GALLERIES