ಭಾರತದಲ್ಲಿ ಮಹಿಳಾ ಪೈಲಟ್ ಗಳ ಶೇಕಡಾವಾರು ಪ್ರಮಾಣವು ವಿಶ್ವದಲ್ಲೇ ಅತಿ ಹೆಚ್ಚು. 1936 ರಲ್ಲಿ, ಭಾರತದ ಮೊದಲ ಮಹಿಳಾ ಪೈಲಟ್ ಸರಳಾ ಥಕ್ರಾಲ್ ಪೈಲಟ್ ವೃತ್ತಿ ಪ್ರಾರಂಭಿಸಿದರು. ಸರಳಾ 1914 ರಲ್ಲಿ ನವದೆಹಲಿಯಲ್ಲಿ ಜನಿಸಿದರು. ಪಿ.ಡಿ. ಶರ್ಮಾ ಭೇಟಿಯಾದ ನಂತರ ಮದುವೆಯಾದರು. 16 ವರ್ಷದ ಸರಳಾ ತನ್ನ ಗಂಡನ ಕುಟುಂಬದೊಂದಿಗೆ ವಾಸಿಸಲು ಲಾಹೋರ್ ಗೆ (ಅಂದಿನ ಅವಿಭಜಿತ ಭಾರತದಲ್ಲಿ) ತೆರಳಿದಳು. ಅವರ ಕುಟುಂಬದಲ್ಲಿ 9 ಪೈಲಟ್ ಗಳಿದ್ದರು.
ಸರಳಾ ಅವರ ಪತಿ ಪಿ.ಡಿ. ಶರ್ಮಾ ನುರಿತ ಪೈಲಟ್ ಆಗಿದ್ದರು. ಏರ್ ಮೇಲ್ ಪೈಲಟ್ ಪರವಾನಗಿ ಪಡೆದ ಮೊದಲ ಭಾರತೀಯ ವ್ಯಕ್ತಿ ಅವರಯ. ಪತಿ ಮತ್ತು ಮಾವ ಇಬ್ಬರೂ ಸರಳಾಳನ್ನು ಪೈಲಟ್ ವೃತ್ತಿಯನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಮಾವ ಸರಳಾಳನ್ನು ಲಾಹೋರ್ ಫ್ಲೈಯಿಂಗ್ ಕ್ಲಬ್ ಗೆ ಸೇರಿಸಿದರು. 1914 ರಲ್ಲಿ ಜನಿಸಿದ ಸರಳಾ ಥಕ್ರಾಲ್ ಅವರು ತಮ್ಮ 21 ನೇ ವಯಸ್ಸಿನಲ್ಲಿ 1936 ರಲ್ಲಿ ತಮ್ಮ ವಾಯುಯಾನ ಪೈಲಟ್ ಪರವಾನಗಿಯನ್ನು ಪಡೆದರು. ಜಿಪ್ಸಿ ಮಾತ್ ಅನ್ನು ಏಕಾಂಗಿಯಾಗಿ ಹಾರಿಸಿದರು. (ಸಾಂದರ್ಭಿಕ ಚಿತ್ರ)
ಸರಳಾ ಸೀರೆಯಲ್ಲಿ ಅವಳಿ ರೆಕ್ಕೆಯ ಜಿಪ್ಸಿ ಮಾತ್ ನ ಕಾಕ್ ಪಿಟ್ ಗೆ ಕಾಲಿಟ್ಟರು. ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸಿದರು. ಆಗ ಆಕೆಗೆ 21 ವರ್ಷ ಮತ್ತು ನಾಲ್ಕು ವರ್ಷದ ಮಗಳೂ ಇದ್ದಳು. ಸರಳಾ ಥಕ್ರಾಲ್ ತನ್ನ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡಿದರು ಎಂದರೆ ಕೇವಲ ಎಂಟು ಗಂಟೆ ಹತ್ತು ನಿಮಿಷಗಳ ತರಬೇತಿಯ ನಂತರ ಬೋಧಕರು ಆಕೆ ಏಕಾಂಗಿ ಹಾರಾಟಕ್ಕೆ ಸಿದ್ಧ ಎಂದು ಪರಿಗಣಿಸಿದರು.