Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಾತಿಪ್ರಮಾಣ ಪತ್ರ, ಮೀಸಲಾತಿ ಕುರಿತು ಅನೇಕ ಗೊಂದಲಗಳಿಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆಯನ್ನು ನೀಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 18

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವಾಹಿತ ಮಹಿಳಾ ಅಭ್ಯರ್ಥಿಗಳ ಪೋಷಕರ ಜಾತಿ ಪ್ರಮಾಣವನ್ನು ಪರಿಗಣಿಸಬೇಕು. ಪತಿಯ ಜಾತಿ-ಆದಾಯ ಪ್ರಮಾಣಪತ್ರವನ್ನು ಅಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಆದೇಶಿಸಿದ್ದಾರೆ.

    MORE
    GALLERIES

  • 28

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ವಿವಾಹಿತ ಮಹಿಳೆಯರು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ಪೋಷಕರ ಜಾತಿ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಅದರ ಆಧಾರದ ಮೇಲೆಯೇ ಮೀಸಲಾತಿಗೆ ಅರ್ಹರು. ಪತಿಯ ಜಾತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಪೀಠ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಈಗಾಗಲೇ ಕೋರ್ಟ್ ಆದೇಶವಿದ್ದರೂ ಸರ್ಕಾರ ಈ ನಿಯಮವನ್ನು ಮೀರುತ್ತಿರುವುದು ಖಂಡನೀಯ ಎಂದು ಹೈಕೋರ್ಟ್ ಚಾಟಿ ಬೀಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ಸಂಬಂಧ ಈ ಆದೇಶವನ್ನು ಪಾಲಿಸುವಂತೆ ಮತ್ತೆ ಹೈಕೋರ್ಟ್ ಸರ್ಕಾರವನ್ನು ಎಚ್ಚರಿಸಿದೆ.

    MORE
    GALLERIES

  • 48

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಮಹಿಳೆ ಅನ್ಯಜಾತಿಯಲ್ಲಿ ವಿವಾಹವಾದರೆ ಪತಿಯ ಜಾತಿಯ ಆಧಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಇಂಟರ್ ಕಾಸ್ಟ್ ಮ್ಯಾರೇಜ್ ಆಗಿದ್ದರೂ ಹೆತ್ತವರ ಜಾತಿಯನ್ನೇ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಮಹಿಳಾ ಅಭ್ಯರ್ಥಿಗಳನ್ನು ಹೆತ್ತವರ ಜಾತಿಯ ಆಧಾರ ಎಂದರೆ ಮೀಸಲಾತಿ ಇದ್ದರೆ ಅದಕ್ಕೆ ತಕ್ಕಂತೆ ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್​ ತಿಳಿಸಿದೆ.

    MORE
    GALLERIES

  • 68

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ಹೈಕೋರ್ಟ್ ನಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ವಾದ ಮಾಡಿದರು. ಹಿಂದಿನ ಪೀಠಗಳು ತೀರ್ಪು ನೀಡಿದ್ದರೂ ರಾಜ್ಯವು ತಪ್ಪನ್ನು ಪುನರಾವರ್ತಿಸುತ್ತಿದೆ ಎಂದು ಹಿರಿಯ ವಕೀಲ ಕೆ ಶಶಿಕಿರಣ್ ಶೆಟ್ಟಿ ವಾದಿಸಿದರು.

    MORE
    GALLERIES

  • 78

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಕೋರ್ಟ್ ಆದೇಶವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವುದಾದರೆ, ಉದಾಹರಣೆಗೆ SC ವರ್ಗಕ್ಕೆ ಸೇರಿದ ಮಹಿಳೆ ಮೀಸಲಾತಿ ಇಲ್ಲದ ಅನ್ಯಜಾತಿ ಪುರುಷನನ್ನು ಮದುವೆ ಆಗುತ್ತಾಳೆ. ನಂತರ ಆಕೆ ಹೆತ್ತವರ ಜಾತಿಯಾದ SC ಮೀಸಲಾತಿ ಅಡಿಯಲ್ಲೇ ಸರ್ಕಾರಿ ಕೆಲಸಕ್ಕೆ ಅರ್ಹಳು. ಪತಿಯ ಜಾತಿಗೆ ಮೀಸಲಾತಿ ಇಲ್ಲ, ಹಾಗಾಗಿ ಪತ್ನಿಗೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Govt Jobsಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಹೆತ್ತವರ ಜಾತಿಯೇ ಆಧಾರ, ಪತಿಯದ್ದಲ್ಲ: ಹೈಕೋರ್ಟ್

    ಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸದ ಕಾರಣ ನೂರಾರು ಜನರು ನೊಂದಿದ್ದಾರೆ. ಅರ್ಜಿದಾರರನ್ನು ನ್ಯಾಯಮಂಡಳಿಗೆ ಮರುನಿರ್ದೇಶಿಸುವ ಬದಲು ತಪ್ಪು ಸರಿಯನ್ನು ಹೊಂದಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

    MORE
    GALLERIES