ದೈಹಿಕ ಶಿಕ್ಷಣ ಶಿಕ್ಷಕರನ್ನು ಪಿಇಟಿ (ಪಿಟಿ) ಶಿಕ್ಷಕ ಎಂದು ಕರೆಯಲಾಗುತ್ತದೆ. ಪಿಇಟಿ ಶಿಕ್ಷಕರು ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲೂ ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದೆ. ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಕಲಿಸುವುದು, ಕ್ರೀಡಾಕೂಟಗಳನ್ನು ಆಯೋಜಿಸುವುದು, ಸ್ಪರ್ಧೆಗಳಿಗೆ ತಯಾರಿ ಮಾಡಿಸುವುದು, ಕ್ರೀಡೆ, ಆರೋಗ್ಯ, ದೈಹಿಕ ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಬಗ್ಗೆ ಮಕ್ಕಳಿಗೆ ಕಲಿಸುವುದು ಪಿಇಟಿ ಶಿಕ್ಷಕರ ಕೆಲಸವಾಗಿರುತ್ತದೆ. (ಪ್ರಾತಿನಿಧಿಕ ಚಿತ್ರ)
ಡಿಪ್ಲೊಮಾ ಆಧಾರದ ಮೇಲೆ ಪ್ರೈಮರಿ ಶಾಲೆಯಲ್ಲಿ ಪಿಟಿ ಶಿಕ್ಷಕರಾಗಬಹುದು. ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. B.P.ED (ಬ್ಯಾಚುಲರ್ ಇನ್ ಫಿಸಿಕಲ್ ಎಜುಕೇಶನ್) ಮಾಡಿದ ಅಭ್ಯರ್ಥಿಗಳು ದೇಶದ ಯಾವುದೇ ಶಾಲೆ ಮತ್ತು ಕಾಲೇಜಿನಲ್ಲಿ ಉದ್ಯೋಗವನ್ನು ಪಡೆಯಬಹುದು. (ಪ್ರಾತಿನಿಧಿಕ ಚಿತ್ರ)
ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡರೆ, ವ್ಯಾಯಾಮ ಆಧಾರಿತ ಕಲಿಕೆಯ ಮೂಲಕ ಕ್ರೀಡೆ ಮತ್ತು ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಕ್ರೀಡಾ ತರಬೇತುದಾರಾದರೆ ಪ್ರತಿ ವಿದ್ಯಾರ್ಥಿ ಅಥವಾ ಇಡೀ ತಂಡಕ್ಕೆ ಕ್ರೀಡಾ ತರಬೇತಿ ನೀಡುತ್ತಾರೆ. ದೈಹಿಕ ಬೋಧಕ, ಕ್ರಿಕೆಟ್ ಕೋಚ್, ಆರೋಗ್ಯ ತರಬೇತುದಾರ ಹುದ್ದೆಗಳಿಗೂ ನೇಮಕಾತಿ ಮಾಡಲಾಗುತ್ತದೆ. (ಪ್ರಾತಿನಿಧಿಕ ಚಿತ್ರ)