Resume Tips-11: ನಿಮ್ಮ ರೆಸ್ಯೂಮ್ನಲ್ಲಿರುವ ಈ 5 ವಿಷಯಗಳನ್ನು ಮೊದಲು ಡಿಲೀಟ್ ಮಾಡಿ, ಆಗಲೇ ಕೆಲಸ ಸಿಗೋದು
ಉದ್ಯೋಗಾಕಾಂಕ್ಷಿಗಳಿಗೂ ಹಾಗೂ ಕೆಲಸ ನೀಡುವ ಕಂಪನಿಗಳ ಮಧ್ಯೆ ನಡೆಯುವ ಮೊದಲ ಸಂವಹನವೇ ರೆಸ್ಯೂಮ್. ನಿಮ್ಮ ರೆಸ್ಯೂಮ್ ನೋಡಿದ ನಂತರವೇ ನಿಮ್ಮನ್ನು ಇಂಟರ್ ವ್ಯೂಗೆ ಕರೆಯಲಾಗುತ್ತೆ. ಹಾಗಾಗಿ ರೆಸ್ಯೂಮ್ ಸರಿಯಾಗಿರುವುದು ತುಂಬಾನೇ ಮುಖ್ಯ. ಹಾಗಾಂತ ಬೇಡದ ವಿಚಾರಗಳನ್ನೆಲ್ಲಾ ತುಂಬಬೇಡಿ.
ಬಳಷ್ಟು ಉದ್ಯೋಗಾಕಾಂಕ್ಷಿಗಳು ಮಾಡುವ ಸಾಮಾನ್ಯ ತಪ್ಪುಗಳು ಇವು. ನಿಮ್ಮ ರೆಸ್ಯೂಮ್ ನಲ್ಲಿರುವ ಈ ವಿಷಯಗಳನ್ನು ಮೊದಲು ಡಿಲೀಟ್ ಮಾಡಿ. ಆಗ ಮಾತ್ರ ನಿಮಗೆ ಸಂದರ್ಶನಕ್ಕಾಗಿ ಕರೆ ಬರುತ್ತೆ. ಡಿಲೀಟ್ ಮಾಡಬೇಕಾದ 5 ವಿಷಯಗಳ ಮಾಹಿತಿ ಇಲ್ಲಿದೆ.
2/ 7
1) ಅನಗತ್ಯವಾದ ಮಾಹಿತಿ: ನೀವು ಅಪ್ಲೈ ಮಾಡಿರುವ ಕೆಲಸಕ್ಕೆ ಸಂಬಂಧವೇ ಇಲ್ಲದ ಕೆಲಸದಲ್ಲಿ ನಿಮಗೆ ಅನುಭವವಿದ್ದರೆ, ಅದನ್ನು ರೆಸ್ಯೂಮ್ ನಲ್ಲಿ ಮೆನ್ಷನ್ ಮಾಡುವ ಅಗತ್ಯವಿಲ್ಲ. ನೀವು ಪ್ರಯತ್ನಿಸುತ್ತಿರುವ ಉದ್ಯೋಗಕ್ಕೆ ಸಂಬಂಧಿಸಿದ ಕೆಲಸದ ಅನುಭವವನ್ನು ಮಾತ್ರ ಉಲ್ಲೇಖಿಸಿ.
3/ 7
2) ಭಾಷೆಯನ್ನು ಬದಲಿಸಿ: ನಿಮ್ಮ ಪರಿಚಯಸ್ಥರೋ, ಸ್ನೇಹಿತರೋ ಅಥವಾ ಸಹೋದ್ಯೋಗಿಗಳ ರೆಸ್ಯೂಮ್ ಅನ್ನೇ ಎಡಿಟ್ ಮಾಡಿ ನಿಮ್ಮ ಮಾಹಿತಿಗಳನ್ನು ತುಂಬಬೇಡಿ. 5-6 ವರ್ಷಗಳ ಹಿಂದಿನ ಭಾಷೆ, ಪದಗಳೇ ಬಳಕೆ ಆಗಿರುತ್ತದೆ. ಹಾಗಾಗಿ ಇಂಟರ್ನೆಟ್ ನಲ್ಲಿ ಸಾಕಷ್ಟು ಉಚಿತ ಟೆಂಪ್ಲೇಟ್ ಗಳು ಸಿಗುತ್ತವೆ. ಅವುಗಳ ಮೂಲಕ ನಿಮ್ಮ ರೆಸ್ಯೂಮ್ ಸಿದ್ಧಪಡಿಸಿ.
