IAS Ankita Jain, IAS Vaishali Jain: ಇವರು ಐಎಎಸ್ ಸೋದರಿಯರು. ದೆಹಲಿ ಮೂಲದ ಜೈನ್ ಸಹೋದರಿಯರು UPSC ಪರೀಕ್ಷೆ 2020ರಲ್ಲಿ ಯಶಸ್ಸನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಐಎಎಸ್ ಅಂಕಿತಾ ಜೈನ್ ಯುಪಿಎಸ್ ಸಿ ಸಿಎಸ್ಇ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ್ದು, ಅವರ ತಂಗಿ ವೈಶಾಲಿ ಜೈನ್ 21ನೇ ರ್ಯಾಂಕ್ ಗಳಿಸಿದ್ದಾರೆ. ಅಂಕಿತಾ ಅವರು 2018 ರ UPSC ಪರೀಕ್ಷೆಯಲ್ಲಿ ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಸೇವೆಗೆ ಆಯ್ಕೆಯಾಗಿದ್ದರು. ಅವರ ಪತಿ ಅಭಿನವ್ ತ್ಯಾಗಿ ಕೂಡ ಐಪಿಎಸ್ ಅಧಿಕಾರಿ.
IAS Anamika Meena, IAS Anjali Meena: ರಾಜಸ್ಥಾನದ ಖೇಡಿ ರಮ್ಲಾ ಗ್ರಾಮದ ನಿವಾಸಿಗಳಾದ ಅನಾಮಿಕಾ ಮೀನಾ ಮತ್ತು ಅಂಜಲಿ ಮೀನಾ ಸಹೋದರಿಯರು 2019 ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರ ತಂದೆ ಐಎಎಸ್ ರಮೇಶ್ ಚಂದ್ರ. ತಮಿಳುನಾಡು ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಅನಾಮಿಕಾ ಮೀನಾ 116ನೇ ರ್ಯಾಂಕ್ ಹಾಗೂ ಅಂಜಲಿ ಮೀನಾ 494ನೇ ರ್ಯಾಂಕ್ ಪಡೆದಿದ್ದಾರೆ.
ದೆಹಲಿ ನಿವಾಸಿಗಳಾದ ಸೃಷ್ಟಿ ಮತ್ತು ಸಿಮ್ರಾನ್ UPSC CSE 2020 ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಸಿಮ್ರಾನ್ ಅವರ ರ್ಯಾಂಕ್ 474 ಮತ್ತು ಸೃಷ್ಟಿ ಅವರ ಶ್ರೇಣಿ 373 ಆಗಿತ್ತು. ಸಹೋದರಿಯರಿಬ್ಬರೂ ಒಟ್ಟಿಗೆ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಮುನ್ನಡೆಸಲು ಸಿಮ್ರಾನ್ ಬಯಸಿದ್ದಾರೆ. ಸೃಷ್ಟಿ ಅವರು ದೆಹಲಿ ವಿಶ್ವವಿದ್ಯಾಲಯದ ಎಸ್ ಆರ್ ಸಿಸಿ ಕಾಲೇಜಿನಿಂದ ಅರ್ಥಶಾಸ್ತ್ರದ ಗೌರವ ಪದವಿಯನ್ನು ಪಡೆದಿದ್ದಾರೆ.