UPSC Success Story: IRS ಅಧಿಕಾರಿ ಸಮೀರ್ ವಾಂಖೆಡೆ ಹಿನ್ನೆಲೆ ಏನು? ದಕ್ಷ ಅಧಿಕಾರಿನಾ, ಲಂಚಕೋರನಾ?
IRS Sameer Wankhede: ಅತ್ಯಂತ ಜನಪ್ರಿಯ IRS ಅಧಿಕಾರಿ ಸಮೀರ್ ವಾಂಖೆಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಆರ್ಯನ್ ಖಾನ್ ಡ್ರಗ್ ಪ್ರಕರಣದಲ್ಲಿ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಸಮೀರ್ ವಾಂಖೆಡೆ ಯಾರು? ಅವರು UPSC ತೇರ್ಗಡೆಯಾದ ನಂತರ IRS ಆದದ್ದು ಹೇಗೆ ಎಂದು ತಿಳಿಯೋಣ.
ಭಾರತೀಯ ಕಂದಾಯ ಸೇವೆಯ (IRS) 2008 ರ ಬ್ಯಾಚ್ ಅಧಿಕಾರಿ ಸಮೀರ್ ವಾಂಖೆಡೆ 1979ರ ಡಿಸೆಂಬರ್ 14 ರಂದು ಮುಂಬೈನಲ್ಲಿ ಜನಿಸಿದರು. ಅವರು ಮರಾಠಿ ದಲಿತ ಕುಟುಂಬದಿಂದ ಬಂದವರು. ಅವರ ತಂದೆ ಜ್ಞಾನದೇವ್ ವಾಂಖೆಡೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು. ಅವರ ಸಹೋದರಿ ಕ್ರಿಮಿನಲ್ ವಕೀಲರಾಗಿದ್ದಾರೆ.
2/ 7
ಸಮೀರ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಪೂರೈಸಿದ್ದಾರೆ. ಇದಾದ ನಂತರ ಅವರು ಇತಿಹಾಸ ವಿಷಯದಲ್ಲಿ ಬಿಎ ಮಾಡಿದ್ದಾರೆ. ಪದವಿಯ ನಂತರ, ಅವರು UPSC ಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
3/ 7
ಯುಪಿಎಸ್ ಸಿಯಲ್ಲಿ ಸಮೀರ್ 561ನೇ ರ್ಯಾಂಕ್ ಪಡೆದಿದ್ದಾರೆ. ಅವರು 2008 ರಲ್ಲಿ ಭಾರತೀಯ ಕಂದಾಯ ಸೇವೆಗೆ ಸೇರಿದರು. ತಂದೆ-ತಾಯಿ ಮತ್ತು ದೇವರ ಆಶೀರ್ವಾದದಿಂದ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು ಎನ್ನುತ್ತಾರೆ ಅವರು.
4/ 7
ಮುಂಬೈ ವಿಮಾನ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ ಕಮಿಷನರ್ ಆಗಿ ಸಮೀರ್ ಅವರ ಮೊದಲ ಪೋಸ್ಟಿಂಗ್ ಆಗಿತ್ತು. ಈ ಹುದ್ದೆಯಲ್ಲಿರುವಾಗಲೇ ಹಲವು ಡ್ರಗ್ ದಂಧೆಗಳನ್ನು ಬಯಲಿಗೆಳೆದಿದ್ದರು.
5/ 7
ಇಷ್ಟೇ ಅಲ್ಲ, 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ತಂಡ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸಮೀರ್ ಚಿನ್ನದಿಂದ ಮಾಡಿದ ಟ್ರೋಫಿಯನ್ನು ವಶಪಡಿಸಿಕೊಂಡು ಕಸ್ಟಮ್ ಸುಂಕವನ್ನು ಪಡೆದ ನಂತರವೇ ಬಿಡುಗಡೆ ಮಾಡಿದರು.
6/ 7
ಸಮೀರ್ ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಎನ್ ಐಎಯಲ್ಲಿಯೂ ಕೆಲಸ ಮಾಡಿದ್ದಾರೆ. ಇದಾದ ನಂತರ ಮುಂಬೈ ಯೂನಿಟ್ ಆಫ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ನೇಮಕಗೊಂಡರು. ಇಲ್ಲಿ ಅವರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರು ಸೇರಿದಂತೆ ಅನೇಕ ಉನ್ನತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡರು.
7/ 7
ಆದರೆ ಸಮೀರ್ ವಾಂಖೆಡೆ ಅವರು 2021 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಕ್ರೂಸ್ ನಿಂದ ಬಂಧಿಸಿದಾಗ ಹೆಚ್ಚು ಸುದ್ದಿಯಾದರು. ಇದೀಗ ಈ ಪ್ರಕರಣದಲ್ಲಿ 25 ಕೋಟಿ ರೂಪಾಯಿ ಸುಲಿಗೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
First published:
17