Interview Tips-14: ಮೊದಲ ಬಾರಿಗೆ ಉದ್ಯೋಗ ಸಂದರ್ಶನ ಎದುರಿಸುವವರು 5 ವಿಷಯಗಳನ್ನು ಪಾಲಿಸಿದರೆ ಸಾಕು
ಜಾಬ್ ಇಂಟರ್ ವ್ಯೂ ಎಂದರೆ ಯಾರಿಗಾದರೂ ಕೊಂಚ ನರ್ವಸ್ ನೆಸ್ ಇರುತ್ತೆ. ಅದರಲ್ಲೂ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಸಂದರ್ಶನ ಎದುರಿಸುವವರಿಗೆ ಜಾಸ್ತಿನೇ ಆತಂಕ ಕಾಡುತ್ತೆ. ಅತಿಯಾದ ಮಾಹಿತಿ, ಯೋಚನೆ ಮತ್ತಷ್ಟು ಗೊಂದಲಮಯವನ್ನಾಗಿ ಮಾಡುತ್ತೆ. ಹಾಗಾದರೆ ಫ್ರೆಶರ್ಸ್ ಜಾಬ್ ಇಂಟರ್ ವ್ಯೂಗೆ ಹೇಗೆ ತಯಾರಿ ನಡೆಸಬೇಕು. ಇಲ್ಲಿದೆ ಆ ಮಾಹಿತಿ.
ಫ್ರೆಶರ್ ಆದವರು ಮೊದಲ ಬಾರಿಗೆ ಸಂದರ್ಶನವನ್ನು ಎದುರಿಸುತ್ತಿದ್ದರೆ, ಅತಿಯಾಗಿ ಚಿಂತಿಸುವುದು ಬೇಡ. ಸಿಂಪಲ್ ಆಗಿ ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಸಾಕು. (ಸಾಂದರ್ಭಿಕ ಚಿತ್ರ)
2/ 8
1) ಮೊದಲಿಗೆ ಆತ್ಮವಿಶ್ವಾಸದಿಂದಿರಿ. ಯಾವುದೇ ಕೆಲಸವಾಗಿರಲಿ ನಿಮ್ಮ ಆತ್ಮವಿಶ್ವಾಸವೇ ನಿಮ್ಮ ಯಶಸ್ಸಿನ ಮೊದಲ ಹೆಜ್ಜೆ. ಹೆದರಿಕೆ ಸೋಲಿನ ಮೊದಲ ಹೆಜ್ಜೆ ಅನ್ನೋದನ್ನು ಮರೆಯಬೇಡಿ.
3/ 8
2) ಯಾವುದೇ ಉದ್ಯೋಗವನ್ನು ಪಡೆಯಲು ಶೈಕ್ಷಣಿಕ ಅರ್ಹತೆ, ಕೌಶಲ್ಯ ಮಾತ್ರವಲ್ಲ. ನಿಮ್ಮ ಪೂರ್ಣ ವಿಶ್ವಾಸ ಮುಖ್ಯ ಆಗುತ್ತದೆ. ಸಂದರ್ಶನಕ್ಕೆ ಇದು 100% ಹೊಂದಿಕೆ ಆಗುತ್ತೆ.. ಆದ್ದರಿಂದ, ನೀವು ಸಂದರ್ಶನಕ್ಕೆ ಹೋದಾಗಲೆಲ್ಲಾ ಸಂಪೂರ್ಣ ಆತ್ಮವಿಶ್ವಾಸದಿಂದ ಹೋಗಿ.
4/ 8
3) ಸಂದರ್ಶನದ ಸಮಯದಲ್ಲಿ ದೇಹ ಭಾಷೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಹೋದಾಗ ಅವರ ನಡಿಗೆ ಮತ್ತು ಕುಳಿತುಕೊಳ್ಳುವ ಭಂಗಿ ಎರಡೂ ಸರಿಯಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಆತಂಕದಲ್ಲಿ ಕಾಲು ಅಲ್ಲಾಡಿಸುವುದು ಸಂದರ್ಶಕರಿಗೆ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ನೀಡುತ್ತದೆ.
5/ 8
4) ಸಂದರ್ಶನಕ್ಕೆ ಹಾಜರಾಗುವವರು ಸಂದರ್ಶಕರ ಜೊತೆಗೆ ಯಾವಾಗಲೂ ಕಣ್ಣಿನ ಸಂಪರ್ಕವನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಉದ್ವೇಗದಿಂದಾಗಿ ಅಭ್ಯರ್ಥಿಗಳು ಬೇರೆ ಕಡೆ ನೋಡತೊಡಗಿದರೆ, ಬಹಳ ಕೆಟ್ಟ ಪರಿಣಾಮ ಬೀರುವುದು.
6/ 8
5) ಕಂಪನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರಬೇಕು. ಸಂದರ್ಶನಕ್ಕೆ ಹೋಗುವಾಗ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದಕ್ಕಾಗಿ, ಸಂಬಂಧಪಟ್ಟ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ವಿವರಗಳನ್ನು ಪಡೆಯಬಹುದು.
7/ 8
ಕಂಪನಿಯ ಬಗ್ಗೆ ಗೊತ್ತಿಲ್ಲದ್ದರೆ, ನೀವು ಈ ಕೆಲಸದ ಬಗ್ಗೆ ನಿಜವಾಗಿಯೂ ಗಂಭೀರವಾಗಿಲ್ಲ ಎಂದು ಸಂದರ್ಶಕರು ಭಾವಿಸುತ್ತಾರೆ. ಆದ್ದರಿಂದ ಅಗತ್ಯ ಅರ್ಹತೆಗಳ ಜೊತೆಗೆ, ಕಂಪನಿಯ ಉತ್ತಮ ಅಂಶಗಳ ಬಗ್ಗೆಯೂ ತಿಳಿದಿರಬೇಕು. ಸಾಂದರ್ಭಿಕ ಚಿತ್ರ
8/ 8
ಅಂತರ್ಜಾಲದಲ್ಲಿ ಸಿಗುವ ಅತಿಯಾದ ಮಾಹಿತಿಯಿಂದ ತಲೆ ಕೆಡಿಸಿಕೊಳ್ಳಬೇಡಿ. ಸಂದರ್ಶಕರಿಗೆ ಇದು ನಿಮ್ಮ ಮೊದಲ ಇಂಟರ್ ವ್ಯೂ ಎಂದರೆ ತಿಳಿದಿದ್ದರೆ, ನಿಮ್ಮ ಕೆಲವೊಂದು ತಪ್ಪುಗಳನ್ನು ಮನ್ನಿಸುತ್ತಾರೆ. ಮೊದಲ ಸಲ ಎಂಬ ವಿನಾಯಿತಿ ಸಿಕ್ಕೇ ಸಿಗುತ್ತೆ. ಹಾಗಾಗಿ ಹೆದರದೇ ಧೈರ್ಯವಾಗಿ ಸಂದರ್ಶನವನ್ನು ಎದುರಿಸಿ.