Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

ಕಲೆ ಅನ್ನೋದು ಎಲ್ಲರಿಗೂ ಒಲಿಯುವಂತಹದ್ದು ಅಲ್ಲ. ವಿಶಿಷ್ಟ ಕೌಶಲ್ಯ ಕೆಲವೇ ಕೆಲವರಿಗೆ ಮಾತ್ರ ಸಿದ್ಧಿಸುತ್ತದೆ. ಅದರಲ್ಲೂ ಚಿತ್ರಕಲೆಯಲ್ಲಿ ನೈಪುಣ್ಯವುಳ್ಳವರು ಅದೇ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬಹುದು. ಕಲಾವಿದರು ಯಾವೆಲ್ಲಾ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು ಎಂಬುವುದನ್ನು ಇಲ್ಲಿ ತಿಳಿಯೋಣ.

First published:

  • 17

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    1) ಕಲಾವಿದರು ಎಂದರೆ ಚಿತ್ರಕಲೆ, ಮರದ ಮೇಲೆ ವಿನ್ಯಾಸ, ಮೆಟಲ್ ಹಾಗೂ ವಸ್ತ್ರಗಳ ಮೇಲೆ ಚಿತ್ರಕಲೆಗಳನ್ನು ರೂಪಿಸುವವರಾಗಿದ್ದಾರೆ. ತಮ್ಮ ಚಿತ್ರಕಲೆಗಳನ್ನು ಮಾರಾಟ ಮಾಡುವ ಮೂಲಕ ಅಥವಾ ಕಲಾ ಗ್ಯಾಲರಿಗಳಲ್ಲಿ ಅವುಗಳನ್ನು ಪ್ರದರ್ಶನಕ್ಕಿರಿಸುವ ಮೂಲಕ ಹಣ ಸಂಪಾದಿಸಬಹುದಾಗಿದೆ. ಕಲೆಯ ಜೊತೆಗೆ ಮಾರಾಟ ವ್ಯವಹಾರವೂ ತಿಳಿದಿರಬೇಕು. ( ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    2) ಪುಸ್ತಕದ ಕವರ್ ಗಾಗಿ ಚಿತ್ರಕಲೆ ಬಿಡಿಸುವುದು, ಮ್ಯಾಗಜೀನ್ಸ್, ಜಾಹೀರಾತುಗಳು, ಗ್ರೀಟಿಂಗ್ಸ್, ಅನಿಮೇಷನ್ ಗಳನ್ನು ರಚಿಸಲು ಆರ್ಟ್ ಇಲ್ಲುಸ್ಟ್ರೇಟರ್ ಗಳು ತಮ್ಮ ಚಿತ್ರಕಲಾ ಕೌಶಲ್ಯಗಳನ್ನು ಬಳಸಿಕೊಳ್ಳುತ್ತಾರೆ. ಇವುಗಳಿಂದಲೂ ಒಳ್ಳೆಯ ಆದಾಯವನ್ನು ಗಳಿಸಬಹುದು.

    MORE
    GALLERIES

  • 37

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    3) ಕಲಾ ಪ್ರದರ್ಶನಗಳನ್ನು ಯೋಜಿಸಲು ಕ್ಯಾಟಲಾಗ್ ರಚನೆಗಳಂತಹ ಕೆಲಸವನ್ನು ಮಾಡಬಹುದು. ಕಲಾ ಇತಿಹಾಸದ ಬಗ್ಗೆ ಜ್ಞಾನವನ್ನು ಮೇಲ್ವಿಚಾರಕರಾದವರು ಹೊಂದಿರಬೇಕು. ಕಲಾ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಆದಾಯದ ಮೂಲ ಕಂಡುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    4) ಕಲಾ ನಿರ್ದೇಶಕರಾಗಬಹುದು. ಸಿನಿಮಾ, ಜಾಹೀರಾತು, ಟಿವಿ ಕಾರ್ಯಕ್ರಮ ಸೃಷ್ಟಿಸುವುದು ಕಲಾ ನಿರ್ದೇಶಕರ ಜವಾಬ್ದಾರಿ ಆಗಿರುತ್ತದೆ. ದೃಶ್ಯ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಕಲಾವಿದರು ಮತ್ತು ವಿನ್ಯಾಸಕರೊಂದಿಗೆ ಕೆಲಸ ಮಾಡಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    5) ಕಲಾ ಚಿಕಿತ್ಸಕರಾಗಬಹುದು. ಇವರು ಮಾನಸಿಕ ಅಸ್ವಸ್ಥತೆ, ಸಂವಹನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಥೆರಪಿಸ್ಟ್ ಗಳು ಚಿಕಿತ್ಸೆಯನ್ನು ನೀಡುತ್ತಾರೆ. ಇದಕ್ಕಾಗಿ ಮುಖ್ಯವಾಗಿ ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕಾಗುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    6) ಆರ್ಟ್ಸ್ ಟೀಚರ್ ಆಗಬಹುದು. ಶಾಲಾ-ಕಾಲೇಜುಗಳಲ್ಲಿ ಕಲಾಶಿಕ್ಷಕರಾಗಿ, ಉಪನ್ಯಾಸಕರಾಗಿ ವೃತ್ತಿಜೀವನವನ್ನು ಆರಂಭಿಸಬಹುದಾಗಿದೆ. ಇದಕ್ಕಾಗಿ ಕಲಾ ಪದವಿ ಹಾಗೂ ಬೋಧನಾ ಅರ್ಹತೆಯನ್ನು ಪಡೆಯುವುದು ಕಡ್ಡಾಯವಾಗಿದೆ.

    MORE
    GALLERIES

  • 77

    Career Options: ಚಿತ್ರಕಲೆ ಪ್ರತಿಭೆವುಳ್ಳವರು ಈ ಉದ್ಯೋಗಗಳ ಮೂಲಕ ಯಶಸ್ವಿ ವೃತ್ತಿ ರೂಪಿಸಿಕೊಳ್ಳಬಹುದು

    7) ಅನಿಮೇಟರ್, ಗ್ರಾಫಿಕ್ ಡಿಸೈನರ್ ಕೂಡ ಆಗಬಹುದು. ಇವರು ರೇಖಾಚಿತ್ರಗಳು ಮತ್ತು ಗ್ರಾಫಿಕ್ಸ್ ಮೂಲಕ ಸುಂದರ ಲೋಕವನ್ನೇ ಸೃಷ್ಟಿಸುತ್ತಾರೆ. ಈ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದವರು ಸಿನಿಮಾ, ವಿಡಿಯೋ ಗೇಮ್ಸ್, ಜಾಹೀರಾತು, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದು.

    MORE
    GALLERIES