Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

ಸರ್ಕಾರಿ ಕೆಲಸ ಪಡೆಯುವುದು ಬಹುತೇಕರ ಕನಸು. ಆದರೆ ನಮ್ಮಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಕಷ್ಟದ ಕೆಲಸ. ಹೆಚ್ಚಿನ ಸಂಖ್ಯೆಯ ಯುವಜನತೆ ಹಲವು ವರ್ಷಗಳಿಂದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಆಗ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಭಾವಿಸುತ್ತಾರೆ. ಇದು ನಿಜ ಕೂಡ, ಏಕೆಂದರೆ ಸರ್ಕಾರಿ ನೇಮಕಾತಿಗಾಗಿ ನಡೆಯುವ ಬಹುತೇಕ ಪರೀಕ್ಷೆಗಳು ತುಂಬಾ ಕಷ್ಟಕರವಾಗಿರುತ್ತವೆ.

First published:

  • 18

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    ಹಾಗಂತ ಕಠಿಣ ಪರೀಕ್ಷೆಗಳಿಗೆ ಹೆದರಿ ಸರ್ಕಾರಿ ಉದ್ಯೋಗದ ಆಸೆಯನ್ನು ಕೈ ಬಿಡುವ ಅಗತ್ಯವಿಲ್ಲ. ಕೆಲವು ಪರೀಕ್ಷೆಗಳು ಸುಲಭವಾಗಿಯೂ ಸಹ ಇವೆ. ಸ್ಮಾರ್ಟ್ ಆಗಿ ಅವುಗಳಿಗೆ ತಯಾರಿ ನಡೆಸಿದರೆ ಪರೀಕ್ಷೆಯಲ್ಲಿ ಪಾಸ್ ಆಗಿ ಸರ್ಕಾರಿ ಉದ್ಯೋಗ ಪಡೆಯಬಹುದು. ನಾವು ಅಂತಹ ಸುಲಭವಾದ ಸರ್ಕಾರಿ ಪರೀಕ್ಷೆಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

    MORE
    GALLERIES

  • 28

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    SDA ಪರೀಕ್ಷೆ: KPSC SDA ಪರೀಕ್ಷೆಗೆ ಕನಿಷ್ಟ 10ನೇ ತರಗತಿ/ ಸೆಕೆಂಡ್ ಪಿಯು ಓದಿದ್ದರೂ ಸಾಕು. ಪ್ರತಿ ವರ್ಷ ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದರೆ ಸೇವಾ ರೆಜಿಸ್ಟರ್ಗಳ ನಿರ್ವಹಣೆ ಮತ್ತು ಸಿಬ್ಬಂದಿ ಸ್ಥಾಪನೆಯ ಕೆಲಸ ಸಿಗುತ್ತೆ. ವೇತನ ಬಿಲ್ ಗಳ ತಯಾರಿಕೆ, ಸಿಬ್ಬಂದಿಯ ವೇತನ ವಿತರಣೆಯ ರಿಜಿಸ್ಟರ್ ಮತ್ತು ನಗದು ಪುಸ್ತಕಗಳನ್ನು ನಿರ್ವಹಿಸುವುದು ಒಳಗೊಂಡಿರುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 38

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    FDA ಪರೀಕ್ಷೆ: ಈ ಸರ್ಕಾರಿ ಉದ್ಯೋಗಕ್ಕೂ ಪದವಿಯ ಅಗತ್ಯವಿಲ್ಲ. ಸೇವಾ ರೆಜಿಸ್ಟರ್ ಗಳ ನಿರ್ವಹಣೆ ಮತ್ತು ಸಿಬ್ಬಂದಿ ಸ್ಥಾಪನೆ ಕೆಲಸ ಮಾಡಬೇಕಾಗುತ್ತೆ. ಎಂಜಿನಿಯರಿಂಗ್ ಸಿಬ್ಬಂದಿಯ ವೈಯಕ್ತಿಕ ಕಡತಗಳನ್ನು ನಿರ್ವಹಿಸುವುದು ಇವರ ಕೆಲಸವಾಗಿರುತ್ತದೆ. ಬಹುಆಯ್ಕೆ ಪರೀಕ್ಷೆ ಮಾತ್ರ ಇರುತ್ತದೆ, ಸಂದರ್ಶನ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    RRB ಗ್ರೂಪ್ ಡಿ ಪರೀಕ್ಷೆ: ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಗಾಗಿ ರೈಲ್ವೆ ನಡೆಸುವ ಈ ಪರೀಕ್ಷೆ ಸಾಮಾನ್ಯ ಮಟ್ಟದ್ದಾಗಿದೆ. ಇದರಲ್ಲಿ ಜನರಲ್ ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ, ಜನರಲ್ ಇಂಟಲಿಜೆನ್ಸ್ ಮತ್ತು ಜನರಲ್ ಅವೇರ್ನೆಸ್ ನಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ಒಟ್ಟು 100 ಅಂಕಗಳಿದ್ದು, 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅಲ್ಲದೆ ಇದರಲ್ಲಿ ನೆಗೆಟಿವ್ ಮಾರ್ಕಿಂಗ್ ಇಲ್ಲ.

    MORE
    GALLERIES

  • 58

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    SSC ಎಂಟಿಎಸ್ ಪರೀಕ್ಷೆ: ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗಳಿಗೆ ನಡೆಯಲಿರುವ ಈ ಪರೀಕ್ಷೆಗೆ 10 ನೇ ತರಗತಿ ಉತ್ತೀರ್ಣರಾದವರು ಸಹ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಯಲ್ಲಿ 2 ಹಂತದ ಪರೀಕ್ಷೆಯೂ ಇದ್ದು, ಮೊದಲ ಹಂತದಲ್ಲಿ ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ, ಜನರಲ್ ಇಂಟೆಲಿಜೆನ್ಸ್ ಮತ್ತು ಜನರಲ್ ಅವೇರ್ನೆಸ್ ಪ್ರಶ್ನೆಗಳಿರುತ್ತವೆ. ಎರಡನೇ ಹಂತದ ಲಿಖಿತ ಪರೀಕ್ಷೆಯು ವಿವರಣಾತ್ಮಕ ಪ್ರಕಾರವಾಗಿದೆ.

    MORE
    GALLERIES

  • 68

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    SSC CHSL ಪರೀಕ್ಷೆ: ಸಂಯೋಜಿತ ಹೈಯರ್ ಸೆಕೆಂಡರಿ ಲೆವೆಲ್, CHSL ಪರೀಕ್ಷೆಯ ಮೂಲಕ, 12 ನೇ ಕ್ಲಾಸ್ ತೇರ್ಗಡೆಯಾದ ಅಭ್ಯರ್ಥಿಗಳ ಪರೀಕ್ಷೆಗಳನ್ನು ನಡೆಸುತ್ತದೆ. ವಿವಿಧ ವಿಭಾಗಗಳಲ್ಲಿ ಡಾಟಾ ಎಂಟ್ರಿ ಆಪರೇಟರ್, ಪೋಸ್ಟಲ್ ಅಸಿಸ್ಟೆಂಟ್, ಲೋವರ್ ಡಿವಿಷನ್ ಕ್ಲರ್ಕ್ ಮುಂತಾದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿ ಪರೀಕ್ಷೆಯ ಅಡಿಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ಸಹ ನೀಡಬೇಕು. ಇದರ ಕಷ್ಟದ ಮಟ್ಟವೂ ಸಾಮಾನ್ಯವಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    CTET ಪರೀಕ್ಷೆ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, CBSE ನಡೆಸುವ ಈ ಪರೀಕ್ಷೆಯ ಮೂಲಕ, ಕೇಂದ್ರ ಶಾಲೆಗಳು ಮತ್ತು ವಿವಿಧ ರಾಜ್ಯ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರಾಗಲು ಅರ್ಹತೆಯನ್ನು ಒದಗಿಸಲಾಗಿದೆ. ಇದರಲ್ಲಿ 1 ರಿಂದ 5 ನೇ ತರಗತಿ ಶಿಕ್ಷಕರಿಗೆ ಪತ್ರಿಕೆ 1 ಮತ್ತು 6 ರಿಂದ 8 ನೇ ತರಗತಿಯವರಿಗೆ ಪತ್ರಿಕೆ 2 ನೀಡಬೇಕು. ಈ ಪರೀಕ್ಷೆಯಲ್ಲಿ, ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರದ ವಿಷಯಗಳು, ಭಾಷೆ 1, ಭಾಷೆ 2, ಗಣಿತ ಮತ್ತು ಪರಿಸರ ಅಧ್ಯಯನಗಳು ವಿಷಯಗಳು ಇರುತ್ತವೆ.

    MORE
    GALLERIES

  • 88

    Govt Job Exams: ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಲು ಈ ಸಿಂಪಲ್ ಪರೀಕ್ಷೆಗಳಿಗೆ ತಯಾರಿ ನಡೆಸಿ

    RRB NTPC ಪರೀಕ್ಷೆ: ರೈಲ್ವೆಯ ವಿವಿಧ ತಾಂತ್ರಿಕವಲ್ಲದ ಜನಪ್ರಿಯ ವರ್ಗದ ಹುದ್ದೆಗಳಿಗೆ ಈ ಪರೀಕ್ಷೆಯಲ್ಲಿ ನಾಲ್ಕು ಹಂತಗಳಿವೆ. ಇದರಲ್ಲಿ ಮೊದಲ ಮತ್ತು ಎರಡನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದೆ. ಮೂರನೇ ಹಂತದಲ್ಲಿ ಸ್ಕ್ರೀನ್ ಟೆಸ್ಟ್ ಮತ್ತು ನಾಲ್ಕನೇ ಹಂತದಲ್ಲಿ ದಾಖಲೆ ಪರಿಶೀಲನೆ ಇರುತ್ತದೆ. ಹಂತ 1 ಮತ್ತು ಹಂತ 2 ಎರಡರಲ್ಲೂ ಸಾಮಾನ್ಯ ಇಂಗ್ಲಿಷ್, ಸಂಖ್ಯಾ ಸಾಮರ್ಥ್ಯ ಮತ್ತು ಸಾಮಾನ್ಯ ಬುದ್ಧಿವಂತಿಕೆಯಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

    MORE
    GALLERIES