Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

ಅಭ್ಯರ್ಥಿಗಳು ಒಂದೊಳ್ಳೆಯ ಉದ್ಯೋಗಕ್ಕೆ ಹತ್ತಾರು ಕಡೆ ಹುಡುಕುವಂತೆ, ಕಂಪನಿಗಳು ಕೂಡ ಒಳ್ಳೆಯ ಉದ್ಯೋಗಿಗಾಗಿ ಹತ್ತಾರು ಮಂದಿಯನ್ನು ಇಂಟರ್ ವ್ಯೂ ಮಾಡುತ್ತದೆ. ಒಂದೇ ಹುದ್ದೆ ಖಾಲಿ ಇದ್ದರೂ ಅನೇಕರ ಸಂದರ್ಶನ ತೆಗೆದುಕೊಳ್ಳುತ್ತಾರೆ.

First published:

  • 18

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ಬೆಸ್ಟ್ ಎನಿಸುವ ಅಭ್ಯರ್ಥಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಎಲ್ಲಾ ಕಂಪನಿಗಳೂ ಬಯಸುತ್ತವೆ. ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರಲ್ಲಿ ಕೆಲವೊಂದು ನಿಜಕ್ಕೂ ಟ್ರಿಕ್ಕಿ ಪ್ರಶ್ನೆಗಳು ಎನ್ನಬಹುದು.

    MORE
    GALLERIES

  • 28

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ಟ್ರಿಕ್ಕಿ ಪ್ರಶ್ನೆಗೆ ಉತ್ತರಿಸುವಾಗ ಅಭ್ಯರ್ಥಿಯೂ ಕೊಂಚ ಎಡವಿದ್ರೂ. ಉದ್ಯೋಗವಕಾಶವನ್ನು ಕಳೆದುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಆ ರೀತಿಯ ಪ್ರಶ್ನೆಗೆ ಉತ್ತರಿಸುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 38

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ಸಂದರ್ಶನದ ಕೊನೆಯಲ್ಲಿ, ಈ ಕೆಲಸ ನಿಮಗೆ ಸಿಗದಿದ್ದರೆ ಮುಂದೇನು ಮಾಡುತ್ತೀರಿ ಎಂದು ಸಂದರ್ಶಕರು ಕೇಳುತ್ತಾರೆ. ಇದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸಬೇಕು. ಆಗ ಮಾತ್ರ ಸಂದರ್ಶಕರು ಇಂಪ್ರೆಸ್ ಆಗುತ್ತಾರೆ. ನಿಮಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

    MORE
    GALLERIES

  • 48

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ನನಗೆ ಈ ಕೆಲಸದ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲ ತಿಂಗಳುಗಳಿಂದ ಉದ್ಯೋಗವಿಲ್ಲದೆ ಖಾಲಿ ಕೂತಿದ್ದೇನೆ. ದಯವಿಟ್ಟು ಈ ಕೆಲಸವನ್ನು ನನಗೇ ನೀಡಿ. ನನಗೆ ಇದರ ಅವಶ್ಯಕತೆ ಇದೆ ಎಂದು ಹೇಳುವುದು ನಿಜಕ್ಕೂ ಸೂಕ್ತವಲ್ಲ. ಭಾವನಾತ್ಮಕವಾಗಿ ಸಂದರ್ಶಕರ ಮೇಲೆ ಭಾರ ಹಾಕಿದಂತೆ ಆಗುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 58

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ನನಗೆ ಈ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಕಾನ್ಫಿಡೆನ್ಸ್ ಇದೆ ಎಂದು ಕೂಡ ಉತ್ತರಿಸಬೇಡಿ. ಅತಿಯಾದ ಆತ್ಮವಿಶ್ವಾಸವಿದೆ ಎಂದು ಸಂದರ್ಶಕರು ನಿಮ್ಮ ಬಗ್ಗೆ ಭಾವಿಸುತ್ತಾರೆ. ಕೆಲಸ ಸಿಗದೆಯೇ ಇರಬಹುದು ಎಂಬ ಸಾಧ್ಯತೆ ಬಗ್ಗೆ ನೀವು ತಯಾರಿಯೇ ನಡೆಸಿಲ್ಲ ಎಂಬ ಅರ್ಥ ಬರುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 68

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ಹಾಗಾದರೆ ಸರಿಯಾಗಿ ಉತ್ತರಿಸುವುದು ಹೇಗೆ? : ಹೌದು, ನನಗೆ ಗೊತ್ತಿದೆ ಖಾಲಿ ಉಳಿದಿರುವ ಹುದ್ದೆಗಳಿಗೆ ನೀವು ಸಾಕಷ್ಟು ಅಭ್ಯರ್ಥಿಗಳನ್ನು ಸಂದರ್ಶಿಸುತ್ತಿದ್ದೀರಿ. ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವು ನನಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ನಾನು ಸೂಕ್ತ ಅಭ್ಯರ್ಥಿಯಾಗಿದ್ದರೂ ಅವಕಾಶದ ಕೊರತೆಯಿಂದ ಉದ್ಯೋಗ ನನ್ನ ಕೈ ತಪ್ಪಬಹುದು. ಅಥವಾ ನನ್ನ ಕಡೆಯಿಂದ ಯಾವುದೇ ಕಾರಣವಿದ್ದು, ಅದರಿಂದ ಕೆಲಸ ಸಿಗಲಿಲ್ಲವೆಂದರೆ ಆ ಕಾರಣವನ್ನು ತಿಳಿದುಕೊಳ್ಳಲು ಪ್ರಶ್ನಿಸುವೆ. ಮುಂದಿನ ಸಂದರ್ಶನಗಳಿಗಾಗಿ ಆ ನಿಟ್ಟಿನಲ್ಲಿ ನನ್ನನ್ನು ನಾನು ಸುಧಾರಿಸಿಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನಿಸುವೆ ಎಂದು ಉತ್ತರಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Interview Tips-24: ಈ ಕೆಲಸ ಸಿಗದಿದ್ದರೆ ಮುಂದೇನು ಮಾಡುತ್ತೀರಿ? ಹೀಗೆ ಕೇಳಿದ್ರೆ ಅಭ್ಯರ್ಥಿಗಳು ಸ್ಮಾರ್ಟ್ ಆಗಿ ಉತ್ತರಿಸಬೇಕು

    ನಿಮ್ಮ ಉತ್ತರದಿಂದ ಖಂಡಿತವಾಗಿಯೂ ಇಂಪ್ರೆಸ್ ಆಗುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ನಿಮ್ಮ ಗುಣ ಯಾರಿಗಾದರೂ ಇಷ್ಟವಾಗಬಹುದು.

    MORE
    GALLERIES