Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

ತಮ್ಮ ಉದ್ಯೋಗದಲ್ಲಿ ಅತೃಪ್ತಿ ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಂಬಳಕ್ಕಾಗಿ, ಸಮಾಜದ ಒತ್ತಡಕ್ಕಾಗಿ ಕೆಲಸ ಮಾಡುತ್ತಿರುವ ಬಹುತೇಕ ಯುವಜನತೆ ತಮ್ಮ ಉದ್ಯೋಗದಲ್ಲಿ ಆಸಕ್ತಿಯನ್ನೇ ಹೊಂದಿಲ್ಲವಂತೆ. ಏಕೆ ಈ ರೀತಿ ಆಗುತ್ತದೆ. ಉದ್ಯೋಗಿ ಆಸಕ್ತಿ ಕಳೆದುಕೊಳ್ಳುವುದರ ಹಿಂದಿನ ಕಾರಣಗಳೇನು?

First published:

  • 18

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    ಇಷ್ಟುಪಟ್ಟು ಮಾಡುವ ಕೆಲಸ ಎಂದಿಗೂ ಕಷ್ಟವಾಗುವುದಿಲ್ಲ, ಮನಸ್ಸಿಲ್ಲದ ಕೆಲಸ ಎಂದಿಗೂ ಗುಣಮಟ್ಟದಿಂದ ಕೂಡಿರುವುದಿಲ್ಲ. ಆ ನಿಟ್ಟಿನಲ್ಲಿ ಉದ್ಯೋಗಿಗೆ ತನ್ನ ಕೆಲಸದಲ್ಲಿ ಆಸಕ್ತಿ ಇರುವುದು ತುಂಬಾನೇ ಮುಖ್ಯ. ಹಾಗಾದರೆ ಉದ್ಯೋಗಿಗೆ ತನ್ನ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗುವ ವಿಷಯಗಳ್ಯಾವುವು ನೋಡೋಣ ಬನ್ನಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    1) ಆಸಕ್ತಿಯೇ ಬೇರೆ, ಮಾಡುತ್ತಿರುವ ಕೆಲಸವೇ ಬೇರೆ: ಬಹಳಷ್ಟು ಜನ ತಮ್ಮ ಆಸಕ್ತಿಗೆ ವಿರುದ್ಧವಾದ ಜಾಬ್ಸ್ ಮಾಡುತ್ತಿದ್ದಾರೆ. ಇಷ್ಟವಿಲ್ಲದ ಕೆಲಸ ಎಂದಿಗೂ ಹೊರೆಯೇ ಎನಿಸಿಕೊಳ್ಳುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    2) ತೊಡಗಿಕೊಳ್ಳುವಿಕೆಯ ಕೊರತೆ: ನಿಮಗೆ ಇಷ್ಟವಿಲ್ಲದ ಕೆಲಸದಲ್ಲಿ ನೀವು ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ನೀವು ಉದ್ಯೋಗ ಮಾಡುತ್ತಿರುವ ಕ್ಷೇತ್ರದಲ್ಲಿ ಆಳವಾಗಿ ಹೋಗಲು ಆಗುವುದೇ ಇಲ್ಲ.

    MORE
    GALLERIES

  • 48

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    3) ಸವಾಲುಗಳೇ ಇಲ್ಲದಿರುವುದು: ನಿತ್ಯ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ ಉದ್ಯೋಗಿಗೆ ಏಕತಾನತೆ ಕಾಡುತ್ತದೆ. ಯಾವುದೇ ಏರಿಳಿತಗಳಿಲ್ಲದ ಉದ್ಯೋಗ ಎಂದಿಗೂ ನಿರತವೆನಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    4) ಅತಿಯಾದ ಕೆಲಸ: ನಿತ್ಯ ಹೆಚ್ಚಿನ ಕೆಲಸ, ಹೆಚ್ಚಿನ ಗಂಟೆಗಳ ಕಾಲ ಆಫೀಸ್ ನಲ್ಲೇ ಕಳೆಯುವುದು ಉದ್ಯೋಗಿಯ ಉತ್ಸಾಹವನ್ನು ಬರಿದಾಗಿಸುತ್ತದೆ. ಅತಿಯಾಡ ಒತ್ತಡದಿಂದ ಕೆಲಸ ಮೇಲೆ ಜಿಗುಪ್ಸೆ ಬರಲು ಶುರುವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    5) ನೀವು ಮಾಡುತ್ತಿರುವ ಕೆಲಸಕ್ಕೆ ಗೌರವ ಇಲ್ಲದೇ ಇರುವುದು: ಕೆಳ ಹಂತದ ಕೆಲಸಗಾರರನ್ನು ಈ ಕೀಳರಿಮೆ ಕಾಡುತ್ತದೆ. ಯಾವುದೇ ಕೆಲಸ ಚಿಕ್ಕದಲ್ಲ, ಆದರೆ ಎಲ್ಲರಿಂದಲೂ ಈ ಉದಾರತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಾಡುವ ಕೆಲಸಕ್ಕೆ ಗೌರವವಿಲ್ಲದಿದ್ದರೆ ಉದ್ಯೋಗಿ ಬೇಸರಗೊಳ್ಳುವುದು ಸಹಜ.

    MORE
    GALLERIES

  • 78

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    [caption id="attachment_940686" align="aligncenter" width="1200"] 6) ಕಡಿಮೆ ಸಂಬಳ: ಮಾಡುತ್ತಿರುವ ಕೆಲಸಕ್ಕೆ ತಕ್ಕ ವೇತನ ಪಡೆಯದಿದ್ದಾಗ ಉದ್ಯೋಗಿಗಳು ಕೆಲಸದ ಗುಣಮಟ್ಟದ ವಿಷಯದಲ್ಲಿ ರಾಜಿ ಆಗುತ್ತಾರೆ.

    [/caption]

    MORE
    GALLERIES

  • 88

    Career Tips: ನಿಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಈ 7 ವಿಷಯಗಳೇ ಕಾರಣ!

    7) ಓದಿಗೆ ತಕ್ಕಂತೆ ಕೆಲಸ ಸಿಗದಿರುವುದು: ಪದವಿ ಪಡೆದ ಕ್ಷೇತ್ರದಲ್ಲಿ ಉದ್ಯೋಗ ಸಿಗದಿದ್ದಾಗ, ಅನಿವಾರ್ಯವಾಗಿ ಬೇರೆ ಕೆಲಸ ಮಾಡುವುದು ಕೂಡ ಉದ್ಯೋಗಿಗೆ ಹಿಂಸೆ ಅನಿಸಬಹುದು.

    MORE
    GALLERIES