Interview Tips-5: ಇಂಟರ್ವ್ಯೂನಲ್ಲಿ ನಿಮ್ಮ ಪರಿಚಯ ಮಾಡಿಕೊಡುವಾಗ ಈ ಮಾಹಿತಿಗಳನ್ನು ಹೇಳಬೇಡಿ
ಯಾವುದೇ ಕೆಲಸಕ್ಕಾಗಿ ನಡೆಯುವ ಸಂದರ್ಶನವಿರಲಿ, ಮೊದಲಿಗೆ ಸಾಮಾನ್ಯವಾಗಿ ಹೇಳುವ ಪ್ರಶ್ನೆ ‘tell me about yourself’. ನಿಮ್ಮ ಪರಿಚಯ ಮಾಡಿಕೊಡುವಂತೆ ಸಂದರ್ಶಕರು ನಿಮ್ಮನ್ನು ಕೇಳುತ್ತಾರೆ. ಇದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ನೀವು ಕಳುಹಿಸಿರುವ ರೆಸ್ಯೂಮ್ ಅವರ ಮುಂದೆಯೇ ಇರುತ್ತದೆ. ನಿಮ್ಮ ಬಗೆಗಿನ ಎಲ್ಲಾ ಮಾಹಿತಿಗಳು ಅಲ್ಲಿ ಇರುತ್ತದೆ. ಆದರೂ ಸಂದರ್ಶಕರು ನಿಮ್ಮ ಬಗ್ಗೆ ಮಾಹಿತಿಯನ್ನು ನೀವೇ ಹೇಳಲಿ ಎಂದು ಬಯಸುತ್ತಾರೆ. ಏಕೆಂದರೆ ನಿಮ್ಮನ್ನು ನೀವು ಹೇಗೆ ಪರಿಚಯಿಸಿಕೊಳ್ಳುತ್ತೀರಿ ಎಂದು ನೋಡಲು ಬಯಸುತ್ತಾರೆ.
2/ 7
ಯಾವ ಅಂಶಗಳನ್ನು ಹೈಲೆಟ್ ಮಾಡುತ್ತಿರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವಾಗ ಯಾವ ವಿಷಯದ ಬಗ್ಗೆ ಹೆಮ್ಮೆ ಇದೆ ಎಂಬುದನ್ನು ಪರೀಕ್ಷಿಸುತ್ತಾರೆ. ಎಲ್ಲದ್ದಕ್ಕೂ ಮುಖ್ಯವಾಗಿ ಮಾತನಾಡುವಾಗ ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಅಳೆಯುತ್ತಾರೆ ಎಂಬುವುದನ್ನು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ನೆನಪಿನಲ್ಲಿಡಬೇಕು.
3/ 7
ಜಾಬ್ ಇಂಟರ್ ವ್ಯೂನಲ್ಲಿ ಹೇಳುವ ಈ ಮೊದಲ ಪ್ರಶ್ನೆಗೆ ಬಹುತೇಕರು ನನ್ನ ಹೆಸರು, ನನ್ನ ವಯಸ್ಸು ಇಷ್ಟು, ನಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದೇವೆ ಎಂದು ಹೇಳುತ್ತಾರೆ. ಇದು ಔಟ್ ಡೇಟೆಡ್. ಹಳೆಯ ಮಾದರಿಗೆ ಗುಡ್ ಬೈ ಹೇಳುವ ಕಾಲ ಈಗ ಬಂದಿದೆ. ಕಾಲಕ್ಕೆ ತಕ್ಕಂತೆ ಉತ್ತರಿಸುವ ಕಲೆಯನ್ನು ನಿಮ್ಮದಾಗಿಸಿಕೊಳ್ಳಬೇಕು.
4/ 7
ನಿಮ್ಮ ಪೂರ್ತಿ ಹೆಸರು ಹೇಳಿದ ಬಳಿಕ ಯಾವ ಶಿಕ್ಷಣವನ್ನು ಯಾವ ಕಾಲೇಜುಗಳಿಂದ ಪಡೆದಿದ್ದೀರಿ ಎಂದು ಹೇಳಿ. ಕಾಲೇಜು ದಿನಗಳಲ್ಲಿ ಇಲ್ಲವೇ ಹಿಂದಿನ ಕೆಲಸದಲ್ಲಿ ನೀವು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳಿ. ನಿಮಗೆ ಎಷ್ಟು ವರ್ಷಗಳ ಕೆಲಸದ ಅನುಭವ ಇದೆ ಎಂದು ಹೇಳಿ.
5/ 7
ನಂತರ ನೀವು ಅಪ್ಲೈ ಮಾಡಿರುವ ಕೆಲಸಕ್ಕೆ ಬೇಕಿರುವ, ನಿಮ್ಮಲ್ಲಿರುವ ಕೌಶಲ್ಯದ ಬಗ್ಗೆ ಹೇಳಬೇಕು. ಉದಾಹರಣೆಗೆ ನೀವು ರಿಸೆಪ್ಷನಿಸ್ಟ್ ಕೆಲಸಕ್ಕೆ ನೀವು ಇಂಟರ್ ವ್ಯೂಗೆ ಹೋಗಿದ್ದರೆ, ಜನರೊಂದಿಗೆ ಬೆರೆಯುವ, ಸರಿಯಾದ ಮಾಹಿತಿ ನೀಡುವ, ಮಾತನಾಡುವ ಕಲೆ ನಿಮ್ಮಲ್ಲಿ ಇದೆ ಎಂದು ಹೇಳಬೇಕು.
6/ 7
ನೀವು ಫ್ರೆಶರ್ ಆಗಿದ್ದರೆ ಓದಿನ ಸಮಯದಲ್ಲಿ ನೀವು ಮಾಡಿದ ಸಾಧನೆ ಬಗ್ಗೆ ಹೇಳಬೇಕು. ಇಲ್ಲವೇ ಹಿಂದಿನ ಉದ್ಯೋಗದಲ್ಲಿ ನೀವು ಎಷ್ಟು ಯಶಸ್ವಿಯಾಗಿ ಕೆಲಸ ಮಾಡಿದ್ದೀರಿ ಎಂದು ಹೇಳಬೇಕು.
7/ 7
ಕೊನೆಯದಾಗಿ ನೀವು ಎಂಥಹ ವ್ಯಕ್ತಿ ಎಂದು ಹೇಳಬೇಕು. ನಿಮ್ಮ ಆಸಕ್ತಿಗಳ ಬಗ್ಗೆ ಹೇಳಬಹುದು. ನಿಮಗೆ ಈ ಕೆಲಸ ಕೊಟ್ಟರೆ ಎಷ್ಟು ಯಶಸ್ವಿಯಾಗಿ ನಿಭಾಯಿಸುತ್ತೀರಿ ಎಂದು ಹೇಳಬೇಕು.