ಈಗ ಎಲ್ಲವೂ ಆನ್ ಲೈನ್ ಮಯವಾಗಿದೆ. ಕೊರೊನಾ ಕಾಲದಲ್ಲಿ ಎಲ್ಲವನ್ನೂ ಆನ್ ಲೈನ್ ನಲ್ಲೇ ಮಾಡಬೇಕಾದ ಅನಿವಾರ್ಯತೆ ಹಲವು ದಾರಿಗಳನ್ನು ತೋರಿಸಿಕೊಟ್ಟಿದೆ. ಜಿಮ್ ಗೆ ಹೋಗಿ ಕಸರತ್ತು ಮಾಡುತ್ತಿದ್ದವರು ಈಗ ಮನೆಯಲ್ಲಿಯೇ ಕೋಚ್ ಮಾರ್ಗದರ್ಶನದಲ್ಲಿ ವ್ಯಾಯಾಮ ಮಾಡಲು ಬಯಸುತ್ತಿದ್ದಾರೆ.
ಆನ್ ಲೈನ್ ಮೂಲಕವೇ ಫಿಟ್ನೆಸ್ ಕೋಚಿಂಗ್, ಟ್ರೈನಿಂಗ್ ಪಡೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಆನ್ ಲೈನ್ ಫಿಟ್ನೆಸ್ ಕೋಚ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಈ ವೃತ್ತಿಯನ್ನು ಆರಂಭಿಸುವುದು ಹೇಗೆ? ಯಾವೆಲ್ಲಾ ಅರ್ಹತೆಗಳಿರಬೇಕು ಎಂಬ ಮಾಹಿತಿ ಇಲ್ಲಿದೆ.
2/ 7
ಮೊದಲಿಗೆ ಫಿಟ್ನೆಸ್ ಕೋಚಿಂಗ್ ವೃತ್ತಿಗೆ ಅರ್ಹತೆ ಇರಬೇಕು. ಕ್ಲೈಂಟ್ ಮೊದಲು ನಿಮ್ಮ ಅರ್ಹತೆಯನ್ನು ನೋಡಿ ನೇಮಿಸಿಕೊಳ್ಳುತ್ತಾರೆ. ದೈಹಿಕ ಶಿಕ್ಷಣದಲ್ಲಿ ಪದವಿ ಹೊಂದಿದ್ದರೆ ಒಳ್ಳೆಯದು. ಅಥವಾ ಹೆಸರಾಂತ ಜಿಮ್ ನಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.
3/ 7
ಫಿಟ್ ನೆಸ್ ಸಂಬಂಧಿತ ಕೋರ್ಸ್ ಗಳನ್ನು ಇಂಡಿಯನ್ ಅಕಾಡೆಮಿ ಆಫ್ ಫಿಟ್ ನೆಸ್ ಟ್ರೈನಿಂಗ್ ನಿಂದ ಸುಲಭವಾಗಿ ಮಾಡಬಹುದು. ಕೋರ್ಸ್ ಮಾಡಿದ ನಂತರ ನಿಮ್ಮ ಸ್ವಂತ ಫಿಟ್ನೆಸ್ ಕೇಂದ್ರವನ್ನು ತೆರೆಯುವುದು ಉತ್ತಮ ಆಯ್ಕೆಯಾಗಿದೆ. ಇಂತಹ ಕೇಂದ್ರಗಳು ಆನ್ ಲೈನ್ ಮತ್ತು ಆಫ್ ಲೈನ್ ಸೇವೆಗಳನ್ನು ಒದಗಿಸುವ ಮೂಲಕ ಜನರನ್ನು ಆಕರ್ಷಿಸುತ್ತವೆ.
4/ 7
ದಿನದ ಯಾವುದೇ ಸಮಯದಲ್ಲಿ ಇಂತಿಷ್ಟು ಗಂಟೆಗಳ ಕಾಲ ಆನ್ ಲೈನ್ ಮೂಲಕ ಗ್ರಾಹಕರಿಗೆ ಟ್ರೈನಿಂಗ್ ನೀಡಿದರೆ, ಗಂಟೆಯ ಲೆಕ್ಕದಲ್ಲಿ ಫೀಸ್ ಪಡೆಯಬಹುದು.
5/ 7
ಇತ್ತೀಚಿನ ದಿನಗಳಲ್ಲಿ ಯೋಗದ ಕಡೆಗೆ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ. ಯೋಗಾಸನಕ್ಕೆ ಯಾವುದೇ ಉಪಕರಣಗಳು ಬೇಕಿಲ್ಲ. ಇದನ್ನು ಸುಲಭವಾಗಿ ಆನ್ ಲೈನ್ ಮಾರ್ಗದರ್ಶನದ ಮೂಲಕ ಮಾಡಬಹುದು. ಯೋಗ ಗೊತ್ತಿರುವವರು ಆನ್ ಲೈನ್ ಟ್ರೈನಿಂಗ್ ಅನ್ನು ಸೈಡ್ ಬ್ಯುಸಿನೆಸ್ ಆಗಿ ಮಾಡಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
6/ 7
ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಕ್ರಮೇಣ ಜನರು ನಿರಂತರವಾಗಿ ಆನ್ ಲೈನ್ ಟ್ರೈನಿಂಗ್ ಗೆ ಬರಲು ಪ್ರಾರಂಭಿಸುತ್ತಾರೆ. ಇದರಿಂದ ಆದಾಯವೂ ಹೆಚ್ಚುತ್ತದೆ.
7/ 7
ಯಾರಾದರೂ ಸ್ವಂತ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಲು ಸಾಕಷ್ಟು ಹಣವನ್ನು ಹೊಂದಿಲ್ಲದಿದ್ದರೆ, ಅವರು ಲೈವ್ ವೀಡಿಯೊ ಸ್ಟ್ರೀಮಿಂಗ್ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ತರಗತಿಗಳನ್ನು ಪ್ರಾರಂಭಿಸಬಹುದು.