Job Search: 2023ರಲ್ಲಿ ಕೆಲಸ ಹುಡುಕುವವರಿಗೆ ಬ್ಯಾಡ್ ನ್ಯೂಸ್!
ಶೀಘ್ರವೇ ಹೊಸ ವರ್ಷ 2023ಕ್ಕೆ ಕಾಲಿಡಲಿದ್ದೇವೆ. ಎಲ್ಲಾ ರಂಗಗಳಲ್ಲೂ ಹೊಸ ವರ್ಷದ ಮೇಲೆ ನಿರೀಕ್ಷೆಗಳಿರುತ್ತವೆ. ಔದ್ಯೋಗಿಕ ರಂಗವೂ 2023ರತ್ತ ಭರವಣೆಯ ಕಣ್ಣುಗಳಿಂದ ನೋಡುತ್ತಿದೆ. 2023ರಲ್ಲಿ ಹೊಸದಾಗಿ ಕೆಲಸ ಹುಡುಕಲು ಯೋಚಿಸಿರುವವರು, ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಒಳ್ಳೆಯ ಸುದ್ದಿ ಇಲ್ಲ ಅಂತಲೇ ಹೇಳಬಹುದು.
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ಆರ್ಥಿಕ ಹಿಂಜರಿತಕ್ಕೆ ತಯಾರಾಗುತ್ತಿರುವ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳಿಗಳನ್ನು ವಜಾ ಮಾಡಿದೆ. ಈಗಷ್ಟೇ ಲೇಆಫ್ ಮಾಡಿರುವುದರಿಂದ ತಕ್ಷಣಕ್ಕೆ ದೊಡ್ಡ ಟೆಕ್ ಕಂಪನಿಗಳು ನೇಮಕಾತಿಗಳಿಗೆ ಮುಂದಾಗುವುದಿಲ್ಲ.
2/ 7
ಭಾರತದಲ್ಲೂ ಲೇ ಆಫ್ ಅಲೆ ದೊಡ್ಡದಾಗಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಮಾತ್ರವಲ್ಲ, ಸಣ್ಣ ಕಂಪನಿಗಳು ಈಗ ಹೊಸದಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ತಡೆ ಹಿಡಿದಿದ್ದಾರೆ. ಸಾಂದರ್ಭಿಕ ಚಿತ್ರ
3/ 7
ಈ ಎಲ್ಲಾ ಬೆಳವಣಿಗೆಗಳಿಂದ ಉದ್ಯೋಗ ರಂಗ 2023ನೇ ವರ್ಷದಲ್ಲಿ ಮಂಕಾಗಲಿದೆ. ಈ ಹಿಂದೆ ನೀವು ಕೆಲಸ ಹುಡುಕುವಾಗ ನಿಮಗೆ 7-8 ಕಂಪನಿಗಳಿಂದ ಇಂಟರ್ ವ್ಯೂಗೆ ಕರೆಗಳು ಬರುತ್ತಿದ್ದರೆ, ಈಗ ಅದರ ಸಂಖ್ಯೆ 2-3ಕ್ಕೆ ಇಳಿಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
4/ 7
ಇನ್ನು ಕೆಲಸ ಸಿಕ್ಕರೂ ದೊಡ್ಡ ಸಂಬಳವನ್ನು ನಿರೀಕ್ಷಿಸುವವರಿಗೆ ನಿರಾಸೆಯಾಗಲಿದೆ. ಏಕೆಂದರೆ ಈ ಹಿಂದೆ 50-70% ನಷ್ಟು ಸ್ಯಾಲರಿ ಹೈಕ್ ನೀಡುತ್ತಿದ್ದ ಕಂಪನಿಗಳು ಈಗ 20-30%ಗೆ ಇಳಿದಿವೆ. ಹೀಗಾಗಿ ಕಂಪನಿ ಬದಲಾಯಿಸಿದರೂ ಹೆಚ್ಚಿನ ಸಂಬಳ ಸಿಗುವುದು ಅನುಮಾನ ಅಂತಲೇ ಹೇಳಬಹುದು.
5/ 7
ಇಡೀ ನೇಮಕಾತಿ ಪ್ರಕ್ರಿಯೆಯೇ ನಿಧಾನಗತಿಯಲ್ಲಿ ಸಾಗಲಿದೆ. ಹೊಸ ಉದ್ಯೋಗಗಳ ಸಂಖ್ಯೆಯಲ್ಲಿ ದೊಡ್ಡಮಟ್ಟದ ಇಳಿಕೆ ಕಂಡು ಬರಲಿದೆ. ಹೀಗಾಗಿ ಉದ್ಯೋಗಿಗಳು ಕೆಲಸ ಬದಲಿಸಲು ಬಯಸಿದ್ದರೆ, ಇನ್ನೂ ಒಂದಷ್ಟು ದಿನಗಳ ಕಾಲ ಕಾಯುವುದು ಲೇಸು.
6/ 7
2023ರಲ್ಲಿ ಕೆಲವು ತಿಂಗಳುಗಳು ಉರುಳಿದ ಬಳಿಕ ಜಾಬ್ ಮಾರ್ಕೆಟ್ ಸುಧಾರಿಸಬಹುದು ಎಂಬ ನಿರೀಕ್ಷೆಗಳಿವೆ. ಅದರಿಂದ ಕಾದು ಉದ್ಯೋಗಿಗಳು ಮುಂದುವರೆಯುವುದು ಉತ್ತಮ. ಸಾಂದರ್ಭಿಕ ಚಿತ್ರ
7/ 7
ಇನ್ನು ಈಗಷ್ಟೇ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ವೇತನದ ನಿರೀಕ್ಷೆ ಇಟ್ಟುಕೊಳ್ಳದೇ ಇರುವುದು ಬೇಡ. ಸಿಕ್ಕ ಕೆಲಸವನ್ನು ಮಾಡುವುದು ಕೂಡ ಒಳ್ಳೆಯದು. ಒಮ್ಮೆ ಜಾಬ್ ಮಾರ್ಕೆಟ್ ಸುಧಾರಿಸಿದ ಬಳಿಕ ಒಳ್ಳೆಯ ಕಂಪನಿಗೆ ಜಾಯ್ನ್ ಆಗಬಹುದು.