Best Month for Job Search: ವರ್ಷದ ಯಾವ ತಿಂಗಳಲ್ಲಿ ದೊಡ್ಡ ಸಂಬಳದ ಕೆಲಸಗಳು ಸಿಗುತ್ತವೆ? ಶೀಘ್ರದಲ್ಲೇ ಇದೆ ಆ ಸಮಯ
ಹೊಸದಾಗಿ ಕೆಲಸಕ್ಕೆ ಸೇರುವುದು, ಕೆಲಸ ಬದಲಾಯಿಸುವುದು ಪ್ರತಿಯೊಬ್ಬ ಉದ್ಯೋಗಿಯ ಕರಿಯರ್ ನಲ್ಲೂ ಮಹತ್ವದ ಸಂಗತಿ. ಇದನ್ನು ಯಾವಾಗ ಮಾಡಿದರೆ ನಿಮಗೆ ಹೆಚ್ಚು ಲಾಭ ಸಿಗುತ್ತದೆ ಎಂದು ಉದ್ಯೋಗಿಯಾದವರು ತಿಳಿದಿರಲೇಬೇಕು. ಜಾಬ್ ಮಾರ್ಕೆಟ್ ಬಗ್ಗೆ ಜ್ಞಾನ ಇದ್ದರೆ ಮಾತ್ರ ಒಳ್ಳೆಯ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.
ಹಾಗಾದರೆ ವರ್ಷದ ಯಾವ ತಿಂಗಳಲ್ಲಿ ಜಾಬ್ ಮಾರ್ಕೆಟ್ ಚೆನ್ನಾಗಿರುತ್ತದೆ? ವರ್ಷದ ಯಾವ ತಿಂಗಳಲ್ಲಿ ದೊಡ್ಡ ಸಂಬಳದ ಕೆಲಸಗಳು ಸಿಗುತ್ತವೆ? ಯಾವ ತಿಂಗಳಲ್ಲಿ ಕೆಲಸ ಹುಡುಕಲು ಶುರು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
2/ 7
1) ಜನವರಿ to ಮಾರ್ಚ್: ಕೆಲಸ ಹುಡುಕಲು ನಿಜಕ್ಕೂ ವರ್ಷದ ಆರಂಭಿಕ 3 ತಿಂಗಳುಗಳು ಬೆಸ್ಟ್ ಅಂತಲೇ ಹೇಳಬೇಕು. ಸಾಲದಕ್ಕೆ ಡಿಸೆಂಬರ್ ಕಳೆದು ಹೊಸ ವರ್ಷ ಶುರುವಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಸದ್ಯದಲ್ಲೇ ಸುಗ್ಗಿ ಸಮಯ ಎನ್ನಬಹುದು.
3/ 7
ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗವನ್ನು ಹುಡುಕಲು ಇದು ಸೂಕ್ತ ಸಮಯ. ಹೆಚ್ಚಿನ MNC ಗಳಲ್ಲಿ ನೀವು ಜನವರಿ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಬಹುದು. ಏಕೆಂದರೆ ಇದು ವಾರ್ಷಿಕ ಬಜೆಟ್ ಅನ್ನು ನಿರ್ಧರಿಸುವ ಸಮಯ ಹೀಗಾಗಿ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚು.
4/ 7
2) ಏಪ್ರಿಲ್ to ಜೂನ್: ವಿಶೇಷವಾಗಿ ಭಾರತೀಯ ಸಂಸ್ಥೆಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಧಿಯಾಗಿದೆ. ಆರ್ಥಿಕ ವರ್ಷ ಮಾರ್ಚ್ ನಲ್ಲಿ ಕೊನೆಗೊಳ್ಳುವುದರಿಂದ ಹೊಸ ಬಜೆಟ್ ನೊಂದಿಗೆ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗುತ್ತವೆ. ಸಾಂದರ್ಭಿಕ ಚಿತ್ರ
5/ 7
3) ಜುಲೈ to ಸೆಪ್ಟೆಂಬರ್: ವರ್ಷದ ಮಧ್ಯಭಾಗವು ಹೊಸ ಉದ್ಯೋಗವನ್ನು ಹುಡುಕಲು ಒಳ್ಳೆಯ ಸಮಯವಲ್ಲ. ಕಂಪನಿಗಳು ವರ್ಷದ ಆರಂಭದಲ್ಲಿ ಹೆಚ್ಚಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತವೆ. ಈ ಅವಧಿಯಲ್ಲಿ ಬಡ್ತಿಗಳು ಹೆಚ್ಚಾಗಿ ನಡೆಯುತ್ತವೆ. ಸಾಂದರ್ಭಿಕ ಚಿತ್ರ
6/ 7
ಹೆಚ್ಚಿನ ಜನರಿಗೆ ಈ ತಿಂಗಳುಗಳ ಬಗ್ಗೆ ತಿಳಿದಿದೆ. ಆದರಿಂದಲೇ ಈ ಸಮಯದಲ್ಲಿ ಅವರು ಸಾಮಾನ್ಯವಾಗಿ ಉದ್ಯೋಗಗಳನ್ನು ಹುಡುಕುವುದಿಲ್ಲ. ಇದರರ್ಥ ಸ್ಪರ್ಧೆಯು ಅತ್ಯಂತ ಕಡಿಮೆಯಾಗಿರುತ್ತೆ. ಯಾವುದೇ ಖಾಲಿ ಹುದ್ದೆಗಳು ಇದ್ದಲ್ಲಿ, ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ.
7/ 7
4) ಅಕ್ಟೋಬರ್ to ಡಿಸೆಂಬರ್: ವರ್ಷದ ಕೊನೆ ತಿಂಗಳುಗಳಲ್ಲಿ ಜನರು ರಜೆಯಲ್ಲಿದ್ದಾರೆ ಆದ್ದರಿಂದ ಜಾಬ್ ಇಂಟರ್ ವ್ಯೂಗೆ ಕರೆಯಲು ಸಮಯ ತೆಗೆದುಕೊಳ್ಳುತ್ತಾರೆ. ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿ ಕಾಯುವವರಾಗಿದ್ದರೆ, ನಿಮಗೆ ಈ ಟೈಂ ಬೆಸ್ಟ್.