Resume Tips-3: ಈ ರೀತಿಯ ರೆಸ್ಯೂಮ್ಗಳನ್ನು ಕೂಡಲೇ ಕಂಪನಿಗಳ HR ರಿಜೆಕ್ಟ್ ಮಾಡ್ತಾರೆ, ಹುಷಾರ್
Resume Mistakes: ಉದ್ಯೋಗಾಕಾಂಕ್ಷಿಗಳು ಮಾಡುವ ಸಣ್ಣಪುಟ್ಟ ತಪ್ಪುಗಳೇ ಅವರನ್ನು ಉದ್ಯೋಗ ವಂಚಿತರನ್ನಾಗಿ ಮಾಡುತ್ತದೆ. ಕೆಲಸ ಹುಡುಕುವ ಅವಸರದಲ್ಲಿ ಬೇಕಾಬಿಟ್ಟಿ ರೆಸ್ಯೂಮ್ ಕಳುಹಿಸಿದರೆ ಪ್ರಯೋಜನವಿಲ್ಲ. ಈ ರೀತಿಯ ರೆಸ್ಯೂಮ್ ಗಳನ್ನು ನೋಡಿದ ತಕ್ಷಣ ಕಂಪನಿಗಳ HR ರಿಜೆಕ್ಟ್ ಮಾಡ್ತಾರೆ.
ಹಾಗಾದರೆ HRಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲು ರೆಸ್ಯೂಮ್ ಯಾವ ರೀತಿ ಇರಬೇಕು? ಈ ಪ್ರಶ್ನೆಗೆ ಸೂಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ 6 ಸಲಹೆಗಳ ಮೂಲಕ ನಿಮ್ಮ ರೆಸ್ಯೂಮ್ ಗುಣಮಟ್ಟವನ್ನು ಸುಧಾರಿಸುವುದು ಉತ್ತಮ.
2/ 7
1) ನಿಮ್ಮ ರೆಸ್ಯೂಮ್ ನಲ್ಲಿ ಹೆಚ್ಚಾಗಿ ಸ್ಪೆಲ್ಲಿಂಗ್ ಮಿಸ್ಟೇಕ್, ತಪ್ಪಾದ ಪದ ಬಳಕೆ ಇದ್ದರೆ ರಿಜೆಕ್ಟ್ ಆಗುವ ಸಾಧ್ಯತೆಗಳು ಹೆಚ್ಚು. ಇಂಗ್ಲಿಷ್ ಇರಲಿ, ಕನ್ನಡವೇ ಆಗಿರಲಿ ಕಾಗುಣಿತ, ವ್ಯಾಕರಣ ರಚನೆ ತಪ್ಪಾಗಿದೆಯೇ ಎಂದು ಗಮನಿಸಿ. ತಪ್ಪಿದ್ದರೆ ಕೂಡಲೇ ಸರಿ ಮಾಡಿ.
3/ 7
2) ನೀವು ಕಂಪನಿಯ ಯಾವ ಹುದ್ದೆಗೆ ರೆಸ್ಯೂಮ್ ಕಳುಹಿಸಿದ್ದೀರಿ ಎಂದು ಉಲ್ಲೇಖಿಸದೇ ಇರುವುದು ಕೂಡ ನಿಮಗೆ ಅವಕಾಶವನ್ನು ತಪ್ಪಿಸುತ್ತದೆ. ಕಂಪನಿಯವರು ಹಲವು ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿರುತ್ತಾರೆ. ಅದರಲ್ಲಿ ನೀವು ಯಾವ ಹುದ್ದೆಗೆ ಪ್ರಯತ್ನಿಸುತ್ತಿದ್ದೀರಿ ಎಂದು ಸರಿಯಾಗಿ ಮೆನ್ಷನ್ ಮಾಡಬೇಕು.
4/ 7
3) ನೀವು ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರೋ ಅದಕ್ಕೆ ಹೊಂದಿಕೆಯಾಗುವಂತಹ ರೆಸ್ಯೂಮ್ ಕಳುಹಿಸಬೇಕು. ಒಂದೇ ಮಾದರಿಯ ರೆಸ್ಯೂಮ್ ಅನ್ನು ಎಲ್ಲೆಡೆಯೂ ಕಳುಹಿಸಬಾರದು. ಹುದ್ದೆಗೆ ತಕ್ಕಂತೆ ರೆಸ್ಯೂಮ್ ಅನ್ನು ಅಪ್ ಡೇಟ್ ಮಾಡಿ ಕಳುಹಿಸಬೇಕು. ಸಾಂದರ್ಭಿಕ ಚಿತ್ರ
5/ 7
4) ರೆಸ್ಯೂಮ್ ತುಂಬಾ ಚಿಕ್ಕದಾಗಿ ಇರುವುದು ಅಥವಾ ತುಂಬಾ ಲಾಂಗ್ ಆಗಿ ಇರುವುದು. ಕೇವಲ ಅರ್ಧ ಹಾಳೆಯಷ್ಟು ರೆಸ್ಯೂಮ್ ಅನ್ನು ಯಾರೂ ಆಯ್ಕೆ ಮಾಡುವುದಿಲ್ಲ. ಹಾಗಂತ 3-4 ಪುಟಗಳ ರೆಸ್ಯೂಮ್ ಕೂಡ ಸೆಲೆಕ್ಟ್ ಆಗಲ್ಲ. ಎಷ್ಟು ಬೇಕೋ ಅಷ್ಟೇ ಮಾಹಿತಿ ಇರುವಂತೆ ರೆಸ್ಯೂಮ್ ಅನ್ನು ತಯಾರಿಸಿ.
6/ 7
5) ಬಣ್ಣಬಣ್ಣದ, ದೊಡ್ಡ ಫೋಟೋ ಇರುವ, ಅಕ್ಷರಗಳು ಅತಿಯಾಗಿ ಬೋಲ್ಡ್ ಮಾಡಿದ ಹಾಗೂ ಕಣ್ಣಿಗೆ ರಾಚುವಂತ ರೆಸ್ಯೂಮ್ ಕೂಡ ರಿಜೆಕ್ಟ್ ಆಗುತ್ತದೆ. ರೆಸ್ಯೂಮ್ ಫಾರ್ಮೆಟ್, ಫಾಂಟ್ ಸೈಜ್ ವೃತ್ತಿಪರವಾಗಿರಲಿ. ಅನಗತ್ಯ ಬಣ್ಣಗಳ ಬಳಕೆ ಬೇಡ.
7/ 7
6) ಹಳೆಯ ಮಾದರಿಯಂತೆ ಮನೆಯ ವಿಳಾಸವನ್ನಷ್ಟೇ ಕೊಡುವುದು ಕೂಡ ಕಮ್ಯುನಿಕೇಷನ್ ಪ್ರಾಬ್ಲಂ ಅನ್ನು ಸೃಷ್ಟಿಸುತ್ತದೆ. ಈಗ ನಿಮ್ಮ ಮನೆಯ ವಿಳಾಸ ಕೊಡುವ ಅಗತ್ಯವಿಲ್ಲ. ಸರಿಯಾದ ಫೋನ್ ನಂಬರ್, ಮೇಲ್ ಐಡಿ ಅನ್ನು ರೆಸ್ಯೂಮ್ ನಲ್ಲಿ ಹಾಕಿದರೆ ಸಾಕು.