Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು ಶೇಕಡಾ 55ರಷ್ಟಿದೆ. ದೇಶದ ಸುಮಾರು 70 ಪ್ರತಿಶತ ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.75ರಷ್ಟು ಹೊಸ ಕಾರ್ಖಾನೆಗಳನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಉನ್ನತಿಗಾಗಿ ಕೇಂದ್ರ ಸರ್ಕಾರ ರೂಲರ್ ಮ್ಯಾನೇಜ್ ಮೆಂಟ್ ಕೋರ್ಸ್ ಆರಂಭಿಸಿದೆ.

First published:

  • 18

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಗ್ರಾಮೀಣಾಭಿವೃದ್ಧಿ ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಯೋಜನೆ, ನಿರ್ದೇಶನ, ಹಣಕಾಸು ಸಂಸ್ಥೆಗಳ ನಿಯಂತ್ರಣ, ಸಹಕಾರಿ ಕೃಷಿ ವ್ಯವಹಾರ ಮತ್ತು ಸಂಬಂಧಿತ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಬಹುತೇಕ ಎಲ್ಲಾ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ರೂರಲ್ ಮ್ಯಾನೇಜ್ ಮೆಂಟ್ ಕೋರ್ಸ್ ಲಭ್ಯವಿದೆ. ಸೆಕೆಂಡ್ ಪಿಯು ಬಳಿಕ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಪ್ರಕಾರ ಪದವಿ ಮತ್ತು ಡಿಪ್ಲೊಮಾ ಕೋರ್ಸ್ ಗಳನ್ನು ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ನಂತರ ಮಾಸ್ಟರ್ ಆಫ್ ರೂರಲ್ ಮ್ಯಾನೇಜ್ ಮೆಂಟ್, ಗ್ರಾಮೀಣ ಅಭಿವೃದ್ಧಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪ್ರೋಗ್ರಾಂ, ರೂರಲ್ ಮ್ಯಾನೇಜ್ ಮೆಂಟ್ನಲ್ಲಿ ಎಂಬಿ ಮತ್ತು ಗ್ರಾಮೀಣ ಮಾರ್ಕೆಟಿಂಗ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ ಕೋರ್ಸ್ಗಳಾಗಿ ಜನಪ್ರಿಯವಾಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಈ ಕೋರ್ಸ್ಗಳನ್ನು ಮಾಡಲು ಹಲವು ಕೌಶಲ್ಯಗಳನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಇಚ್ಛೆ ಮತ್ತು ತಿಳುವಳಿಕೆ ಇರಬೇಕು. ಸಂಭಾಷಣೆಯ ಕಲೆ, ಸ್ಥಳೀಯ ಪದ್ಧತಿಗಳ ಬಗ್ಗೆ ಸೂಕ್ಷ್ಮತೆಯನ್ನು ಹೊಂದಿರಬೇಕು. ಪ್ರಾತಿನಿಧಿಕ ಚಿತ್ರ

    MORE
    GALLERIES

  • 58

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಈ ಕೋರ್ಸ್ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಅನೇಕ ವೃತ್ತಿ ಅವಕಾಶಗಳನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ನೀತಿ ನಿರೂಪಕ, ವಿಶ್ಲೇಷಕ, ವ್ಯವಸ್ಥಾಪಕ, ಸಂಶೋಧಕ, ಸಲಹೆಗಾರ ಇತ್ಯಾದಿಯಾಗಿ ಕೆಲಸ ಮಾಡಲು ಅವಕಾಶವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಶಿಕ್ಷಣ, ಮಾನವ ಸಂಪನ್ಮೂಲ, ಮಾರುಕಟ್ಟೆ, ಸಾಮಾನ್ಯ ನಿರ್ವಹಣೆ, ಯೋಜನೆಯ ಅನುಷ್ಠಾನದಲ್ಲಿ ಕೆಲಸ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಬ್ಯಾಂಕ್ ಗಳು ಈ ಕ್ಷೇತ್ರದಲ್ಲಿ ಪರಿಣಿತರನ್ನು ವ್ಯವಸ್ಥಾಪಕರನ್ನಾಗಿ ನೇಮಿಸುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಇದಲ್ಲದೇ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಎನ್ ಜಿಒಗಳ ಸಹಯೋಗದಲ್ಲಿ ಗ್ರಾಮದಲ್ಲಿ ಕೆಲಸ ಮಾಡಲು ಅವಕಾಶವಿದೆ. ಅನೇಕ ಸ್ವಯಂಸೇವಾ ಸಂಸ್ಥೆಗಳು ಅಂತಹವರನ್ನು ಗ್ರಾಮ ವ್ಯವಸ್ಥಾಪಕರನ್ನಾಗಿಯೂ ನೇಮಿಸುತ್ತವೆ. ಇದಲ್ಲದೆ, ನೀವು ಬಯಸಿದರೆ, ನಿಮ್ಮದೇ ಒಂದು NGO ಅನ್ನು ಸಹ ತೆರೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Rural Management: ಗ್ರಾಮೀಣ ಭಾಗದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಈ ಕೋರ್ಸ್ ಮಾಡಿ

    ಕೋರ್ಸ್ ಮುಗಿದ ನಂತರ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಆರಂಭಿಕ ವಾರ್ಷಿಕ ಪ್ಯಾಕೇಜ್ ಪಡೆಯಬಹುದು. ಮತ್ತೊಂದೆಡೆ, ನೀವು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಕೋರ್ಸ್ ಮಾಡಿದ್ದರೆ, ಈ ಸಂಬಳವು ಎಂಟರಿಂದ 10 ಲಕ್ಷ ರೂಪಾಯಿಗಳವರೆಗೆ ಇರಲಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ವೇತನವು ವೇತನ ಶ್ರೇಣಿಗೆ ಅನುಗುಣವಾಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES