Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

ವೃತ್ತಿಜೀವನ ಆರಂಭಿಸಲು ಇಂಟರ್ನ್ ಶಿಪ್ ನಿಜಕ್ಕೂ ಒಂದೊಳ್ಳೆಯ ಮಾರ್ಗ. 12ರಿಂದ 15 ವರ್ಷಗಳ ಶಿಕ್ಷಣಕ್ಕೆ ಒಂದು ತೂಕವಾದರೆ, ಇಂಟರ್ನ್ ಶಿಪ್ ಗೇ ಒಂದು ತೂಕವಿದೆ. ಇಲ್ಲಿ ನೀವು ಬಯಸಿದ ಕ್ಷೇತ್ರಕ್ಕೆ ಅಧಿಕೃತ ಎಂಟ್ರಿ ಸಿಗುತ್ತೆ. ವಾಸ್ತವದಲ್ಲಿ ನಿಮ್ಮ ಕ್ಷೇತ್ರ ಹೇಗೆ ಕಾರ್ಯ ನಿರ್ವಹಿಸುತ್ತೆ ಎಂದು ತಿಳಿಯುತ್ತೆ.

First published:

  • 18

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಬಹುತೇಕ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಮಾಡಿದ ಕಂಪನಿಯಲ್ಲೇ ಕೆಲಸ ಗಿಟ್ಟಿಸಿಕೊಂಡು ಬಿಡುತ್ತಾರೆ. ಸಂಸ್ಥೆಗಳು ಸಹ ಪ್ರತಿಭಾವಂತ ಇಂಟರ್ನಿಗಳನ್ನು ಫುಲ್ ಟೈಂ ಉದ್ಯೋಗಿಯನ್ನಾಗಿ ಮಾಡಿಕೊಳ್ಳಲು ಉತ್ಸಾಹ ತೋರುತ್ತವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 28

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಇಂಟರ್ನಿಗೆ ಈಗಾಗಲೇ ಸಂಸ್ಥೆ ಹೇಗೆ ಕೆಲಸ ಮಾಡುತ್ತೆ ಎಂಬ ಅರಿವು ಇರುತ್ತದೆ. ಮತ್ತೆ ಟ್ರೈನಿಂಗ್ ನೀಡುವ ಅಗತ್ಯವಿರುವುದಿಲ್ಲ. ಇದು ಇಂಟರ್ನಿಗಳಿಗೆ ಪ್ಲಸ್ ಪಾಯಿಂಟ್. ಆದರೆ ಎಲ್ಲಾ ಇಂಟರ್ನಿಗಳೂ ಕೆಲಸ ಪಡೆಯುವುದಿಲ್ಲ. ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ, ಏಕೆ ಗೊತ್ತೇ?

    MORE
    GALLERIES

  • 38

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಇಂಟರ್ನ್ ಶಿಪ್ ಮಾಡಿದ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕೆಂದರೆ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಅಭ್ಯರ್ಥಿಗಳು ಇಂಟರ್ನ್ ಶಿಪ್ ಸಮಯದಲ್ಲಿ ಹಣ ಪಡೆಯದಿದ್ದರೂ ಸಹ ವೃತ್ತಿಪರರಂತೆ ಕೆಲಸ ಮಾಡಬೇಕು. ಇಂಟರ್ನ್ ಶಿಪ್ ವೇಳೆ ನೀಡಿದ ಕೆಲಸಕ್ಕಾಗಿ ಬದ್ಧತೆಯಿಂದ ಶ್ರಮಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಅಭ್ಯರ್ಥಿಗಳು ಇಂಟರ್ನ್ ಶಿಪ್ ಸಮಯದಲ್ಲಿ ಕೆಲಸ ಕದಿಯಬಾರದು. ಹಿಂದೆ ಬೀಳದೆ ಹೆಚ್ಚು ಹೆಚ್ಚು ಕೆಲಸವನ್ನು ನೀಡಲು ಮ್ಯಾನೇಜರ್ ಅನ್ನು ಕೇಳಬೇಕು. ನೀವು ಕೆಲಸ ಮಾಡಲು ಬಯಸುವ ಕ್ಷೇತ್ರದ ಬಗ್ಗೆ ನಿಮ್ಮ ಹಿರಿಯರ ಬಳಿ ವಿಚಾರಿಸಿ ಮಾಹಿತಿ ಪಡೆಯುತ್ತಿರಬೇಕು.