4/ 7
3) ವೈಯಕ್ತಿಕ ವಿಷಯಗಳನ್ನು ಹೆಚ್ಚು ಹಂಚಿಕೊಳ್ಳಬೇಡಿ: ರೆಸ್ಯೂಮ್ ನಲ್ಲಿ ಹೆಚ್ಚು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಧಾರ್ಮಿಕ, ನೈತಿಕ ಮತ್ತು ಸೈದ್ಧಾಂತಿಕ ವಿಷಯಗಳನ್ನು ಉಲ್ಲೇಖಿಸುವ ಮೂಲಕ, ಸಿವಿ ಸಂಪೂರ್ಣವಾಗಿ ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತದೆ. ಹವ್ಯಾಸವನ್ನು ಅಗತ್ಯವಿರುವಷ್ಟು ಮಾತ್ರ ವಿವರಿಸಿ.
5/ 7
4) ಕೌಟುಂಬಿಕ ಮಾಹಿತಿಯೂ ಬೇಡ: ನಿಮ್ಮ ಕುಟುಂಬದಲ್ಲಿ ಯಾರ್ಯಾರು ಇದ್ದೀರಿ, ನಿಮ್ಮ ತಂದೆ-ತಾಯಿಯ ಉದ್ಯೋಗವೇನು ಎಂಬೆಲ್ಲಾ ಮಾಹಿತಿಯನ್ನು ಬರೆಯಬೇಡಿ. ನಿಮ್ಮ ಮನೆಯ ಸಂಪೂರ್ಣ ವಿಳಾಸವನ್ನೂ ನಮೂದಿಸಬೇಡಿ. ಸರಿಯಾದ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸಾಕು.
6/ 7
5) SSLC, PUC, ಪದವಿಯ ಅಂಕಗಳ ಬಗ್ಗೆ ಮಾಹಿತಿ ಕೊನೆಯಲ್ಲಿ ಇರಲಿ. ನಿಮ್ಮಲ್ಲಿರುವ ಸಾಫ್ಟ್ ಸ್ಕಿಲ್ಸ್ ಅನ್ನು ಮೊದಲು ಕಾಡುವಂತೆ ರೆಸ್ಯೂಮ್ ನ ಆರ್ಡರ್ ಇರಲಿ. ಕಮ್ಯುನಿಕೇಷನ್, ಟೈಂ ಮ್ಯಾನೇಜ್ ಮೆಂಟ್, ಟೀಂ ಲೀಡರ್ ಕೌಶಲ್ಯಗಳನ್ನು ಹೈಲೈಟ್ ಮಾಡಿ.
7/ 7
ನೆನಪಿಡಿ: ಯಾವುದೇ ಕಾರಣಕ್ಕೂ ರೆಸ್ಯೂಮ್ ನಲ್ಲಿ ಸುಳ್ಳು ಹೇಳಬೇಡಿ. ಗೊತ್ತಿಲ್ಲದ ಕೌಶಲ್ಯಗಳನ್ನು ಸಮೂದಿಸಬೇಡಿ. ಪರೀಕ್ಷಿಸಿದಾಗ ಸಿಕ್ಕಿಬಿದ್ದರೆ, ನಿಮ್ಮ ವಿರುದ್ಧ ವಂಚನೆಯ ದೂರನ್ನೂ ದಾಖಲಿಸಬಹುದು. ಎಚ್ಚರ!