Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

ಜಾಬ್ ಇಂಟರ್ ವ್ಯೂ ಎಂದರೆ ಕೊಂಚವಾದ್ರೂ ನರ್ವಸ್ ನೆಸ್ ಇದ್ದೇ ಇರುತ್ತೆ. ಸಂದರ್ಶಕರ ಕೊಠಡಿಗೆ ತೆರಳುತ್ತಿದ್ದಂತೆ ಹ್ಯಾಂಡ್​ ಶೇಕ್ ಮಾಡಬೇಕೋ ಬೇಡವೋ ಎಂಬ ಗೊಂದಲ ಶುರುವಾಗುತ್ತೆ. ಮೊದಲು ಮಾಡಬೇಕಾ ಅಥವಾ ಇಂಟರ್ ವ್ಯೂ ಮುಗಿದ ನಂತರ ಹೊರಡುವಾಗ ಮಾಡಬೇಕಾ ಎಂಬ ಪ್ರಶ್ನೆಯೂ ಮೂಡುತ್ತೆ.

First published:

  • 17

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಜಾಬ್ ಇಂಟರ್ ವ್ಯೂಗೆ ಹೋದಾಗ ಕೈ ಕುಲುಕಬೇಕೋ ಬೇಡವೋ? ಆರಂಭದಲ್ಲಿ ಏನು ಮಾಡಬೇಕು? ಎಂಬ ಬಗ್ಗೆ ತಜ್ಞರು ಕೆಲವೊಂದು ಟಿಪ್ಸ್ ನೀಡಿದ್ದಾರೆ. ಆರಂಭದಲ್ಲಿ ಸಂದರ್ಶಕರೊಂದಿಗೆ ನೀವು ಹೇಗೆ ಮಾತನಾಡುತ್ತೀರಿ ಎಂಬುದರ ಆಧಾರದ ಮೇಲೆ ನಿಮಗೆ ಕೆಲಸ ಸಿಗುತ್ತದೆಯೇ ಎಂಬ ವಿಚಾರ ಅವಲಂಬಿಸಿರುತ್ತದೆ. ಹಾಗಾದರೆ ಸಂದರ್ಶನದ ಆರಂಭದಲ್ಲಿ ಏನು ಮಾಡಬೇಕು ಎಂದು ತಿಳಿಯೋಣ.

    MORE
    GALLERIES

  • 27

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಕೆಲಸದ ಸಂದರ್ಶನಕ್ಕೆ ಹೋಗುವಾಗ ಪ್ರಮುಖ ವಿಷಯವೆಂದರೆ ನಿಮ್ಮ ಬಗೆಗಿನ ಮೊದಲ ಅಭಿಪ್ರಾಯ. ಆರಂಭದಲ್ಲಿ ಸಂದರ್ಶಕರೊಂದಿಗೆ ನೀವು ಹೇಗೆ ಮಾತನಾಡುತ್ತೀರಿ ಎಂಬುವುದು ತುಂಬಾನೇ ಮುಖ್ಯವಾಗುತ್ತೆ. ನಿಮ್ಮ ಬಾಡಿ ಲ್ಯಾಂಗ್ವೇಜ್ ನಿಮ್ಮ ಬಗ್ಗೆ ಸಾಕಷ್ಟನ್ನು ಹೇಳಿಬಿಡುತ್ತದೆ.

    MORE
    GALLERIES

  • 37

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ನೀವು ಸಂದರ್ಶಕರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದರೆ, ಅವರನ್ನು ಸ್ವಾಗತಿಸಲು ಸಾಮಾನ್ಯ ಮಾರ್ಗವಿದೆ. ಅವರು ನಿಮ್ಮನ್ನು ಮೊದಲು ನೋಡದಿದ್ದರೆ ಕಣ್ಣಿನ ಸಂಪರ್ಕವನ್ನು ಮಾಡಿ, ಕಿರುನಗೆಯೊಂದಿಗೆ ನಿಮ್ಮನ್ನು ಪರಿಚಯಿಸಿಕೊಳ್ಳಿ.

    MORE
    GALLERIES

  • 47

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಸಂದರ್ಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಅಥವಾ ಫೋನ್ ಮೂಲಕ ನಡೆಸುತ್ತಿದ್ದರೆ, ನೀವು ಸಂದರ್ಶಕರನ್ನು ಹಲೋ ಮೂಲಕ ಸ್ವಾಗತಿಸಬಹುದು. ಅಲ್ಲದೆ, ನೀವು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದರೆ, ಸರಳವಾಗಿ ಹಲೋ ಹೇಳಿ, ಅಥವಾ ಸಮಯಕ್ಕೆ ಅನುಗುಣವಾಗಿ ಶುಭೋದಯ ಅಥವಾ ಶುಭ ಸಂಜೆ ಹೇಳಿ. ಅಲ್ಲದೆ, ನೀವು ವೃತ್ತಿಪರರಾಗಿದ್ದರೆ ನೀವು ಕೈಕುಲುಕಬಹುದು.

    MORE
    GALLERIES

  • 57

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಸಂದರ್ಶಕರ ಹೆಸರು ಮತ್ತು ಕೆಲಸದ ಶೀರ್ಷಿಕೆ ನಿಮಗೆ ತಿಳಿದಿದ್ದರೆ, ಅವರನ್ನು ಅಭಿನಂದಿಸಲು ನೀವು ಅದನ್ನು ಬಳಸಬಹುದು. ಉದಾಹರಣೆಗೆ, "ಹಲೋ, ಮಿ. ಸ್ಮಿತ್. ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ." ಎಂದು ನೀವು ಹೇಳಬಹುದು.

    MORE
    GALLERIES

  • 67

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಉದ್ಯೋಗ ಸಂದರ್ಶನದಲ್ಲಿ ಸಂದರ್ಶಕರನ್ನು ಸ್ವಾಗತಿಸುವಾಗ ಯಾವಾಗಲೂ ಸಭ್ಯ, ಗೌರವಾನ್ವಿತ ಮತ್ತು ವೃತ್ತಿಪರರಾಗಿರಲು ಮರೆಯದಿರಿ. ಕೈ ಕುಲುಕುವುದು ತಪ್ಪೇನು ಅಲ್ಲ.

    MORE
    GALLERIES

  • 77

    Interview Tips: ಉದ್ಯೋಗ ಸಂದರ್ಶನದಲ್ಲಿ ಕೈ ಕುಲುಕಬೇಕಾ, ಬೇಡವಾ? ಇಲ್ಲಿದೆ ಸರಿಯಾದ ಉತ್ತರ

    ಒಮ್ಮೊಮ್ಮೆ ನಾಲ್ಕೈದು ಜನ ಸಂದರ್ಶನಕರು ಇರುತ್ತಾರೆ, ಅಭ್ಯರ್ಥಿಯ ಕುರ್ಚಿಯನ್ನು ದೂರದಲ್ಲಿ ಇರಿಸಲಾಗುತ್ತೆ. ಆಗ ಕೈ ಕುಲುಕುವ ಪ್ರಯತ್ನಬೇಡ. ಎಲ್ಲರಿಗೂ ಹಾಯ್-ಹಲೋ ಅಂತಷ್ಟೇ ಹೇಳಿ.

    MORE
    GALLERIES