Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

ಭಾರತದಲ್ಲಿ ಬಹುತೇಕ ಯುವಜನತೆ ವೈದ್ಯರು ಅಥವಾ ಇಂಜಿನಿಯರ್ ಪದವಿ ಮಾಡುತ್ತಾರೆ. ಈ ಎರಡೂ ಸಾಂಪ್ರದಾಯಿಕ ಡಿಗ್ರಿಗಳನ್ನು ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕೇವಲ ಓದು ಒಂದೇ ಸಾಲದು, ಜೊತೆಗೆ ವೃತ್ತಿಗೆ ಬೇಕಾದ ಕೌಶಲ್ಯವಿದ್ದರೆ ಮಾತ್ರ ಬೇಡಿಕೆಯ ಉದ್ಯೋಗಿ ನೀವಾಗುತ್ತೀರಿ.

First published:

  • 18

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಅದೇ ರೀತಿ ಬೇಡಿಕೆಯ ವೈದ್ಯರಾಗುವುದು ಹೇಗೆ ಎಂದು ನಾವಿಂದು ಇಲ್ಲಿ ತಿಳಿಸಲಿದ್ದೇವೆ. ಸಾಕಷ್ಟು ವೈದ್ಯರು, ಆಸ್ಪತ್ರೆಗಳಿದ್ದರೂ ಜನ ಕೆಲ ವೈದ್ಯರನ್ನೇ ಹುಡುಕಿಕೊಂಡು ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಏಕೆಂದರೆ ರೋಗಿಗಳು ಕೆಲವೇ ಕೆಲವು ವೈದ್ಯರಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿರುತ್ತಾರೆ.

    MORE
    GALLERIES

  • 28

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಈ ಹಿನ್ನೆಲೆ ನೀವು ಸಹ ಬೇಡಿಕೆಯ ಡಾಕ್ಟರ್ ಆಗಬೇಕೆಂದರೆ ಕೆಲವು ಕೌಶಲ್ಯಗಳನ್ನು ಅವಳವಡಿಸಿಕೊಳ್ಳಬೇಕು. ಯಾವುದೇ ಕ್ಷೇತ್ರವಾಗಿರಲಿ ಯಶಸ್ಸು ಪಡೆಯಬೇಕು ಎಂದರೆ ಪ್ರಸ್ತುತ ಬೇಡಿಕೆಯಲ್ಲಿರುವ ಕೌಶಲ್ಯಗಳನ್ನು ಅವಳವಡಿಸಿಕೊಳ್ಳಬೇಕು. ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 38

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ವೈದ್ಯಲೋಕ ಮುಂದೆ ಸಾಗುತ್ತಿದ್ದಂತೆ ವೈದ್ಯರೂ ಕೂಡ ಅದಕ್ಕೆ ತಕ್ಕನಾದ ಕೌಶಲ್ಯಗಳನ್ನು ಹೊಂದುವುದು ಅತ್ಯವಶ್ಯಕ. ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ನವೀನ ಸಂಶೋಧನೆಗಳು ಮತ್ತು ಆರೋಗ್ಯ ಸೇವೆಗಳಲ್ಲಿನ ಪ್ರಗತಿ, ಹೊಸತನವನ್ನು ವೈದ್ಯರು ಅಳವಡಿಸಿಕೊಳ್ಳಬೇಕು.

    MORE
    GALLERIES

  • 48

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಡಿಜಿಟಲೀಕರಣ ಇಂದಿನ ಕಾಲದ ಅಭಿವೃದ್ದಿ ಮಂತ್ರ. ಪ್ರತಿ ಉದ್ಯಮದಲ್ಲೂ ಡಿಜಿಟಲೀಕರಣ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದೆ. ಅಂತೆಯೇ ವೈದ್ಯರು ಕೂಡ ತಮ್ಮ ವೃತ್ತಿ ಬದುಕಿನಲ್ಲಿ ಡಿಜಟಲೀಕರಣಕ್ಕೆ ಒತ್ತು ನೀಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಡಿಜಿಟಲ್ ಸೌಲಭ್ಯಗಳ ಬಳಕೆ ವಿಶೇಷವಾಗಿ ಕೊರೊನಾ ಸಮಯದಲ್ಲಿ ಹೆಚ್ಚಾಗಿದೆ. ಹೆಲ್ತ್ ಕೇರ್ ಸ್ಟಾರ್ಟ್ ಅಪ್ಗಳು, ತಂತ್ರಜ್ಞಾನ ಕಂಪನಿಗಳು ಡಿಜಿಟಲ್ ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಜಾರಿಗೆ ಬಂದಿವೆ. ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಈ ಅಂಶವನ್ನು ಪಾಲಿಸಬೇಕು. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಕೆಲವು ಮೇಜರ್ ಆಪರೇಷನ್ ಗಳನ್ನು ಸಹ ಆಪರೇಷನ್ ಥಿಯೇಟರ್ ಗಳಿಂದ ನೇರ ಪ್ರಸಾರ ಮಾಡಲಾಗುತ್ತದೆ. ತಜ್ಞರು ಹೇಗೆಲ್ಲಾ ಅಂತಹ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಆರಂಭಿಕ ಹಂತದಲ್ಲಿರುವ ವೈದ್ಯರು ನೋಡಿ ತಿಳಿದುಕೊಳ್ಳಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಹೊಸ ಆವಿಷ್ಕಾರಗಳು ನ್ಯಾನೊತಂತ್ರಜ್ಞಾನ, ರೊಬೊಟಿಕ್ಸ್ ವೈದ್ಯಕೀಯ ಕ್ಷೇತ್ರಗಳಿಗೆ ವಿಸ್ತರಿಸಿದೆ. ಆರಂಭಿಕ ರೋಗ ಪತ್ತೆ, ರೋಗ ನಿರ್ಣಯ ಮತ್ತು ಚಿಕಿತ್ಸೆಗಳಲ್ಲಿ AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 88

    Career Tips: ಬೇಡಿಕೆಯ ವೈದ್ಯರಾಗಲು ಯಾವೆಲ್ಲಾ ಸ್ಕಿಲ್ಸ್ ಇರಬೇಕು, ಇಲ್ಲಿದೆ ನೋಡಿ ಮಾಹಿತಿ

    ಮುಖ್ಯವಾಗಿ ವೈದ್ಯರಾದವರು ರೋಗಿಗಳ ಜೊತೆ ಸಹಾನೂಭೂತಿಯಿಂದ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಕರುಣೆಯಿಂದ ಸ್ಪಂದಿಸಬೇಕು. ಕೇವಲ ರೋಗಿ ಎಂದು ನೋಡದೆ ಅವರೊಂದಿಗೆ ಬೆರೆಯಬೇಕು. ಆಗ ಮಾತ್ರ ವೈದ್ಯರು ಜನರಿಗೆ ಹತ್ತಿರವಾಗುತ್ತಾರೆ.

    MORE
    GALLERIES