ಐಎಎಸ್ ಮಹಿಳಾ ಅಧಿಕಾರಿಗಳು ವೆಸ್ಟರ್ನ್ ಫಾರ್ಮಲ್ಸ್ ಧರಿಸಬಹುದೇ ಎಂದು ಯಾರೋ Quora ನಲ್ಲಿ ಪ್ರಶ್ನೆ ಕೇಳಿದ್ದಾರೆ. ಐಎಎಸ್ ಇರಾ ಸಿಂಘಾಲ್ ಈ ಬಗ್ಗೆ ಉತ್ತರಿಸಿದ್ದಾರೆ. ನಾನು ವೆಸ್ಟರ್ನ್ ಬಟ್ಟೆಗಳನ್ನು ಧರಿಸುತ್ತೇನೆ. ಯಾವಾಗಲು ಸೀರೆಗಳನ್ನು ಧರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಕಚೇರಿಯಲ್ಲಿ ವೆಸ್ಟರ್ನ್ ಫಾರ್ಮಲ್ ಡ್ರೆಸ್ ಗಳನ್ನು ಧರಿಸುತ್ತೇನೆ ಎಂದಿದ್ದಾರೆ. (ಚಿತ್ರದಲ್ಲಿರುವುದು ಮಹಿಳಾ ಐಎಎಸ್ ಅಧಿಕಾರಿ)
ಐಎಎಸ್ ಇರಾ ಸಿಂಘಾಲ್ ಪ್ರಕಾರ, ಮಹಿಳಾ ಐಎಎಸ್ ಅಧಿಕಾರಿಗಳು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದು. ಆದರೆ ಸ್ಥಳೀಯವಾಗಿ ಕೆಟ್ಟದಾಗಿ ಕಾಣದಂತೆ ನೋಡಿಕೊಳ್ಳಬೇಕು. ಮಹಾನಗರಗಳಲ್ಲಿ ಬಟ್ಟೆ ಪಾಶ್ಚಿಮಾತ್ಯವಾಗಿ ಇದ್ದರೆ ಏನೂ ವ್ಯತ್ಯಾಸ ಕಾಣುವುದಿಲ್ಲ. ಆದರೆ ಹಳ್ಳಿಗಳಿಗೆ ಹೋದಾಗ ಸಾಮಾನ್ಯಜ್ಞಾನದೊಂದಿಗೆ ಬಟ್ಟೆ ಧರಿಸುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಚಿತ್ರದಲ್ಲಿರುವುದು ಮಹಿಳಾ ಐಎಎಸ್ ಅಧಿಕಾರಿ)