Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

ಪಟಪಟ ಅಂತ ನಾನ್ ಸ್ಟಾಪ್ ಮಾತಾಡೋದು ನಿಮ್ಮ ಆಸಕ್ತಿಯಾಗಿದ್ದರೆ, ಈ ವೃತ್ತಿ ನಿಮಗೆ ಸರಿಯಾಗಿ ಹೊಂದುತ್ತೆ. ತಾನು ಆಡುವ ಮಾತು ಜನ ಕೇಳುವಂತೆ ಇದೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ನೀವು ರೇಡಿಯೋ ಜಾಕಿ ಆಗಬಹುದು. ರೇಡಿಯೋ ಜಾಕಿ ಆದರೆ ಅದ್ಭುತ ವೃತ್ತಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ರೇಡಿಯೋ ಜಾಕಿ ಆಗುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

First published:

  • 17

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ಒಳ್ಳೆಯ ಧ್ವನಿ, ಕೇಳುಗರನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಶೈಲಿ, ಹಾಡು-ಹಾಸ್ಯ ಪ್ರಜ್ಞೆ ಇದ್ದರೆ ರೇಡಿಯೋ ಜಾಕಿಯಾಗಿ ತುಂಬಾನೇ ಹೆಸರು ಮಾಡಬಹುದು. ರೇಡಿಯೋ ಜಾಕಿಯಾಗಿ ಕೆಲಸ ಮಾಡುವ ಮೂಲಕ ನಿಮ್ಮ ವೃತ್ತಿಜೀವನವನ್ನು ಆರಂಭಿಸಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ರೇಡಿಯೋ ಅಥವಾ ಎಫ್ ಎಂನಲ್ಲಿ ನೀವು ಹೇಗೆ ಕೆಲಸ ಪಡೆಯಬಹುದು. ಇದಕ್ಕಾಗಿ ನೀವು ಯಾವ ಕೋರ್ಸ್ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವೃತ್ತಿಮಾರ್ಗದರ್ಶನ ನಿಮಗೆ ಸಹಾಯವಾಗಲಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ರೇಡಿಯೋದಲ್ಲಿ ಉದ್ಯೋಗ ಪಡೆಯಲು ಯಾವುದೇ ನಿರ್ದಿಷ್ಟ ಕೋರ್ಸ್ ಮಾಡಲೇಬೇಕು ಎಂಬ ನಿಯಮ ಇಲ್ಲ. ಆದರೆ ನೀವು ಈ ಕ್ಷೇತ್ರದ ಎಲ್ಲಾ ತಂತ್ರಗಳನ್ನು ಕಲಿಯಲು ಬಯಸಿದರೆ, ನೀವು ರೇಡಿಯೋ ಅಥವಾ ಎಫ್ಎಂ ಅಧ್ಯಯನಕ್ಕಾಗಿ ಕೋರ್ಸ್ ಅನ್ನು ಸಹ ಮಾಡಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಡಿಗ್ರಿ ಮಾಡಿದರೆ, ಅದರಲ್ಲಿ ರೇಡಿಯೋಗೆ ಸಂಬಂಧಿಸಿದ ಬಹಳಷ್ಟು ವಿಷಯಗಳನ್ನು ಕಲಿಸಲಾಗುತ್ತದೆ. ಆದರೆ ಮಾಸ್ಟರ್ಸ್ ನಲ್ಲಿ ನೀವು ರೇಡಿಯೋ ಮತ್ತು ಎಫ್ ಎಂನಲ್ಲಿ ವಿಶೇಷತೆಯನ್ನು ಆಯ್ಕೆ ಮಾಡಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ನೀವು ರೇಡಿಯೋ ಅಥವಾ ಎಫ್ ಎಂನಲ್ಲಿ ಅನೌನ್ಸರ್ ಅಥವಾ ರೇಡಿಯೋ ಜಾಕಿಯಾಗಿ ಕೆಲಸ ಮಾಡಲು ಬಯಸಿದರೆ, ನೀವು ನಿರರ್ಗಳವಾಗಿ ಮಾತನಾಡಬೇಕು. ಧ್ವನಿ, ವಿಷಯಗಳನ್ನು ಪ್ರಸ್ತುತಪಡಿಸುವ ಶೈಲಿ, ಹಾಸ್ಯಪ್ರಜ್ಞೆ ಜೊತೆ ಸಮಯಕ್ಕೆ ತಕ್ಕಂತೆ ಮಾತನಾಡುವ ಕಲೆ ನಿಮಗೆ ಇರಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ಮೇಲಿನ ಕೌಶಲ್ಯಗಳು ನಿಮ್ಮಲ್ಲಿದ್ದು, ರೇಡಿಯೋದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಖಾಸಗಿ ರೇಡಿಯೋ ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ನೇರವಾಗಿ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಪ್ರತಿಭೆಯ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Radio Jockey Career: ರೇಡಿಯೋ ಜಾಕಿ ಆಗುವುದು ಹೇಗೆ; ಕೋರ್ಸ್, ಸ್ಕಿಲ್ ಮಾಹಿತಿ ಇಲ್ಲಿದೆ

    ರೇಡಿಯೋ ಮಿರ್ಚಿ, ರೆಡ್ ಎಫ್ ಎಮ್ ನಂತಹ ಅನೇಕ ಖಾಸಗಿ ರೇಡಿಯೋ ಮತ್ತು ಎಫ್ ಎಂ ಬ್ರ್ಯಾಂಡ್ ಗಳು ತಮ್ಮಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪ್ರಕಟಣೆ ಹೊರಡಿಸುತ್ತಾರೆ. ಅವುಗಳ ಮೂಲಕವೂ ನೀವು ಉದ್ಯೋಗ ಪಡೆಯಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES