Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

ಈಗ ಎಲ್ಲವೂ ಡಿಜಿಟಲ್ ಮಯ ಎಂದು ಒತ್ತಿ ಹೇಳುವ ಅಗತ್ಯವೇ ಇಲ್ಲ. ಡಿಜಿಟಲ್ ಜ್ಞಾನ ಇಲ್ಲದಿದ್ದರೆ ಯಾವುದೇ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯುವುದು ನಿಜಕ್ಕೂ ಅಸಾಧ್ಯ. ಇಂದಿನ ದಿನಗಳಲ್ಲಿ ಬೇಸಿಕ್ ಡಿಜಿಟಲ್ ಸ್ಕಿಲ್ ಅನ್ನು ಪ್ರತಿಯೊಬ್ಬ ಉದ್ಯೋಗಿಯಲ್ಲೂ ನಿರೀಕ್ಷಿಸಲಾಗುತ್ತದೆ.

First published:

  • 17

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    ಕಂಪ್ಯೂಟರ್ ಮತ್ತು ಡಿಜಿಟಲ್ ಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯವಿರುವ ಕೌಶಲ್ಯವಾಗಿದೆ. ಕರಿಯರ್ ದೃಷ್ಟಿಯಿಂದ ಯಾವೆಲ್ಲಾ ಡಿಜಿಟಲ್ ಸ್ಕಿಲ್ಸ್ ಬೇಕು? ಯಾವುದನ್ನು ಕಲಿತರೆ ಕರಿಯರ್ ಗೆ ಒಳ್ಳೆಯದು ಎಂದು ನಾವಿಂದು ತಿಳಿಯೋಣ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    1) ಮೈಕ್ರೋಸಾಫ್ಟ್ ಆಫೀಸ್ ಮತ್ತು ಗೂಗಲ್ ಡ್ರೈವ್ ನ ಜ್ಞಾನ ಇರಲೇಬೇಕು. ಬಹುತೇಕ ಕಂಪನಿಗಳ ತಮ್ಮ ಉದ್ಯೋಗಿಗಳಿಗೆ ಈ ಕೌಶಲ್ಯವನ್ನು ಕಡ್ಡಾಯಗೊಳಿಸಿವೆ. ಈ ಸ್ಕಿಲ್ ಮೂಲಕ ವೇಗವಾಗಿ PPT / ಪವರ್ ಪಾಯಿಂಟ್ ಸ್ಲೈಡ್ ಶೋ ಅನ್ನು ರಚಿಸಬಹುದು. Excel ನಲ್ಲಿ ರಿಪೋರ್ಟ್ ಗಳನ್ನು ಕ್ರಿಯೇಟ್ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    2) ಇತ್ತೀಚೆಗೆ ಕ್ಲೌಡ್ ಸೇವೆಗಳಿಗೆ ಡೇಟಾವನ್ನು ಬ್ಯಾಕಪ್ ಮಾಡಲಾಗುತ್ತಿದೆ. ನೀವು ಇನ್ನು ಮುಂದೆ ನಿಮ್ಮ ಹಾರ್ಡ್-ಡಿಸ್ಕ್ ಅನ್ನು ಎಲ್ಲೆಡೆ ಸಾಗಿಸುವ ಅಗತ್ಯವಿಲ್ಲ. ಎಲ್ಲಾ ಕ್ಲೌಡ್ ಸೇವೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸಮಯಕ್ಕೆ ಪಡೆಯಬಹುದು. ಏಕೆಂದರೆ ಈ ಕ್ಲೌಡ್ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    3) ಫೋಟೋಶಾಪ್ ಸ್ಕಿಲ್ ಕಡ್ಡಾಯವಾಗ್ತಿದೆ. ಫೋಟೋಶಾಪ್ ಕೌಶಲ್ಯಗಳು ಬಹಳ ಮುಖ್ಯವಾಗಿವೆ. ಮೀಡಿಯಾ, ಪತ್ರಿಕೋದ್ಯಮ, ಕಲೆ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವವರಿಗೆ ಈ ಕೌಶಲ್ಯವು ತುಂಬಾ ಮುಖ್ಯವಾಗಿದೆ. ಆದ್ದರಿಂದ, ನೀವು ಈ ಕೌಶಲ್ಯವನ್ನು ತಡಮಾಡದೇ ಕಲಿಯಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    4) ಈಗ ಏನಿದರೂ ವಿಡಿಯೋಗಳ ಜಮಾನ. ಹಾಗಾಗಿ ವೀಡಿಯೊ ಎಡಿಟಿಂಗ್ ಕೌಶಲ್ಯಗಳು ಅತ್ಯಗತ್ಯ. ವೀಡಿಯೊ ಎಡಿಟಿಂಗ್ ಮೂಲಭೂತ ಡಿಜಿಟಲ್ ಕೌಶಲ್ಯವಾಗಿದೆ. ನಿಮ್ಮ ವೃತ್ತಿ ಸಂಬಂಧಿಸಿದಂತೆ ವಿಡಿಯೋಗಳನ್ನು ಕ್ರಿಯೇಟ್ ಮಾಡುವ, ಪ್ರಸ್ತುತಪಡಿಸುವ ಕೌಶಲ್ಯ ಇರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    5) ಫೈಲ್ ಫಾರ್ಮ್ಯಾಟ್ ಗಳನ್ನು ಪರಿವರ್ತಿಸುವುದು ಗೊತ್ತಿರಬೇಕು. ಅನೇಕ ಬಾರಿ ನೀವು ಫೈಲ್ ಅನ್ನು ಒಂದು ಫಾರ್ಮ್ಯಾಟ್ ನಿಂದ ಇನ್ನೊಂದಕ್ಕೆ ಬದಲಿಸಬೇಕು. ಉದಾಹರಣೆಗೆ, ನೀವು PDF ಫೈಲ್ ಅನ್ನು ಹೊಂದಿದ್ದೀರಿ ಆದರೆ ಬದಲಿಗೆ ನೀವು DOC ಫೈಲ್ ಅನ್ನು ಬಯಸುತ್ತೀರಿ. ಅಥವಾ ನೀವು JPEG ಬದಲಿಗೆ PNG ಸ್ವರೂಪದಲ್ಲಿ ಫೋಟೋವನ್ನು ಬಯಸುತ್ತೀರಿ. ವಿಭಿನ್ನ ಫೈಲ್ ಫಾರ್ಮ್ಯಾಟ್ ಗಳ ನಡುವೆ ಹೇಗೆ ಪರಿವರ್ತಿಸುವುದು ಎಂದು ನಿಮಗೆ ತಿಳಿದಿದ್ದರೆ, ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಕೆಲಸವನ್ನು ಮಾಡಿ ಮುಗಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Digital Skills: ಯಾವುದೇ ಕ್ಷೇತ್ರವಿರಲಿ, ಈ ಡಿಜಿಟಲ್ ಸ್ಕಿಲ್ಸ್ ಗೊತ್ತಿರುವ ಉದ್ಯೋಗಿಗಳಿಗೆ ಮಾತ್ರ ಡಿಮ್ಯಾಂಡ್

    6) HTML ನಲ್ಲಿ ಮೂಲಭೂತ ಕೋಡಿಂಗ್ ಸ್ಕಿಲ್ಸ್ ಗೊತ್ತಿರಬೇಕು. ಕೋಡಿಂಗ್ ಬಗ್ಗೆ ಬೇಸಿಗ್ ಮಾಹಿತಿ ಹೊಂದಿರುವುದು ನಿಜಕ್ಕೂ ಪ್ರಯೋಜನಕಾರಿ. ನೀವು HTML ನಂತಹ ಯಾವುದೇ ಪ್ರಮಾಣಿತ ಕೋಡಿಂಗ್ ಭಾಷೆಯನ್ನು ಕಲಿಯಬಹುದು. ಈ ಭಾಷೆಯನ್ನು ಬಹುತೇಕ ಎಲ್ಲೆಡೆ ಬಳಸಲಾಗುತ್ತದೆ. ಇದರಿಂದ ನಿಮಗೆ ತುಂಬಾ ಉಪಯೋಗವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES