Travel Blogger Career: ಟ್ರಾವೆಲ್ ಬ್ಲಾಗಿಂಗ್ ಅನ್ನೇ ಫುಲ್ ಟೈಂ ಉದ್ಯೋಗ ಮಾಡಿಕೊಂಡರೆ, ಈ ಮುನ್ನೆಚ್ಚರಿಕೆಗಳಿರಲಿ
ಹವ್ಯಾಸ, ಆಸಕ್ತಿಯಾಗಿದ್ದ ಪ್ರವಾಸ ಈಗ ನಿಮ್ಮ ಫುಲ್ ಟೈಂ ಉದ್ಯೋಗ ಆಗಬಹುದು. ಅನೇಕ ಟ್ರಾವೆಲ್ ಏಜೆನ್ಸಿಗಳು ತಮ್ಮ ಪ್ರವಾಸದ ಪ್ಯಾಕೇಜ್ ಗಳನ್ನು ಪ್ರಚಾರ ಮಾಡಲು ಟ್ರಾವೆಲ್ ಬ್ಲಾಗರ್ ಗಳನ್ನು ನೇಮಿಸಿಕೊತ್ತಿವೆ. ಹೀಗಾಗಿ ನೀವು ಕೂಡ ಟ್ರಾವೆಲ್ ಬ್ಲಾಗರ್ ಆಗಬಹುದು.
ಮೊದಲು ಟ್ರಾವೆಲ್ ಬ್ಲಾಗಿಂಗ್ ಅನ್ನು ನಿಮ್ಮ ಸ್ಥಳೀಯ ನಗರದಿಂದ ಪ್ರಾರಂಭಿಸಬಹುದು. ನಿಮ್ಮ ವಿಡಿಯೋದಲ್ಲಿ ಹತ್ತಿರದ ಸ್ಥಳವನ್ನು ತೋರಿಸುವುದು ಅಥವಾ ಸ್ಮಾರಕವನ್ನು ತೋರಿಸಬಹುದು. ಹೀಗೆ ಕೆಲವೇ ಜನರಿಗೆ ತಿಳಿದಿರುವ ವಿಷಯಗಳನ್ನು ಆಯ್ಕೆ ಮಾಡುವುದು ಉತ್ತಮ.
2/ 7
ಯಾವುದೇ ಬ್ಲಾಗರ್ ಸ್ವತಂತ್ರವಾಗಿ ಕೆಲಸ ಮಾಡಲು ಬಯಸಿದರೆ, ಅರೆಕಾಲಿಕ ಬ್ಲಾಗಿಂಗ್ ಮೂಲಕ ತನ್ನ ಸ್ಟೋರಿಯನ್ನು ಬೇರೆ ಕಂಪನಿಗೆ ಕಳುಹಿಸಬಹುದು. ಇದರಿಂದ ಹಣವನ್ನು ಗಳಿಸಬಹುದು. (ಸಾಂದರ್ಭಿಕ ಚಿತ್ರ)
3/ 7
ಬ್ಲಾಗರ್ ಯೂಟ್ಯೂಬ್ ಮೂಲಕ ಬ್ಲಾಗಿಂಗ್ ಮಾಡಲು ಬಯಸಿದರೆ, ಅದರಲ್ಲಿ ಆಕರ್ಷಕ ಪ್ರೊಫೈಲ್ ಅನ್ನು ರಚಿಸಬೇಕು. ಒಳ್ಳೆಯ ಹೆಸರು, ವಿವರಣೆ ಇದ್ದರೆ ಮಾತ್ರ ಜನ ಚಾನಲ್ ನ ವಿಡಿಯೋವನ್ನು ವೀಕ್ಷಿಸುತ್ತಾರೆ. (ಸಾಂದರ್ಭಿಕ ಚಿತ್ರ)
4/ 7
ಬ್ಲಾಗ್ ಗಾಗಿ ಉತ್ತಮ ಥೀಮ್ ಆಯ್ಕೆ ಮಾಡಿ. ಏಕೆಂದರೆ ಯಾವುದೇ ಬ್ಲಾಗಿಂಗ್ ಚಾನಲ್ ಥೀಮ್ ಹೊಂದಿಲ್ಲದಿದ್ದರೆ, ವಿಷಯವು ಸ್ವಲ್ಪ ಗೊಂದಲಮಯವಾಗಿ ಕಾಣುತ್ತದೆ. ಥೀಮ್ ಯಾವುದಾದರೂ ಆಗಿರಬಹುದು. (ಸಾಂದರ್ಭಿಕ ಚಿತ್ರ)
5/ 7
ಉದಾಹರಣೆಗೆ ಕುಟುಂಬ ಪ್ರಯಾಣ, ನಿರ್ದಿಷ್ಟ ದೇಶ ಪ್ರಯಾಣ, ಹೋಟೆಲ್ ವಿಮರ್ಶೆ, ಐಷಾರಾಮಿ ಪ್ರಯಾಣ, ಬಜೆಟ್ ಪ್ರಯಾಣ ಸೇರಿದಂತೆ ಇನ್ನು ಹಲವು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
6/ 7
ಬ್ಲಾಗಿಂಗ್ ಶುರು ಮಾಡಿದಾಗಲೇ ದುಬಾರಿ ಉಪಕರಣಗಳನ್ನು ಖರೀದಿಸಬೇಡಿ. ಮೊದಮೊದಲು ಬಜೆಟ್ ನಲ್ಲೇ ಉತ್ತಮ ಬ್ಲಾಗ್ ಅನ್ನು ಸಿದ್ಧಪಡಿಸಲು ಪ್ರಯತ್ನಿಸಿ. (ಸಾಂಕೇತಿಕ ಚಿತ್ರ)
7/ 7
ಬ್ಲಾಗರ್ ಆದವರು ಕ್ಯಾಮೆರಾದ ಮುಂದೆ ಹಿಂಜರಿಕೆಯಿಲ್ಲದೆ ಮಾತಾಡಬೇಕು. ಮುಖದಲ್ಲಿ ಆತ್ಮವಿಶ್ವಾಸ ಕಂಡು ಬಂದರೆ, ಜನರು ಆ ವೀಡಿಯೊವನ್ನು ನೋಡುತ್ತಾರೆ. ಜೊತೆಗೆ ಅದನ್ನು ಮತ್ತಷ್ಟು ಜನರೊಂದಿಗೆ ಹಂಚಿಕೊಳ್ಳುತ್ತಾರೆ. (ಸಾಂಕೇತಿಕ ಚಿತ್ರ)