New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

ದೊಡ್ಡ ದೊಡ್ಡ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ಮಧ್ಯೆಯೂ ಅನೇಕ ಕಂಪನಿಗಳ ಉದ್ಯೋಗಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಉದ್ಯೋಗ ನಷ್ಟದ ಸಮಯದಲ್ಲೂ ಇರುವ ಕೆಲಸವನ್ನು ಬಿಡಲು ಕಾರಣವೇನು ಗೊತ್ತೇ? ಈ ಸಂಬಂಧ ಹೊಸ ಸಮೀಕ್ಷಾ ವರದಿಯೊಂದು ಹೊರ ಬಿದ್ದಿದೆ.

First published:

  • 17

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    Job.com ನಡೆಸಿದ ಸಮೀಕ್ಷೆಯಿಂದ ಮೂರು ಆಘಾತಕಾರಿ ಕಾರಣಗಳು ಹೊರಹೊಮ್ಮಿವೆ. ಈ ಕಾರಣಗಳಿಂದಲೇ ಅನೇಕ ಉದ್ಯೋಗಿಗಳು ಕೆಲಸ ಬಿಡುತ್ತಿದ್ದಾರೆ ಹಾಗೂ ಉದ್ಯೋಗ ಬದಲಾಯಿಸುತ್ತಿದ್ದಾರೆ ಎಂಬ ಅಂಶ ತಿಳಿದು ಬಂದಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ಸಾಮಾನ್ಯವಾಗಿ ಉದ್ಯೋಗಿಗಳು ಇಷ್ಟವಿಲ್ಲದ ಕೆಲಸ, ಕಡಿಮೆ ಸಂಬಳ, ವೃತ್ತಿ ಬೆಳವಣಿಗೆ ಅಥವಾ ಬಾಸ್ ನೊಂದಿಗೆ ಜಟಾಪಟಿಯಿಂದ ಕೆಲಸ ಬಿಡುತ್ತಾರೆ. ಆದರೆ job.com ನಡೆಸಿದ ಸಮೀಕ್ಷೆಯಲ್ಲಿ ಬೇರೆಯದ್ದೇ ಮೂರು ಕಾರಣಗಳು ಹೊರಬಿದ್ದಿವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ಈ ಸಮೀಕ್ಷೆಯಲ್ಲಿ 4600ಕ್ಕೂ ಹೆಚ್ಚು ಉದ್ಯೋಗಿಗಳು ಭಾಗಿಯಾಗಿದ್ದರು. ಒಟ್ಟು 41% ಜನರು ಕಳಪೆ ವೃತ್ತಿಜೀವನದ ಬೆಳವಣಿಗೆಯಿಂದಾಗಿ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ. ಕಳಪೆ ಕೆಲಸದ ಸಂಸ್ಕೃತಿಯಿಂದಾಗಿ ಬಿಟ್ಟುಹೋದವರ ಸಂಖ್ಯೆಯೂ ದೊಡ್ಡದಿದೆ. ಉದ್ಯೋಗವನ್ನು ತೊರೆಯಲು ಇದು ದೊಡ್ಡ ಕಾರಣ ಎಂದು ನಂಬಲಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ಶೇ. 33 ರಷ್ಟು ಜನರು ಬಾಸ್ ಸರಿ ಇಲ್ಲ ಎಂಬ ಕಾರಣ ನೀಡಿ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಕಂಪನಿಯಲ್ಲಿ ಬಾಸ್ ಕಿರುಕುಳ ಇಲ್ಲದಿದ್ದರೆ ಮಾತ್ರ ಉದ್ಯೋಗಿಗಳ ಕೆಲಸ ಮಾಡಲು ಬಯಸುತ್ತಾರೆ ಎಂಬುವುದು ತಿಳಿದು ಬಂದಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ಪುರುಷ ಮತ್ತು ಮಹಿಳಾ ಮುಖ್ಯಸ್ಥರ ನಡುವೆ ಹೋಲಿಸಿದಾಗ, ಹೆಚ್ಚಿನ ಉದ್ಯೋಗಿಗಳು ಪುರುಷ ಬಾಸ್ ಅನ್ನು ಆಯ್ಕೆ ಮಾಡಿದ್ದಾರೆ. ಮಹಿಳಾ ಬಾಸ್ ಗಳು ತಲೆನೋವು, ಹೆಚ್ಚು ಕಿರಿಕಿರಿ ಮಾಡುತ್ತಾರೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ಪುರುಷ ಮೇಲಧಿಕಾರಿಗಳು ಉತ್ತಮರು ಏಕೆಂದರೆ, ಅವರನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಪರ್ಸನಲ್ ವಿಷಯಗಳ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಉದ್ಯೋಗಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    New Survey: ಹೊಸ ಸಮೀಕ್ಷೆಯಲ್ಲಿ ಮಹಿಳಾ ಬಾಸ್​ಗಳ ಬಗ್ಗೆ ಆಘಾತಕಾರಿ ಅಂಶ ಬಯಲು

    ವರ್ಕ್ ಲೈಫ್ ಬ್ಯಾಲೆನ್ಸ್ ಗೆ ಹೆಚ್ಚಿನ ಉದ್ಯೋಗಿಗಳು ಒತ್ತು ನೀಡಿದ್ದಾರೆ. ವೈಯಕ್ತಿಕ ಜೀವನಕ್ಕೆ ಕೆಲಸದಿಂದ ಅಡ್ಡಿಯಾಗುತ್ತಿದ್ದರೆ, ಆ ಕೆಲಸವನ್ನು ತೊರೆಯಲು ಉದ್ಯೋಗಿಗಳು ಮುಂದಾಗುತ್ತಿದ್ದಾರೆ ಎಂಬ ಅಂಶವೂ ಸಮೀಕ್ಷೆಯಿಂದ ತಿಳಿದು ಬಂದಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES