Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

ಪ್ರತಿಯೊಬ್ಬ ಉದ್ಯೋಗಿಗೂ ತನ್ನ ವೃತ್ತಿಜೀವನದಲ್ಲಿ ಅಭಿವೃದ್ಧಿ ಕಾಣಬೇಕು ಎಂಬ ಬಯಕೆ ಇರುತ್ತೆ. ಅದಕ್ಕಾಗಿ ಕಷ್ಟಪಟ್ಟು ಕೆಲಸವೊಂದೇ ಮಾಡಿದರೆ ಸಾಲದು. ನಿಮಗೆ ಯಾರೂ ಹೇಳದ ಕೆಲವೊಂದು ವಿಷಯಗಳನ್ನು ನೀವು ಮಾಡಬೇಕು. ಆಗ ಮಾತ್ರ ಸಕ್ಸಸ್ ಫುಲ್ ಕರಿಯರ್ ನಿಮ್ಮದಾಗುತ್ತದೆ.

First published:

  • 17

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    1) ನಿಮ್ಮ ಪ್ರತಿಭೆಯನ್ನು ಕಂಡುಕೊಳ್ಳಿ: ನೀವು ನಿಮ್ಮೊಳಗಿನ ಪ್ರತಿಭೆಯನ್ನು ಕಂಡು ಹಿಡಿಯಬೇಕು. ಒಮ್ಮೆ ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ನೀವು ಕಂಡುಕೊಂಡರೆ, ತಜ್ಞರ ಸಲಹೆಯನ್ನು ಪಡೆದು ಆ ಕ್ಷೇತ್ರದಲ್ಲಿ ಇತರರಿಗಿಂತ ಉತ್ತಮ ಸ್ಥಾನವನ್ನು ಪಡೆಯಬಹುದು.

    MORE
    GALLERIES

  • 27

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    2) ಆತ್ಮವಿಶ್ವಾಸವೇ ಎಲ್ಲಾ: ಜೀವನದ ಯುದ್ಧವನ್ನು ಗೆಲ್ಲಲು ನೀವು ಆತ್ಮವಿಶ್ವಾಸವನ್ನು ಹೊಂದಿರಬೇಕು. ನಿಮ್ಮಲ್ಲಿ ಸಾಮರ್ಥ್ಯವಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಎಷ್ಟೇ ದೊಡ್ಡ ಹುದ್ದೆ ಪಡೆದರೂ ಏನೂ ಮಾಡಲು ಸಾಧ್ಯವಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    3) ಕಾಂಟ್ಯಾಕ್ಟ್ ಬೆಳೆಸಿಕೊಳ್ಳಿ: ನೀವು ಹೆಚ್ಚು ಜನರೊಂದಿಗೆ ಸಂಪರ್ಕವನ್ನು ಹೊಂದಿದ್ದರೆ, ನಿಮ್ಮ ಜೀವನವು ಸುಲಭವಾಗುತ್ತದೆ. ವೃತ್ತಿಯನ್ನು ನಿರ್ಮಿಸಲು ಕೂಡ ಇದೇ ವಿಷಯ ಅನ್ವಯಿಸುತ್ತದೆ. ನಿಮ್ಮ ಉತ್ತಮ ಸಂಪರ್ಕಗಳು ನಿಮಗೆ ಉತ್ತಮ ವೃತ್ತಿ ಅವಕಾಶವನ್ನು ಪಡೆಯಲು ಸಹಾಯ ಮಾಡುತ್ತವೆ.

    MORE
    GALLERIES

  • 47

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    4) ಟೆಕ್ನೋ ಫ್ರೆಂಡ್ಲಿ: ತಂತ್ರಜ್ಞಾನದ ಜೊತೆ ನೀವು ಅಪ್ ಡೇಟ್ ಆಗುತ್ತಿರಬೇಕು. ಉತ್ತಮ ವೃತ್ತಿಜೀವನಕ್ಕಾಗಿ ನೀವು ಟೆಕ್ನೋ ಫ್ರೆಂಡ್ಲಿ ಆಗಿರುವುದು ಮುಖ್ಯ. ಇಂದು ಹೊಸ ತಂತ್ರಜ್ಞಾನವನ್ನು ನಿರಾಕರಿಸಲಾಗದಷ್ಟು ಸ್ಪರ್ಧೆ ಹೆಚ್ಚಾಗಿದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನದ ಉತ್ತಮ ಜ್ಞಾನವನ್ನು ಇರಿಸಿಕೊಳ್ಳಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    5) ಫ್ಯಾಮಿಲಿ ಕೂಡ ಮುಖ್ಯ: ವೃತ್ತಿಜೀವನದ ಏರಿಳಿತಗಳು ಮತ್ತು ಒತ್ತಡದ ಸಮಯದಲ್ಲಿ ನಿಮ್ಮ ಕುಟುಂಬವು ನಿಮ್ಮ ಸಹಾಯಕ್ಕೆ ಬರುತ್ತದೆ. ಅದಕ್ಕಾಗಿಯೇ ನಿಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಿ. ಕುಟುಂಬದೊಂದಿಗೆ ಇರುವುದು ನಿಮ್ಮ ಉದ್ವೇಗವನ್ನು ಕಡಿಮೆ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    6) ನಡವಳಿಕೆ ಚೆನ್ನಾಗಿರಬೇಕು: ನಿಮ್ಮ ನಡವಳಿಕೆಯು ನಿಮ್ಮ ಕನ್ನಡಿಯಾಗಿದೆ, ಆದ್ದರಿಂದ ಇತರರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಿರಿ. ನೀವು ಜನರನ್ನು ಚೆನ್ನಾಗಿ ನಡೆಸಿಕೊಳ್ಳಬೇಕು. ಇಲ್ಲವಾದರೆ ನೀವು ಜನಕ್ಕೆ ಬೇಡವಾದ ವ್ಯಕ್ತಿ ಆಗುತ್ತೀರಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ

    7) ನಿಮಗೆ ನೀವು ಪ್ರಾಮಾಣಿಕವಾಗಿರಿ: ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಡಿ. ನಿಮ್ಮ ಆತ್ಮಸಾಕ್ಷಿಗೆ ನೀವು ಬದ್ಧರಾಗಿರಿ. ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಟೀಕಿಸುವವರು ಇದ್ದೇ ಇರುತ್ತಾರೆ. ಹಾಗಾಗಿ ನಿಮ್ಮ ಕೆಲಸದ ಬಗ್ಗೆ ಯಾವಾಗಲೂ ಪ್ರಾಮಾಣಿಕವಾಗಿರಿ, ನಿಮ್ಮ ಪ್ರಾಮಾಣಿಕತೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES