Govt Jobs After 12th: ಸೆಕೆಂಡ್ ಪಿಯು ಓದಿದ್ದರೆ ಸಾಕು ಈ ಸರ್ಕಾರಿ ಉದ್ಯೋಗಗಳಿಗೆ ನೀವು ಅರ್ಹರು
SSLC ಹಾಗೂ 2nd PUC ಬಳಿಕ ಬಹುತೇಕ ವಿದ್ಯಾರ್ಥಿಗಳು ಮುಂದೇನು ಓದಬೇಕು? ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು? ಯಾವ ಕರಿಯರ್ ಆಯ್ಕೆ ಮಾಡಿಕೊಳ್ಳಬೇಕು? ಅದಕ್ಕಾಗಿ ಏನನ್ನು ಓದಬೇಕು ಎಂಬ ಬಗ್ಗೆ ಸಾಕಷ್ಟು ಯೋಚಿಸುತ್ತಾರೆ. ಆ ನಿಟ್ಟಿನಲ್ಲಿ ಮುಂದುವರೆಯಲು ಬಯಸುತ್ತಾರೆ.
ಆದರೆ ಕೆಲವರು ಅನೇಕ ಕಾರಣಗಳಿಂದ ಸೆಕೆಂಡ್ ಪಿಯು ಬಳಿಕ ಉದ್ಯೋಗ ಮಾಡಲು ಮುಂದಾಗುತ್ತಾರೆ. ಪದವಿ ಇಲ್ಲದ್ದ ಕಾರಣ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಪದವಿ ಇಲ್ಲದ ಮಾತ್ರ ಸಿಕ್ಕ ಕೆಲಸ ಮಾಡುವ ಅಗತ್ಯವಿಲ್ಲ. ಸೆಕೆಂಡ್ ಪಿಯು ಬಳಿಕ ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಬಹುದು.
2/ 8
ಹೌದು, ಇದು ಸತ್ಯ. ಸೆಕೆಂಡ್ ಪಿಯು ಅಂದರೆ 12 ವರ್ಷದ ಶೈಕ್ಷಣಿಕ ಆಧಾರದ ಮೇಲೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕೆಲವು ಉದ್ಯೋಗಗಳಿಗೆ ಅರ್ಹರಾಗುತ್ತಾರೆ. ಇವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸುವುದು ನಿಮ್ಮ ಜೀವನವನ್ನೇ ಬದಲಾಯಿಸಬಹುದು.
3/ 8
ಹಾಗಾದರೆ ಸೆಕೆಂಟ್ ಪಿಯು ಓದಿದವರು ಯಾವೆಲ್ಲಾ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೇಗೆ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
4/ 8
1. ಭಾರತೀಯ ವಾಯುಪಡೆ: ನೀವು ವಾಯುಪಡೆಗೆ ಸೇರಲು ಬಯಸಿದರೆ, ಸೆಕೆಂಡ್ ಪಿಯುನಲ್ಲಿ ವಿಜ್ಞಾನದಲ್ಲಿ ಉತ್ತೀರ್ಣರಾಗಿರಬೇಕು. NDA ಪರೀಕ್ಷೆಯನ್ನು UPSC ಪ್ರತಿ ವರ್ಷ ಎರಡು ಬಾರಿ ನಡೆಸುತ್ತದೆ. ಈ ಪರೀಕ್ಷೆಯನ್ನು 3 ಹಂತಗಳಲ್ಲಿ ನಡೆಸಲಾಗುತ್ತದೆ.
5/ 8
ಈ ಪರೀಕ್ಷೆಯ ನಂತರ ಇನ್ನೂ 2 ಪರೀಕ್ಷೆಗಳಿವೆ. ಮೊದಲನೆಯದು ಪೈಲಟ್ ಆಟಿಟ್ಯೂಡ್ ಬ್ಯಾಟರಿ ಪರೀಕ್ಷೆ ಮತ್ತು ಎರಡನೆಯದು ಗಣಕೀಕೃತ ಪೈಲಟ್ ಆಯ್ಕೆ ವ್ಯವಸ್ಥೆ. ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸರ್ಕಾರಿ ಕೆಲಸ ಸಿಗುತ್ತದೆ.
6/ 8
2. ಪೊಲೀಸ್ ಕಾನ್ಸ್ ಟೇಬಲ್: ನೀವು 10+2 ನಂತರ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕಾಗಿ ನೀವು ಎಸ್ ಎಸ್ ಸಿ ಜಿಡಿ ಅಥವಾ ರಾಜ್ಯ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಯನ್ನು ಬರೆಯಬೇಕು. ಇದರೊಂದಿಗೆ ಫಿಸಿಕಲ್ ಟೆಸ್ಟ್ ಕೂಡ ಕ್ಲಿಯರ್ ಮಾಡಬೇಕು.
7/ 8
3. ಭಾರತೀಯ ಸೇನೆ: ಸೆಕೆಂಡ್ ಪಿಯು ನಂತರ ನೀವು ಭಾರತೀಯ ಸೇನೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ವರ್ಷ ಭಾರತೀಯ ಸೇನೆಯ ಹುದ್ದೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುತ್ತದೆ.
8/ 8
ಮೇಲೆ ತಿಳಿಸಿದ ಕೆಲಸಗಳಿಗೆ ಮನೋಬಲ ಹೆಚ್ಚಿರಬೇಕು. ನೀವು ಭಾರತೀಯ ಸೇನೆಯಲ್ಲಿ ಕೆಲಸ ಪಡೆಯಬೇಕಾದರೆ, ನೀವು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ನಂತರ SSB ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.