Parental Leave: ಪುರುಷ ಉದ್ಯೋಗಿಗಳು ತಂದೆಯಾದರೆ ವೇತನ ಸಹಿತ 3 ತಿಂಗಳ ರಜೆ
ಇಷ್ಟು ದಿನ ಮಹಿಳಾ ಉದ್ಯೋಗಿಗಳು ತಾಯಿಯಾದರೆ ಹೆರಿಗೆ ರಜೆ ನೀಡುವುದನ್ನು ನಾವು ನೋಡಿದ್ದೆವು. ಈಗ ಪುರುಷ ಉದ್ಯೋಗಿಗಳು ತಂದೆಯಾದರೂ ಪಿತೃತ್ವ ಅಥವಾ ಪೋಷಕ ರಜೆಯನ್ನು ನೀಡುವ ಪದ್ಧತಿ ಹೆಚ್ಚು ಪ್ರಸಿದ್ಧವಾಗುತ್ತಿದೆ.
ಪುರುಷ ಉದ್ಯೋಗಿಯು ತಂದೆಯಾದರೆ ವೇತನ ಸಹಿತ 3 ತಿಂಗಳ ರಜೆಯನ್ನು ಪಡೆಯಬಹುದು. ಮಗು ಜನಿಸಿದ 2 ವರ್ಷದೊಳಗೆ ಯಾವಾಗ ಬೇಕಾದರೆ ರಜೆಯನ್ನು ತೆಗೆದುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
2/ 7
3 ತಿಂಗಳ ರಜೆಯನ್ನು ಒಂದೇ ಸಲಕ್ಕೆ ತೆಗೆದುಕೊಳ್ಳಬೇಕು ಅಂತೇನು ಇಲ್ಲ. ಕನಿಷ್ಟ 2 ವಾರ ಹಾಗೂ ಗರಿಷ್ಟ 6 ವಾರಗಳ ರಜೆಯನ್ನು ತೆಗೆದುಕೊಳ್ಳಬಹುದು. ಒಟ್ಟು 12 ವಾರಗಳ ರಜೆಯನ್ನು ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗಿಯು ಬಳಸಿಕೊಳ್ಳಬಹುದು. (ಸಾಂಕೇತಿಕ ಚಿತ್ರ)
3/ 7
ದೆಹಲಿಯ ಫಿಜರ್ ಇಂಡಿಯಾ ಕಂಪನಿಯು ಈ ಪಿತೃತ್ವ ರಜೆಯ ಸೌಲಭ್ಯವನ್ನು ತನ್ನ ಉದ್ಯೋಗಿಗಳಿಗೆ ಜನವರಿ 1, 2023ರಿಂದ ಜಾರಿಗೆ ತಂದಿದೆ. ಕಂಪನಿಯ ನಿರ್ಧಾರಕ್ಕೆ ಉದ್ಯೋಗಿಗಳು ಸೇರಿದಂತೆ ಬಹುತೇಕರಿಂದ ಶ್ಲಾಘನೆ ವ್ಯಕ್ತವಾಗಿದೆ.
4/ 7
ಪೋಷಕರಾಗುವುದು, ಮಕ್ಕಳ ಲಾಲನೆ-ಪಾಲನೆ ಜವಾಬ್ದಾರಿ ಕೇವಲ ತಾಯಿಯಾದವಳದ್ದು ಮಾತ್ರವಲ್ಲ, ತಂದೆ ಕೂಡ ಜವಾಬ್ದಾರರು ಎಂಬುವುದನ್ನು ಈ ನಿಯಮ ಪುಷ್ಠಿಕರಿಸುತ್ತದೆ. ಆ ಮೂಲಕ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶವಿದೆ ಎಂದು ಕಂಪನಿ ಹೇಳಿಕೊಂಡಿದೆ.
5/ 7
ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಪಿತೃತ್ವದ ರಜೆಯನ್ನು ಗಂಭೀರವಾಗಿ ಪರಿಗಣಿಸಿದೆ. ಜೈವಿಕ ತಂದೆಯಾದವರಿಗೆ ಮಾತ್ರ ಈ ರಜೆ ಸೌಲಭ್ಯವನ್ನು ಕೊಡುವುದಲ್ಲ, ಮಗುವನ್ನು ದತ್ತು ಪಡೆದ ತಂದೆ ಕೂಡ ಪಿತೃತ್ವದ ರಜೆಗೆ ಅರ್ಹರು ಎಂದು ಫಿಜರ್ ಇಂಡಿಯಾ ಕಂಪನಿ ಹೇಳಿದೆ. (ಸಾಂದರ್ಭಿಕ ಚಿತ್ರ)
6/ 7
ಹಲವಾರು ಸಂಸ್ಥೆಗಳು ಈ ಹಿಂದೆ ಪ್ರಾಥಮಿಕ ಆರೈಕೆದಾರರಿಗೆ (ತಾಯಿಗೆ ಮಾತ್ರ) 26 ವಾರಗಳ ಶಿಶುಪಾಲನಾ ರಜೆಯನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದವು. (ಸಾಂಕೇತಿಕ ಚಿತ್ರ)
7/ 7
ಸೆಕೆಂಡರಿ ಪಾಲನೆದಾರರು (ತಂದೆ) ಕೆಲವೊಮ್ಮೆ 2 ವಾರಗಳ ರಜೆಯನ್ನು ಪಡೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾತ್ರ ರಜೆಯನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಯಿತು. ಇದು ಕ್ರಮೇಣ ಬದಲಾಗುತ್ತಿರುವುದಕ್ಕೆ ಫಿಜರ್ ಕಂಪನಿಯ ನಿರ್ಧಾರವೇ ಸಾಕ್ಷಿ. (ಸಾಂಕೇತಿಕ ಚಿತ್ರ)