1. ಕಂಟೆಂಟ್ ರೈಟರ್: ಈಗಾಗಲೇ ನಿಮಗೆ ಬರವಣಿಗೆ ಮೇಲೆ ಒಂದು ಹಿಡಿತ ಬಂದಿರುತ್ತದೆ. ನಿಮಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಬರೆದು ಸುದ್ದಿಪತ್ರಿಕೆಗಳಿಗೆ ಕಳುಹಿಸಿದರೆ, ಅವರು ಸಂಭಾವನೆ ನೀಡುತ್ತಾರೆ. ವಿಷಯ ಬರಹಗಾರರಾಗಿ ನೀವು ಬ್ಲಾಗ್ ಗಳನ್ನು ಬರೆಯಬಹುದು, ಸಾಮಾಜಿಕ ಮಾಧ್ಯಮ ಸೈಟ್ ಗಳು / ಇ-ಕಾಮರ್ಸ್ ಸೈಟ್ ಗಳು / ಕಾಲೇಜು ವೆಬ್ ಸೈಟ್ಗಳಿಗೆ ವಿಷಯವನ್ನು ರಚಿಸಬಹುದು. (ಸಾಂಕೇತಿಕ ಚಿತ್ರ)
2. ಮಕ್ಕಳಿಗೆ ಟ್ಯೂಷನ್ ಮಾಡಬಹುದು: ನೀವು ಈಗ ಪದವಿಗೆ ಹೋಗಲಿರುವ ವಿದ್ಯಾರ್ಥಿ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಕಲಿಸುವಷ್ಟು ಸಾಮರ್ಥ್ಯ ನಿಮಗೆ ಇರುತ್ತದೆ. ಹಾಗಾಗಿ ಯಾವುದೇ ಬಂಡವಾಳವಿಲ್ಲದೆ, ಮನೆಯಲ್ಲಿಯೇ ಶಾಲಾ ಮಕ್ಕಳಿಗೆ ಟ್ಯೂಷನ್ ನಡೆಸಬಹುದು. ಮಕ್ಕಳ ಡೇ ಕೇರ್ ಕೂಡ ಮಾಡಬಹುದು. ಇದರಲ್ಲೂ ನೀವು ತಿಂಗಳಿಗೆ 10 ಸಾವಿರದವರೆಗೆ ಸುಲಭವಾಗಿ ಗಳಿಸಬಹುದು. (ಸಾಂದರ್ಭಿಕ ಚಿತ್ರ)