ಆಫೀಸ್ ಅಥವಾ ಕೆಲಸದಲ್ಲಿ ಉಂಟಾಗುವ ಒತ್ತಡವು ಉದ್ಯೋಗಿಯ ಜೀವನದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವಾಗ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಗಳು ದೇಹದಲ್ಲಿ ಸ್ರವಿಸುತ್ತದೆ. ಇದು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಈ ಕಾರ್ಟಿಸೋಲ್ ಗಳ ಸ್ರವಿಸುವಿಕೆಯು ಅಧಿಕವಾದರೆ ದೇಹಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.
4-7-8 ಉಸಿರಾಟದ ವ್ಯಾಯಾಮ: ನಿಮ್ಮ ಬಾಯಿಯ ಮುಂಭಾಗದಲ್ಲಿರುವ ಮೇಲಿನ ಹಲ್ಲಿನ ಮೇಲೆ ನಿಮ್ಮ ನಾಲಿಗೆಯ ತುದಿಯನ್ನು ಒತ್ತಿ ಮತ್ತು 4 ಸೆಕೆಂಡುಗಳ ಕಾಲ ನಿಮ್ಮ ಮೂಗಿನ ಮೂಲಕ ಉಸಿರಾಡಿ. ನಂತರ 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದುಕೊಳ್ಳಿ ಮತ್ತು ನಂತರ 8 ಸೆಕೆಂಡುಗಳ ಕಾಲ ಬಾಯಿಯ ಮೂಲಕ ಬಿಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ದೇಹವು ಹೆಚ್ಚು ಆಮ್ಲಜನಕವನ್ನು ಪಡೆಯುತ್ತದೆ. ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ.