1. ಸುಗಂಧ ರಸಾಯನಶಾಸ್ತ್ರಜ್ಞ (ಕೆಮಿಸ್ಟ್): ಸುಗಂಧ ದ್ರವ್ಯದ ವ್ಯವಹಾರದಲ್ಲಿ ಅತ್ಯಂತ ಮಹತ್ವದ ವೃತ್ತಿಗಳಲ್ಲಿ ಇದೂ ಒಂದಾಗಿದೆ. ಸುಗಂಧ ರಸಾಯನಶಾಸ್ತ್ರಜ್ಞರು ಸುಗಂಧ ರಾಸಾಯನಿಕಗಳು ಮತ್ತು ಪರಿಮಳಗಳಲ್ಲಿ ಪರಿಣಿತರಾಗಿರುತ್ತಾರೆ. ಅವರು ವಿಭಿನ್ನ ಪರಿಮಳಗಳ ಪ್ರಯೋಗ ನಡೆಸುತ್ತಾರೆ. ವಿಭಿನ್ನ ಪರಿಮಳಗಳನ್ನು ರಚಿಸಲು ಸೂತ್ರಗಳನ್ನು ರಚಿಸುತ್ತಾರೆ. ರಸಾಯನಶಾಸ್ತ್ರಜ್ಞ ಪರಿಮಳವನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪಾದಿಸುವುದರ ಜೊತೆಗೆ ಅದು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳುವ ತಜ್ಞರಾಗಿರುತ್ತಾರೆ.
3. ಮಾರ್ಕೆಟಿಂಗ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ಸ್: ಸುಗಂಧ ವಲಯದಲ್ಲಿ, ಮಾರ್ಕೆಟಿಂಗ್ ಮತ್ತು ಮಾರಾಟ ಕಾರ್ಯನಿರ್ವಾಹಕರು ಸುಗಂಧದೃವ್ಯ ಸಂಸ್ಥೆಯ ಪ್ರಮುಖರಾಗಿದ್ದಾರೆ. ಅವರು ಮಾರಾಟ ಮತ್ತು ಬ್ರ್ಯಾಂಡ್ ಪ್ರಚಾರ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ಜೊತೆಗೆ ಉತ್ಪನ್ನ ಮಾರಾಟವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಜೊತೆಗೆ ಅವರು ಸುಗಂಧ ಕಂಪನಿಗೆ ಜಾಹೀರಾತುಗಳನ್ನು ಅಭಿವೃದ್ಧಿಪಡಿಸುವ ಮತ್ತು ಮಾಧ್ಯಮ ಜಾಹೀರಾತಿಗಾಗಿ ವ್ಯವಸ್ಥೆ ಮಾಡುವ ಉಸ್ತುವಾರಿ ವಹಿಸುತ್ತಾರೆ.