    MORE
    GALLERIES

  • 58

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಯಾವುದೇ ಕಂಪನಿ ಉತ್ತಮ ಉದ್ಯೋಗಿಗಳನ್ನು ಹುಡುಕುತ್ತವೆ. ಹೀಗಾಗಿ ನೀವು ವೃತ್ತಿಪರವಾಗಿ ಕಾಣಿಸಿಕೊಳ್ಳಬೇಕು. ಇತರೆ ಉದ್ಯೋಗಿಗಳ ಜೊತೆ ಸೇರಿಕೊಂಡು ಕಚೇರಿ ರಾಜಕೀಯ, ಗಾಸಿಪ್ ಮಾಡಲು ಹೋಗಲೇಬೇಡಿ. ನಿಮ್ಮ ಕೆಲಸದ ಬಗ್ಗೆ ಮಾತ್ರ ಗಮನ ಹರಿಸಬೇಕು. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಆಫೀಸ್ ಸಮಯದಲ್ಲಿ ಪರ್ಸನಲ್ ಕಾಲ್, ಚಾಟ್ ಮಾಡಬೇಡಿ. ಇಮೇಲ್ ಗಳನ್ನು ಚೆಕ್ ಮಾಡಬೇಡಿ. ನೀವು ಕಚೇರಿಯಲ್ಲಿದ್ದಾಗ, ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿ. ನಿಮಗೆ ಕೆಲಸ ಮಾಡಲು ಸಿಕ್ಕಿರುವ ಅವಕಾಶವನ್ನು ಗೌರವಿಸಿ. ಏಕೆಂದರೆ ಅನೇಕ ಜನರು ನಿಮ್ಮಂತೆ ಕೆಲಸಮಾಡಲು ಬಯಸುತ್ತಾರೆ ಆದರೆ ಅವರಿಗೆ ನಿಮ್ಮಂತೆ ಅವಕಾಶ ಸಿಕ್ಕಿರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಇಂಟರ್ನ್ಶಿಪ್ ಸಮಯದಲ್ಲಿ ನಿಮಗೆ ಸಿಕ್ಕಿದ ಕೆಲಸವನ್ನು ಕಷ್ಟವಾಗಲಿ ಅಥವಾ ಸುಲಭವಾಗಲಿ ನಿಮ್ಮ ಕೈಲಾದಷ್ಟು ಶ್ರದ್ಧೆಯಿಂದ ಮಾಡಿ. ಯಾವುದೇ ಕೆಲಸವನ್ನು ಚಿಕ್ಕದಾಗಿ ಪರಿಗಣಿಸಬೇಡಿ, ಯಾವುದೇ ಕೆಲಸ ಮಾಡಲು ನಿರಾಕರಿಸಬೇಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Career Tips: ಇಂಟರ್ನ್​ಶಿಪ್​ ವೇಳೆ ಈ ರೀತಿ ನಡೆದುಕೊಂಡರೆ, ಅದೇ ಕಂಪನಿಯಲ್ಲಿ ಕೆಲಸ ಸಿಗೋದು ಪಕ್ಕಾ

    ಇಂಟರ್ನಿಯಾಗಿ ನಿಮಗೆ ಇದು ಕಲಿಯುವ ಸಮಯ, ಹಾಗಾಗಿ ಟೀಕೆಗೆ ಹೆದರಬೇಡಿ. ಇಂಟರ್ನ್ ಶಿಪ್ ಸಮಯದಲ್ಲಿ ಕೆಲಸ ಕಲಿಯುವಾಗ ಅನೇಕ ತಪ್ಪುಗಳಾಗುತ್ತವೆ. ಅವುಗಳನ್ನು ಗುರುತಿಸಿ ಹೇಳಿದರೆ ಪರ್ಸನಲ್ ಆಗಿ ತೆಗೆದುಕೊಳ್ಳಬೇಡಿ, ತಿದ್ದುಕೊಳ್ಳುವ ಪ್ರಯತ್ನ ಮಾಡಿ.

    MORE
    GALLERIES