Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

ನಮ್ಮ ಜೀವನದಂತೆ ವೃತ್ತಿಜೀವನದಲ್ಲೂ ಅನೇಕ ಟರ್ನಿಂಗ್ ಪಾಯಿಂಟ್ ಗಳು ಬರುತ್ತವೆ. ಆಗ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಕರಿಯರ್ ನ ದಾರಿಯನ್ನೇ ಬದಲಿಸಿಬಿಡುತ್ತೆ. ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲಗಳು ಆಗುವುದು ಸಹಜ.

First published:

  • 18

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ಎಲ್ಲಾ ಯಶಸ್ವಿ ವ್ಯಕ್ತಿಗಳೂ ಎಲ್ಲಾ ಸಮಯದಲ್ಲೂ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಂಡಿರುವುದಿಲ್ಲ. ಒಂದು ತಪ್ಪು ನಿರ್ಧಾರದಿಂದ ಸಾಕಷ್ಟು ನಷ್ಟವನ್ನು ಅನುಭವಿಸುತ್ತಾರೆ. ಹೀಗೆ ಆದಾಗ ಬೇರೆಯವರ ತಪ್ಪಿನಿಂದ ನಾವು ಕಲಿಯುವುದು ಸಾಕಷ್ಟಿರುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 28

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ವೃತ್ತಿ ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅನುಭವಸ್ಥರ ಪ್ರಕಾರ ಒಂದು ಸೂತ್ರವಿದೆ, ಅದುವೇ 10/10/10. ಯಾವುದೇ ನಿರ್ಧಾರದ ಬಗ್ಗೆ ನಿಮಗೆ ಸಂದೇಹವಿದ್ದರೆ, ನೀವು ತಕ್ಷಣ 10/10/10 ಪರೀಕ್ಷೆಯನ್ನು ಮಾಡಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 38

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ಈ ಸೂತ್ರದ ಪ್ರಕಾರ ನಿಮ್ಮ ನಿರ್ಧಾರವನ್ನು 3 ಭಾಗಗಳಾಗಿ ವಿಭಜಿಸಿ ನಂತರ ಅದನ್ನು ಪರಿಗಣಿಸಿ ಎಂದರ್ಥ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಆ ನಿರ್ಧಾರದಿಂದ 10 ವಾರಗಳು, 10 ತಿಂಗಳುಗಳು ಹಾಗೂ 10 ವರ್ಷಗಳ ನಂತರ ಯಾವ ಪ್ರತಿಫಲ ಸಿಗುತ್ತೆ ಎಂದು ಅಂದಾಜಿಸುವುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 48

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ನಿಮ್ಮ ನಿರ್ಧಾರದಿಂದ 10 ವಾರಗಳಲ್ಲಿ ಏನೆಲ್ಲಾ ಸಾಧಕ-ಬಾಧಕಗಳನ್ನು ಎದುರಿಸಬೇಕಾಗುತ್ತೆ ಎಂದು ವಿಶ್ಲೇಷಿಸುವುದು. ಇದೇ ರೀತಿ 10 ತಿಂಗಳು, 10 ವರ್ಷಗಳ ಬಗ್ಗೆಯೂ ವಿಶ್ಲೇಷಣೆ ಮಾಡಬೇಕು. ಆಗ ನಿಮ್ಮ ನಿಮ್ಮ ನಿರ್ಧಾರದ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರುತ್ತೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 58

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ಕೆಲವೊಮ್ಮೆ ಅತಿಯಾದ ಆಲೋಚನೆಯಿಂದ ನಿರ್ಧಾರಗಳು ತಪ್ಪಾಗುತ್ತವೆ. ಅದಕ್ಕಾಗಿಯೇ ನೀವು ಅತಿಯಾಗಿ ಯೋಚಿಸುವುದನ್ನು ತಪ್ಪಿಸಬೇಕು. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ, ಎಚ್ಚರಿಕೆಯಿಂದ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಿ. ಒಮ್ಮೆ ನಿರ್ಧಾರ ತೆಗೆದುಕೊಂಡ ಬಳಿಕ ಬದಲಿಸಬೇಡಿ. ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 68

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ಒಂದು ನಿರ್ಧಾರ ತೆಗೆದುಕೊಂಡ ಬಳಿಕ ಮೊದಮೊದಲೇ ಎಲ್ಲವೂ ನೀವು ಅಂದುಕೊಂಡರೆ ಇರುವುದಿಲ್ಲ. ಕೆಲವೊಂದು ನಿರ್ಧಾರಗಳು ದೀರ್ಘಾವಧಿಯಲ್ಲಿ ಯಶಸ್ಸನ್ನು ನೀಡುತ್ತೆ. ಇದಕ್ಕಾಗಿ ನೀವು ತಾಳ್ಮೆಯಿಂದ ಕಾಯಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 78

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ವೃತ್ತಿಜೀವನದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಫಲ ನೀಡಲಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಬರಲು 10/10/10 ಸೂತ್ರ ನಿಜಕ್ಕೂ ಸಹಾಯಕಾರಿಯಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 88

    Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ

    ಇನ್ನು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಗಳನ್ನು ಮಾಡುವುದಾದರೆ ನಿಮ್ಮ ವಯಸ್ಸು 35ರೊಳಗೆ ಇರುವಾಗಲೇ ತೆಗೆದುಕೊಳ್ಳಿ. ನಿಮ್ಮ ನಿರ್ಧಾರ ತಪ್ಪಾಗಿದ್ದರೆ, ತಿದ್ದಿಕೊಂಡು ಪುನಾರಂಭಿಸಲು ಸಮಯ ಇರುತ್ತದೆ. ವಯಸ್ಸಾದ ಮೇಲೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ತಿದ್ದಿಕೊಳ್ಳಲು, ಮತ್ತೆ ಶುರು ಮಾಡಲು ಕಷ್ಟವಾಗುತ್ತೆ ಅನ್ನೋದನ್ನು ಮರೆಯಬೇಡಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES