Joining Bonus: ಕೆಲಸಕ್ಕೆ ಜಾಯ್ನ್ ಆದ ಮೊದಲ ದಿನವೇ ದೊಡ್ಡ ಮೊತ್ತದ ಬೋನಸ್ ಪಡೆಯಬಹುದು
Salary Negotiation: ಕೆಲ ಕಂಪನಿಗಳಲ್ಲಿ ದೀಪಾವಳಿಗೆ ಬೋನಸ್ ನೀಡುವ ಪದ್ಧತಿ ಈಗಲೂ ಇದೆ. ಕೆಲವು ಸಂಸ್ಥೆಗಳು ಹೆಚ್ಚಿನ ಲಾಭ ಗಳಿಸಿದಾಗ ತನ್ನ ಉದ್ಯೋಗಿಗಳಿಗೆ ಇಂತಿಷ್ಟು ಹಣವನ್ನು ಬೋನಸ್ ಎಂದು ನೀಡುತ್ತಾರೆ. ಆದರೆ ಹೊಸದಾಗಿ ಕೆಲಸಕ್ಕೆ ಸೇರಿದ ದಿನವೇ ಉದ್ಯೋಗಿಗಳು ಬೋನಸ್ ಪಡೆಯಬಹುದು. ಅದು ಹೇಗೆ ಎಂದು ತಿಳಿಯಿರಿ.
ಬಹುತೇಕ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನವೇ ಕೊಡುವ ಬೋನಸ್ ಅನ್ನು ಜಾಯ್ನಿಂಗ್ ಬೋನಸ್ ಎನ್ನುತ್ತಾರೆ. ಹೆಚ್ಚಿನ ಕಂಪನಿಗಳಲ್ಲಿ ಈ ಆಯ್ಕೆ ಇದೆ. ಉದ್ಯೋಗಿ ಹೊಸದಾಗಿ ಕೆಲಸಕ್ಕೆ ಸೇರಿದ ದಿನವೇ ಅವರ ಅಕೌಂಟ್ ಗೆ ಹಣ ಹಾಕಲಾಗುತ್ತೆ.
2/ 7
ಈ ಜಾಯ್ನಿಂಗ್ ಬೋನಸ್ ಅನ್ನು ಹೇಗೆ, ಎಲ್ಲಿ, ಯಾವ ರೀತಿ ಪಡೆಯಬೇಕೆಂಬ ಮಾಹಿತಿ ಇಲ್ಲಿದೆ. ನಮ್ಮಲ್ಲಿ ಹೆಚ್ಚಿನ ಉದ್ಯೋಗಿಗಳು ಹುದ್ದೆಗಳನ್ನು, ಕಂಪನಿಗಳನ್ನು ಬದಲಿಸುವುದು ಜಾಸ್ತಿ ಸಂಬಳ ಪಡೆಯಲು. ಕೆಲಸ ಫೈನಲ್ ಆದ ತಕ್ಷಣ HR ನಿಮ್ಮ ಬಳಿ ವೇತನದ ಬಗ್ಗೆ ಮಾತನಾಡುತ್ತಾರೆ.
3/ 7
ಹಿಂದಿನ ಸಂಬಳದ ಮೇಲೆ ಇಂತಿಷ್ಟು ಪರ್ಸೆಂಟ್ ಹೈಕ್ ನೀಡುವುದಾಗಿ ಎಚ್ ಆರ್ ಹೇಳುತ್ತಾರೆ. ಆದರೆ ನಿಮಗೆ ಆ ಹೈಕ್ ಕಡಿಮೆ ಎನಿಸುತ್ತೆ. ಮತ್ತಷ್ಟು ಹೆಚ್ಚಿನ ಸಂಬಳವನ್ನು ಕೊಡುವಂತೆ ಕೇಳುತ್ತಿರಿ. ಕಂಪನಿಗೆ ನೀವು ಬೇಕಾಗಿರುತ್ತೀರಿ, ನಿಮಗೆ ಕೆಲಸ ಬೇಕಾಗಿರುತ್ತದೆ. ಆದರೆ ಸಂಬಳದ ವಿಚಾರ ಇಬ್ಬರಿಗೂ ಸಮಾಧಾನ ಇರುವುದಿಲ್ಲ.
4/ 7
ಇಂತಹ ಸಮಯದಲ್ಲೇ ಇಬ್ಬರಿಗೂ ಒಪ್ಪಿಗೆಯಾಗುವಂತೆ ಜಾಯ್ನಿಂಗ್ ಬೋನಸ್ ಬಗ್ಗೆ ಮಾತನಾಡಲಾಗುತ್ತೆ. ಕಂಪನಿಯವರೇ ಜಾಯ್ನಿಂಗ್ ಬೋನಸ್ ಅನ್ನು ಆಫರ್ ಮಾಡಲಿ ಎಂದು ಕಾಯಬೇಡಿ. ನೀವೇ ಅದನ್ನು ಕೇಳಬಹುದು.
5/ 7
ಉದಾಹರಣೆಗೆ ನೀವು ವಾರ್ಷಿಕ 7 ಲಕ್ಷದ ಪ್ಯಾಕೇಜ್ ಕೇಳುತ್ತಿರುತ್ತೀರಿ. HR 5.5 ಅಥವಾ 6 ಲಕ್ಷದ ಪ್ಯಾಕೇಜ್ ಅಷ್ಟೇ ಕೊಡಲು ಸಾಧ್ಯ ಎನ್ನುತ್ತಾರೆ. ಆಗ 2 ಲಕ್ಷವನ್ನು ಕಂಪನಿಯವರು ಜಾಯ್ನಿಂಗ್ ಬೋನಸ್ ಆಗಿ ಕೊಡಬಹುದು. ಅಥವಾ ನಿಮ್ಮ 2 ತಿಂಗಳ ಸಂಬಳದಷ್ಟು (3-4 ಕೂಡ ಆಗಬಹುದು) ಹಣವನ್ನು ಜಾಯ್ನಿಂಗ್ ಬೋನಸ್ ಆಗಿ ಕೊಡುತ್ತಾರೆ.
6/ 7
ತಿಂಗಳ ಸಂಬಳವೇ ಬೇರೆ, ಈ ಜಾಯ್ನಿಂಗ್ ಬೋನಸ್ಸೇ ಬೇರೆ. ಹೆಚ್ಚಿನ ಕಂಪನಿಗಳು ಇದಕ್ಕಾಗಿಯೇ ಬಜೆಟ್ ಅನ್ನು ಇಟ್ಟುಕೊಂಡಿರುತ್ತಾರೆ ಎಂಬುವುದನ್ನು ಮರೆಯಬೇಡಿ. ಸ್ಯಾಲರಿ ಕೇಳಿದಷ್ಟು ಕೊಡುತ್ತಿಲ್ಲ ಎಂದು ಅವಕಾಶವನ್ನು ಕೈ ಚೆಲ್ಲುವ ಬದಲು ಹೀಗೆ ಜಾಯ್ನಿಂಗ್ ಬೋನಸ್ ಪಡೆದುಕೊಳ್ಳಿ. ಸಾಂದರ್ಭಿಕ ಚಿತ್ರ
7/ 7
ಕೆಲಸಕ್ಕೆ ಜಾಯ್ನ್ ಆದ ಮೊದಲ ದಿನವೇ ಸಿಗುವ ಬೋನಸ್ ಅನ್ನು ಒಳ್ಳೆಯ ಹೂಡಿಕೆಯನ್ನಾಗಿ ಮಾಡಿಕೊಳ್ಳಿ. ನಿಗದಿತವಾಗಿ ಬಡ್ಡಿ ಬರುವಂತೆ ಮಾಡಿ. ಮುಂದಿನ 3, 5 ವರ್ಷಗಳಲ್ಲಿ ಹೆಚ್ಚಿನ ಹಣ ಆಗುವಂತೆ ಹೂಡಿಕೆ ಮಾಡುವುದು ಜಾಣತನ. ಮುಂದಿನ ಸಲ ಕೆಲಸಕ್ಕೆ ಸೇರುವಾಗ ಜಾಯ್ನಿಂಗ್ ಬೋನಸ್ ಕೇಳುವುದನ್ನು ಮರೆಯಬೇಡಿ. (ಪ್ರಾತಿನಿಧಿಕ ಚಿತ್ರ)