Presentation Skills: ಪ್ರೆಸೆಂಟೇಶನ್ ಕೊಡುವಾಗ ನರ್ವಸ್ ಆಗುವವರು ಈ ಸಿಂಪಲ್ ಟಿಪ್ಸ್ ಪಾಲಿಸಿ
ಕಾರ್ಪೊರೇಟ್ ಫೀಲ್ಡ್ನಲ್ಲಿ ಮಾತ್ರವಲ್ಲ. ಬಹುತೇಕ ಎಲ್ಲಾ ಔದ್ಯೋಗಿಕರಂಗಗಳಲ್ಲಿ ಈಗ PPT ಪ್ರೆಸೆಂಟೇಶನ್ ತುಂಬಾನೇ ಕಾಮನ್ ಆಗಿದೆ. ಉದ್ಯೋಗಿ ಅಥವಾ ಟೀಂ ಲೀಡರ್ ಆದವರು ಪ್ರೆಸೆಂಟೇಶನ್ ಕೊಡುವುದರಲ್ಲಿ ನಿಪುಣರಾಗಿರಬೇಕು ಎಂದು ಬಾಸ್/ಮ್ಯಾನೇಜರ್ ಅಥವಾ ಕಂಪನಿಯವರು ಬಯಸುತ್ತಾರೆ.
ನಿರ್ದಿಷ್ಟ ವಿಷಯವನ್ನು ಟೆಕ್ನಾಲಜಿ ಸಹಾಯದ ಮೂಲಕ ಪ್ರಸ್ತುತಪಡಿಸುವುದನ್ನು ಪ್ರೆಸೆಂಟೇಶನ್ ಎನ್ನುತ್ತಾರೆ. ಮುಂದಿನ ಗುರಿಗಳು, ಪ್ರಾಜೆಕ್ಟ್ ಬಗ್ಗೆ ಮಾಹಿತಿ, ಅಂಶಿಅಂಶಗಳು ಸೇರಿದಂತೆ ಹಲವು ವಿಷಯಗಳ ಕುರಿತು ಒಂದು ಗುಂಪಿಗೆ ವಿವರಿಸಬೇಕಾಗುತ್ತದೆ. (ಪ್ರಾತಿನಿಧಿಕ ಚಿತ್ರ)
2/ 8
ಉದಾಹರಣೆಗೆ ಆಫೀಸ್ ಒಂದರಲ್ಲಿ ಮುಂದಿನ 6 ತಿಂಗಳಲ್ಲಿ ಎಷ್ಟೆಲ್ಲಾ ಕೆಲಸಗಳನ್ನು ಮಾಡಬೇಕು. ಯಾವ ಅಂಕಿಅಂಶಗಳನ್ನು ಕೆಲಸ ಮೂಲಕ ಮುಟ್ಟಬೇಕು ಎಂಬುವುದನ್ನು ಟೀಂ ಲೀಡರ್ ಆದವರು ತನ್ನ ಟೀಂ ಸದಸ್ಯರಿಗೆ ಡಿಜಿಟಲ್ ಸ್ಕ್ರೀನ್ ಅನ್ನು ಪ್ರದರ್ಶಿಸುವ ಮೂಲಕ ವಿವರಿಸುತ್ತಾರೆ. (ಪ್ರಾತಿನಿಧಿಕ ಚಿತ್ರ)
3/ 8
ಹೀಗೆ ಪ್ರೆಸೆಂಟೇಶನ್ ಕೊಡುವುದು ತಾನಾಗಿಯೇ ಬರುವ ಕೌಶಲ್ಯವಲ್ಲ. ಇದರ ಮೇಲೆ ಕೆಲಸ ಮಾಡಬೇಕು. ಬಹುತೇಕರು ನಾಲ್ಕು ಜನರ ಮುಂದೆ ಮಾತನಾಡಲು ಹಿಂಜರಿಯುತ್ತಾರೆ. ವರ್ಸನ್ ಆಗುವುದರಿಂದ ಪ್ರೆಸೆಂಟೇಶನ್ ಕ್ವಾಲಿಟಿ ಕೆಡುತ್ತವೆ. ಕೇಳುಗರು ನಿಮ್ಮ ಗೊಂದಲವನ್ನು ಗಮನಿಸುತ್ತಾರೆಯೇ ಹೊರತು ವಿಷಯದ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು. (ಪ್ರಾತಿನಿಧಿಕ ಚಿತ್ರ)
4/ 8
ನರ್ವಸ್ ನೆಸ್ ಹೋಗಲಾಡಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಮೊದಲನೆಯದಾಗಿ, ನೀವು ಪ್ರೆಸೆಂಟೇಶನ್ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಆಗ ಮಾತ್ರ ನೀವು ಅದರ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯ. (ಪ್ರಾತಿನಿಧಿಕ ಚಿತ್ರ)
5/ 8
ಪ್ರೆಸೆಂಟೇಶನ್ ಗಾಗಿ ತಯಾರಿ ಮುಖ್ಯವಾಗಿದೆ. ಸರಿಯಾಗಿ ತಯಾರಿ ನಡೆಸದಿದ್ದರೆ ನಿಮ್ಮ ಪ್ರೆಸೆಂಟೇಶನ್ ಕಳಪೆ ಎನಿಸಿಕೊಳ್ಳುತ್ತೆ. ಪ್ರೆಸೆಂಟೇಶನ್ ನೀಡುವಾಗ ನೀವು ಉದ್ವೇಗಕ್ಕೊಳಗಾಗುತ್ತಿದ್ದರೆ, ಮೊದಲು ಏಕಾಂತ ಸ್ಥಳದಲ್ಲಿ ಅಭ್ಯಾಸ ಮಾಡಿ. (ಪ್ರಾತಿನಿಧಿಕ ಚಿತ್ರ)
6/ 8
ಪ್ರೆಸೆಂಟೇಶನ್ ನೀಡುವಾಗ ಸರಿಯಾದ ಪದಗಳನ್ನು ಬಳಸಿ. ಪ್ರೆಸೆಂಟೇಶನ್ ಸಮಯದಲ್ಲಿ ಅಸಂಬದ್ಧ ಪದಗಳನ್ನು ಬಳಸುವುದನ್ನು ತಪ್ಪಿಸಿ. umm, hmm, aa ಎಂದು ರಾಗ ತೆಗೆಯುವುದನ್ನು ಅವಾಯ್ಡ್ ಮಾಡಬೇಕು. ಇದರಿಂದ ಕೇಳುಗರಿಗೆ ಹಿಂಸೆ ಅನಿಸುತ್ತೆ. (ಪ್ರಾತಿನಿಧಿಕ ಚಿತ್ರ)
7/ 8
ಪ್ರೆಸೆಂಟೇಶನ್ ಆಕರ್ಷಕವಾಗಿಸಲು, PPT ಅಂದರೆ ಪವರ್ ಪಾಯಿಂಟ್ ನ ಸಹಾಯವನ್ನು ತೆಗೆದುಕೊಳ್ಳಿ. ಗ್ರಾಫಿಕ್ಸ್, ವಿವಿಧ ರೀತಿಯ ಫಾಂಟ್ ಗಳು, ಚಾರ್ಟ್ ಗಳನ್ನು ಬಳಸಬಹುದು. ಪ್ರೆಸೆಂಟೇಶನ್ ಮೇಲೆ ಕೇಳುಗರ ನೋಟ ನಿಲ್ಲುತ್ತದೆ. (ಪ್ರಾತಿನಿಧಿಕ ಚಿತ್ರ)
8/ 8
ಪ್ರೆಸೆಂಟೇಶನ್ ಅನ್ನು ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿ. ಇದರಿಂದ ಆತಂಕವನ್ನು ಹೋಗಲಾಡಿಸಬಹುದು. ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂದು ನಿಮ್ಮ ಅರಿವಿಗೆ ಬರುತ್ತೆ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ನೆರವಾಗುತ್ತೆ. (ಪ್ರಾತಿನಿಧಿಕ ಚಿತ್ರ)