ಹೊಸದಾಗಿ ಆಯ್ಕೆಯಾದವರು ರೈಲು ಮ್ಯಾನೇಜರ್, ಸ್ಟೇಷನ್ ಮಾಸ್ಟರ್, ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಇನ್ಸ್ ಪೆಕ್ಟರ್, ಸಬ್-ಇನ್ಸ್ಪೆಕ್ಟರ್, ಕಾನ್ಸ್ ಟೇಬಲ್, ಸ್ಟೆನೋಗ್ರಾಫರ್, ಜೂನಿಯರ್ ಅಕೌಂಟೆಂಟ್, ಪೋಸ್ಟಲ್ ಅಸಿಸ್ಟೆಂಟ್, ಆದಾಯ ತೆರಿಗೆ ಇನ್ಸ್ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್, ಸೀನಿಯರ್ ಡ್ರಾಫ್ಟ್ಮನ್, ಜೆಇ/ಸೂಪರ್ವೈಸರ್, ಅಸಿಸ್ಟೆಂಟ್ ದೇಶವು ಪ್ರೊಫೆಸರ್, ಟೀಚರ್, ಲೈಬ್ರರಿಯನ್, ನರ್ಸ್, ಪ್ರೊಬೇಷನರಿ ಆಫೀಸರ್, ಪಿಎ, ಎಂಟಿಎಸ್ ನಂತಹ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾರೆ
ನಾಳೆ ನೇಮಕಾತಿ ಪತ್ರ ಪಡೆದ ಯುವಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. "ಉದ್ಯೋಗ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ" ಎಂದು ಮಂಗಳವಾರ ಪ್ರಧಾನಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.