Interview Tips-7: ಆನ್ಲೈನ್ ಇಂಟರ್ವ್ಯೂಗೂ ಮುನ್ನ ಈ 4 ತಯಾರಿಗಳನ್ನು ಮಾಡಿಕೊಳ್ಳಲೇಬೇಕು
ಕೊರೊನಾ ವಕ್ಕರಿಸಿದ ನಂತರ ಆನ್ ಲೈನ್ ಸಂದರ್ಶನಗಳು ಮುನ್ನಲೆಗೆ ಬಂದವು. ಈಗ ಕೊರೊನಾ ಕಂಟ್ರೋಲ್ ನಲ್ಲಿದ್ದರೂ ಅನೇಕ ಕಂಪನಿಗಳು ಆನ್ ಲೈನ್ ಸಂದರ್ಶನದ ಮೂಲಕ ಉದ್ಯೋಗಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿವೆ. ಇದು ಕಂಪನಿ ಮತ್ತು ಉದ್ಯೋಗಿ ಇಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ.
ಸಂದರ್ಶನವು ಮುಖಾಮುಖಿಯಾಗಿರಲಿ ಅಥವಾ ಆನ್ ಲೈನ್ ಮೋಡ್ ನಲ್ಲಿರಲಿ, ಎರಡರಲ್ಲೂ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದರೆ ಆನ್ ಲೈನ್ ಸಂದರ್ಶನದ ಪರಿಕಲ್ಪನೆಯು ಹೊಸದಾಗಿರುವುದರಿಂದ, ಅನೇಕ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗುತ್ತಾರೆ.
2/ 8
1) ಇಂಟರ್ ನೆಟ್ ಕನೆಕ್ಷನ್ ಸರಿಯಾಗಿರಬೇಕು: ಆನ್ಲೈನ್ ಸಂದರ್ಶನವನ್ನು ನೀಡುವಾಗ ಪ್ರಮುಖ ವಿಷಯವೆಂದರೆ ಇಂಟರ್ನೆಟ್ ಸಂಪರ್ಕವು ಉತ್ತಮವಾಗಿರಬೇಕು. ಇಂಟರ್ ವ್ಯೂ ನಡೆಯುತ್ತಿರುವಾಗ ನೆಟ್ವರ್ಕ್ ಸಮಸ್ಯೆಗಳು ಇರಬಾರದು.
3/ 8
ಇಂಟರ್ ನೆಟ್ ಸ್ಪೀಡ್ ಉತ್ತಮವಾಗಿದ್ದರೆ ಸಂದರ್ಶನ ನೀಡುವಾಗ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಸಂದರ್ಶಕರಿಗೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೆ, ನಿಮ್ಮ ಲ್ಯಾಪ್ ಟಾಪ್ ಬ್ಯಾಟರಿ, ಕ್ಯಾಮರಾ ಮತ್ತು ಮೈಕ್ ಇತ್ಯಾದಿಗಳ ಸೆಟ್ಟಿಂಗ್ ಗಳನ್ನು ಇಂಟರ್ ವ್ಯೂಗೂ ಮುನ್ನವೇ ಪರಿಶೀಲಿಸಿ ಇಟ್ಟುಕೊಳ್ಳಿ.
4/ 8
2) ಎಂಥ ಸ್ಥಳದಲ್ಲಿ ಆನ್ ಲೈನ್ ಇಂಟರ್ ವ್ಯೂ ನೀಡಬೇಕು? : ಸರಿಯಾದ ಸಂದರ್ಶನದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚಿನ ಬೆಳಕಿನ ಸಮಸ್ಯೆ ಆಗದಂತ ಸ್ಥಳದಲ್ಲಿ ಕುಳಿತು ಯಾವಾಗಲೂ ಆನ್ ಲೈನ್ ಸಂದರ್ಶನವನ್ನು ನೀಡಿ. ನೀವು ಇಂಟರ್ ವ್ಯೂ ನೀಡುವ ಸ್ಥಳ ಕತ್ತಲೆಯಾಗಿರಬಾರದು.
5/ 8
ನಿಮ್ಮ ತಲೆಯ ಮೇಲೆ ನೇರವಾಗಿ ಬೆಳಕು ಇರಬಾರದು. ಕ್ಯಾಮೆರಾದಲ್ಲಿ ನಿಮ್ಮ ಮುಖವು ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಯಾವುದೇ ಶಬ್ದವಿರಬಾರದು. ಇದರೊಂದಿಗೆ, ನಿಮ್ಮ ಬ್ಯಾಕ್ ಗ್ರೌಂಡ್ ಕ್ಲಿಯರ್ ಗೋಡೆಯಾಗಿರುವುದು ಉತ್ತಮ.
6/ 8
3) ಆನ್ಲೈನ್ ಸಂದರ್ಶನಕ್ಕೂ ಡ್ರೆಸ್ ಕೋಡ್ ಇರುತ್ತೆ: ಸಂದರ್ಶನವು ಆನ್ ಲೈನ್ ಅಥವಾ ಆಫ್ ಲೈನ್ ಆಗಿರಲಿ, ಅಭ್ಯರ್ಥಿಯ ಬಟ್ಟೆ ಯಾವಾಗಲೂ ಮುಖ್ಯವಾಗುತ್ತೆ. ಸಂದರ್ಶನ ಮಾಡುವಾಗ ಯಾವಾಗಲೂ ವೃತ್ತಿಪರ ಉಡುಗೆಯನ್ನು ಧರಿಸಿ.
7/ 8
ಬಟ್ಟೆ ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನೀವು ನೋಡಲು ಸ್ಮಾರ್ಟ್ ಆಗಿ ಕಾಣುತ್ತೀರಿ. ಪ್ಯಾನೆಲ್ ಮುಂದೆ ಇಂಪ್ರೆಶನ್ ಕೂಡ ಮುಖ್ಯ. ಗಾಢ ಬಣ್ಣದ ಬಟ್ಟೆಗಳು, ಅತಿಯಾದ ಮೇಕಪ್ ಅನ್ನು ತಪ್ಪಿಸಿ.
8/ 8
4) ನಿಮ್ಮ ಬಾಡಿ ಲ್ಯಾಂಗ್ವೇಜ್ ಸರಿಯಾಗಿರಲಿ: ನೀವು ಈಗ ಕ್ಯಾಮರಾ ಮೂಲಕ ಮಾತನಾಡುತ್ತಿರುವುದರಿಂದ ಅತಿಯಾಗಿ ಕೈಗಳನ್ನು ಆಡಿಸಬೇಡಿ. ಸ್ಟಿಫ್ ಆಗಿ ಕೂಡ ಕುಳಿತುಕೊಳ್ಳುವುದು ಬೇಡ. ಆರಾಮದಾಯವಾದ ಭಂಗಿ ಇರಲಿ. ಕುರ್ಚಿ ಮೇಲೆ ಕುಳಿತು ಇಂಟರ್ ವ್ಯೂ ನೀಡುವುದು ಉತ್ತಮ. ಸಾಂಕೇತಿಕ ಚಿತ್ರ