Resume Tips-1: ನಿಮ್ಮ ರೆಸ್ಯೂಮ್ನಲ್ಲಿ ಈ ಎಲ್ಲಾ ಮಾಹಿತಿಗಳು ಇವೆಯೇ ಒಮ್ಮೆ ಚೆಕ್ ಮಾಡಿ
Resume Tips in Kannada: ಯಾವುದೇ ಕೆಲಸ ಹುಡುಕಲು ರೆಸ್ಯೂಮ್ ಅಥವಾ CV ತುಂಬಾನೇ ಮುಖ್ಯ. ನಿಮಗೆ ಬೇಕಾದ ಜಾಬ್ ಸಿಗಲು ಮಾಡಬೇಕಾದ ಮೊದಲ ಕೆಲಸವೇ ರೆಸ್ಯೂಮ್ ಕಳುಹಿಸುವುದು. ಕಂಪನಿ ಹಾಗೂ ಉದ್ಯೋಗಾಕಾಂಕ್ಷಿಯ ಮಧ್ಯೆ ನಡೆಯುವ ಮೊದಲ ಸಂವಹನ ಸಾಧನವೇ ರೆಸ್ಯೂಮ್.
ನೀವು ಫ್ರೆಶರ್ ಆಗಿದ್ದು ಈಗಷ್ಟೇ ಕೆಲಸ ಹುಡುಕುತ್ತಿರಲಿ ಅಥವಾ ಅನುಭವಸ್ಥರಾಗಿ ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರಲಿ. ರೆಸ್ಯೂಮ್ ಅನ್ನು ಆಕರ್ಷಕವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ರೆಸ್ಯೂಮ್ ಹೇಗಿರಬೇಕು, ರೆಸ್ಯೂಮ್ ಅಲ್ಲಿ ನಿಮ್ಮ ಬಗ್ಗೆ ಯಾವೆಲ್ಲಾ ಮಾಹಿತಿಗಳಿರಬೇಕು ಎಂದು ಇಲ್ಲಿ ತಿಳಿಯಿರಿ.
2/ 7
ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯ ರೆಸ್ಯೂಮ್ ನಲ್ಲಿ ಇರಬೇಕಾದ ಪ್ರಮುಖ ವಿಷಯವೆಂದರೆ ನಿಮ್ಮ ಬಗೆಗಿನ ವೈಯಕ್ತಿಕ ವಿಷಯಗಳು. ಹೆಸರು, ತಂದೆಯ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಇಮೇಲ್ ಐಡಿ ಕಡ್ಡಾಯವಾಗಿ ಇರಲೇಬೇಕು.
3/ 7
2ನೇ ಪ್ರಮುಖ ವಿಷಯವೆಂದರೆ ಎಲ್ಲಿ ಶಿಕ್ಷಣ ಮಾಡಿದ್ದೀರಿ ಎಂಬ ಮಾಹಿತಿ. ವೃತ್ತಿಪರ ಶಿಕ್ಷಣ, ಎಲ್ಲಿ ಸಂಶೋಧನೆ ಮಾಡಲಾಗಿದೆ ಎಂಬುವುದನ್ನು ಖಂಡಿತವಾಗಿ ನಮೂದಿಸಿ. ಪದವಿಯ ಎಲ್ಲಾ ಮಾಹಿತಿಯನ್ನು ವಿವರವಾಗಿ ಬರೆಯಿರಿ.
4/ 7
ನೀವು ಕೆಲಸದ ಅನುಭವವನ್ನು ಹೊಂದಿದ್ದರೆ, ಖಂಡಿತವಾಗಿಯೂ ಅದರ ಮಾಹಿತಿಯನ್ನು ನೀಡಿ. ನೀವು ಏನು ಮಾಡಬಹುದು ಅಥವಾ ನಿಮ್ಮ ವಿಶೇಷತೆ ಅಂದರೆ ಕೌಶಲ್ಯಗಳ ಬಗ್ಗೆ ಬರೆಯಿರಿ. ನಿಮ್ಮ ಸಾಧನೆಗಳ ಬಗ್ಗೆ ತಿಳಿಸಿ. ಸಾಂದರ್ಭಿಕ ಚಿತ್ರ
5/ 7
ನಿಮಗೆ ಎಷ್ಟು ಭಾಷೆ ತಿಳಿದಿದೆ ಎಂಬುದರ ಕುರಿತು ಬರೆಯಿರಿ. ಹೆಚ್ಚು ಭಾಷೆಗಳ ಮೇಲೆ ಹಿಡಿತ ಇರುವುದು ನಿಮ್ಮನ್ನು ಒಂದೊಳ್ಳೆ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತದೆ.
6/ 7
ಇನ್ನು ನಿಮ್ಮ ರೆಸ್ಯೂಮ್ ನಲ್ಲಿ ಬಳಸಿರುವ ಭಾಷೆ ಸಿಂಪಲ್ ಆಗಿ ಇರಲಿ. ಅನಗತ್ಯವಾಗಿ ದೊಡ್ಡ ದೊಡ್ಡ ಅರ್ಥದ ಪದಗಳನ್ನು ಬಳಸಬೇಡಿ.
7/ 7
ಇನ್ನು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ರೆಸ್ಯೂಮ್ ನಲ್ಲಿ ಅತಿಯಾದ ಸ್ವಹೊಗಳಿಕೆ ಬೇಡ. ನಾನೇ ಎಲ್ಲಾ ಮಾಡಿದ್ದೆ ಎಂಬ ಅರ್ಥದಲ್ಲಿ ವಾಕ್ಯಗಳು ಇರದಂತೆ ನೋಡಿಕೊಳ್ಳಿ.