ಮಮತಾ ನಿರಂತರವಾಗಿ ಜಾಬ್ ಇಂಟರ್ ವ್ಯೂಗಳನ್ನು ನೀಡಿದರು, ಆದರೆ ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ನಂತರ ಮಮತಾ ತನ್ನನ್ನು ತಾನು ಸುಧಾರಿಸಿಕೊಂಡರು. 2018 ರಲ್ಲಿ, ಅವರು ಕ್ಯಾಬಿನ್ ಸಿಬ್ಬಂದಿಯ ಕೆಲಸವನ್ನು ಪಡೆದರು. ಕೆಲಸ ಸಿಕ್ಕಿರುವ ವಿಚಾರವನ್ನು ತಿಳಿಸಲು ಮನೆಗೆ ಕರೆ ಮಾಡಿದಾಗ ಯಾರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮಗಳು ಸಿಟಿಗೆ ಹೋಗಿ ಮಾನ ಕಳೆಯುತ್ತಾಳೆ ಎಂದು ಹಳ್ಳಿಗರು ಮಮತಾ ಹೆತ್ತವರಿಗೆ ಎಚ್ಚರಿಸಿದ್ದರು.