ಸೆಕೆಂಡ್ ಪಿಯು ಬಳಿಕ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನ ನಿಮಗೆ ಸಹಾಯಕವಾಗಲಿದೆ. ಬಿ.ಟೆಕ್ ಮೆರೈನ್ ಎಂಜಿನಿಯರಿಂಗ್ 4 ವರ್ಷಗಳ ಯುಜಿ ಕೋರ್ಸ್ ಆಗಿದ್ದು, 8 ಸೆಮಿಸ್ಟರ್ಗಳಿರುತ್ತದೆ. ಅಂದರೆ ಇಡೀ ಕೋರ್ಸ್ ಅನ್ನು ಎಂಟು ಭಾಗಗಳಾಗಿ ವಿಂಗಡಿಸಿ ಕಲಿಸಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ಪ್ರತಿ ಸೆಮಿಸ್ಟರ್ ಕೊನೆಯಲ್ಲಿ ಪರೀಕ್ಷೆ ಇರುತ್ತದೆ. (ಸಾಂದರ್ಭಿಕ ಚಿತ್ರ)
ಈ ಪದವಿ ಅಧ್ಯಯನದಲ್ಲಿ ಮೆಟೀರಿಯಲ್ ಸೈನ್ಸ್, ಮೆರೈನ್ ಬಾಯ್ಲರ್, ಫ್ಲೂಯಿಡ್ ಮೆಕ್ಯಾನಿಕ್ಸ್, ಡಿಸೈನ್ ಮತ್ತು ಡ್ರಾಯಿಂಗ್, ಮೆರೈನ್ ಆಕ್ಸಿಲಿಯರೀಸ್, ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಎಕನಾಮಿಕ್ಸ್, ನೇವಲ್ ಆರ್ಕಿಟೆಕ್ಚರ್, ಫೈರ್ ಕಂಟ್ರೋಲ್ ಮತ್ತು ಲೈಫ್ ಸೇವಿಂಗ್, ಮೆರೈನ್ ಪವರ್ ಪ್ಲಾಂಟ್, ಅಡ್ವಾನ್ಸ್ ಡ್ ಮೆರೈನ್ ಕಂಟ್ರೋಲ್ ಮತ್ತು ಶಿಪ್ ಸ್ಟ್ರಕ್ಚರ್ ಮುಂತಾದ ವಿಷಯಗಳನ್ನು ಕಲಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)