Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

ಯಾವುದೇ ಉದ್ಯೋಗದ ಮೂಲ ಉದ್ದೇಶವೇ ಸಂಪಾದನೆ. ಹಣ ಪಡೆದು ಕೆಲಸ ಮಾಡುವವರನ್ನು ಉದ್ಯೋಗಿ ಎನ್ನುತ್ತಾರೆ. ಫ್ರೆಶರ್ ಆಗಿ ವೃತ್ತಿ ಶುರು ಮಾಡುವಾಗ ಒಳ್ಳೆಯ ಸಂಬಳದ ಕೆಲಸ ಸಿಕ್ಕರೆ ಸಾಕಪ್ಪಾ ಎನ್ನುತ್ತಾರೆ. ಪ್ರತಿವರ್ಷ ವೇತನ ಏರಿಕೆಯಾಗಬೇಕು ಎಂದು ಬಯಸುತ್ತಾರೆ. ಹಾಗಾದರೆ ಉದ್ಯೋಗಿಗೆ ಸಂಬಳವೊಂದೇ ಮುಖ್ಯವೇ?

First published:

 • 17

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  ಉದ್ಯೋಗಿಗೆ ಸಂಬಳದ ಅಗತ್ಯವಿದೆ, ಆದರೆ ಅದೊಂದೇ ಕಾರಣಕ್ಕೆ ಎಲ್ಲರೂ ಕೆಲಸ ಮಾಡುವುದಿಲ್ಲ. ಫ್ರೆಶರ್ ಆಗಿ ಕೆಲಸ ಶುರು ಮಾಡಿದಾಗ ಮುಖ್ಯವಾಗಿದ್ದ ಸಂಬಳ, ಅನುಭವಿ ಉದ್ಯೋಗಿಯಾದಾಗ 2ನೇ ಇಲ್ಲವೇ 3ನೇ ಸ್ಥಾನ ಪಡೆಯಬಹುದು. ಸಂಬಳದ ಆಚೆಗೆ ಕೆಲವೊಂದು ವಿಚಾರಗಳು ಉದ್ಯೋಗಿಗಳಿಗೆ ಮುಖ್ಯವಾಗುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 27

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  ದೊಡ್ಡ ಸಂಬಳ ಇದ್ದರೂ ಒಂದು ಕಂಪನಿಯ ಉದ್ಯೋಗಿಗಳು ಸರಣಿಯಲ್ಲಿ ರಾಜೀನಾಮೆ ನೀಡುತ್ತಿದ್ದರೆ, ಅಲ್ಲಿ ಗಂಭೀರ ಕಾರಣವಿರುತ್ತದೆ. ಸಂಬಳದಾಚೆಗೆ ಉದ್ಯೋಗಿ ಯಾವ ಕಾರಣಗಳಿಗೆ ಕೆಲಸ ಬಿಡಬಹುದು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

  MORE
  GALLERIES

 • 37

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  1. ಕೆಲಸದ ಬಗ್ಗೆ ತೃಪ್ತಿ ಇಲ್ಲದೆ ಇರುವುದು: ನೀವು ಮಾಡುವ ಕೆಲಸ ಇಷ್ಟವಿಲ್ಲದಿದ್ದರೆ, ಎಂದಿಗೂ ಅದು ನಿಮಗೆ ಹೊರೆಯೇ ಅನಿಸುತ್ತದೆ. ಸಂಬಳದ ಆಸೆಗೆ ನೀವು ದಿನಗಳನ್ನು ದೂಡುತ್ತಿರಿ ಹೊರತು ಇಷ್ಟಪಟ್ಟು ಕೆಲಸ ಮಾಡುವುದಿಲ್ಲ. ಆಗ ಉದ್ಯೋಗಿಗಳು ದೊಡ್ಡ ಸಂಬಳವನ್ನು ನಿರ್ಲಕ್ಷಿ ಕೆಲಸಕ್ಕೆ ರಾಜೀನಾಮೆ ಕೊಡುತ್ತಾರೆ.

  MORE
  GALLERIES

 • 47

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  2. ಕಚೇರಿ ವಾತಾವರಣ ಕೆಟ್ಟದಾಗಿರುವುದು: ಕೆಲವೊಮ್ಮೆ ಸಂಸ್ಥೆ ಚೆನ್ನಾಗಿದ್ದರೂ, ಕಚೇರಿಯ ವಾತಾವರಣ ಕೆಟ್ಟದಾಗಿರುತ್ತದೆ. ಮೇಲಾಧಿಕಾರಿಯ ಕಿರುಕುಳ, ತಾರತಮ್ಯ, ಗಾಸಿಪ್ , ಆಫೀಸ್ ರಾಜಕೀಯದಿಂದ ಬೇಸತ್ತು ಉದ್ಯೋಗಿಗಳು ಕೆಲಸ ಬಿಡುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  3. ಅತಿಯಾದ ಕೆಲಸ: ನಿತ್ಯ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾದ ಅನಿವಾರ್ಯತೆ. ನೇಮಕಾತಿ ಮಾಡದೇ ಇರುವುದರಿಂದ ಬೇರೆಯವರ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿ. ಅತಿಯಾದ ಕೆಲಸದ ಹೊರೆಯಿಂದಲೂ ಉದ್ಯೋಗಿಗಳು ರಾಜೀನಾಮೆ ನೀಡುತ್ತಾರೆ.

  MORE
  GALLERIES

 • 67

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  4. ಬೇರೆಡೆ ಒಳ್ಳೆಯ ಅವಕಾಶ: ಬೇರೆ ಕಂಪನಿಯಿಂದ ಒಳ್ಳೆಯ ಜಾಬ್ ಆಫರ್ ಬಂದರೆ ಕೂಡ ಉದ್ಯೋಗಿಗಳು ರಾಜೀನಾಮೆಗೆ ಮುಂದಾಗುತ್ತಾರೆ.

  MORE
  GALLERIES

 • 77

  Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್

  5. ಸಾರಿಗೆ, ಲಂಚ್-ಟೀ ವ್ಯವಸ್ಥೆ ಸರಿ ಇಲ್ಲದೆ ಇರುವುದು. ರಜೆಗಳನ್ನು ಕೊಡದೇ ಇರುವುದು, ಆಫೀಸ್ ನಲ್ಲಿ ಅತಿಯಾದ ಎಸಿ ಕೂಡ ಉದ್ಯೋಗಿಗಳು ಕೆಲಸ ಬಿಡಲು ಕಾರಣವಾಗುತ್ತದೆ ಎಂದರೆ ನೀವು ನಂಬಲೇಬೇಕು. (ಸಾಂದರ್ಭಿಕ ಚಿತ್ರ)

  MORE
  GALLERIES