UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

UPSC Result: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಟಾಪರ್ ಡಾ.ಮಯೂರ್ ಹಜಾರಿಕಾ. ಮೊನ್ನೆಯಷ್ಟೇ ಪ್ರಕಟಗೊಂಡ ಯುಪಿಎಸ್ ಸಿ ಫಲಿತಾಂಶದಲ್ಲಿ ಪುರುಷ ಅಭ್ಯರ್ಥಿಗಳಲ್ಲೇ ಮಯೂರ್ ಟಾಪರ್ ಎನಿಸಿಕೊಂಡಿದ್ದಾರೆ.

First published:

  • 17

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಮಯೂರ್ ಹಜಾರಿಕಾ ಮೊದಲ ಪ್ರಯತ್ನದಲ್ಲೇ 5ನೇ Rank ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ 2022 ರ ಫಲಿತಾಂಶದಲ್ಲಿ ಒಟ್ಟು 933 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಟಾಪ್ 5 ರಲ್ಲಿ 4 ಮಹಿಳೆಯರಿದ್ದು, ಅಸ್ಸಾಂನ ಮಯೂರ್ ಹಜಾರಿಕಾ ಐದನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 27

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಅಸ್ಸಾಂ ರಾಜ್ಯದ ತೇಜ್ ಪುರಚಾ ನಿವಾಸಿ ಮಯೂರ್ ಹಜಾರಿಕಾ ಮೊದಲಿನಿಂದಲೂ ಟಾಪರ್. ಅವರು ತಮ್ಮ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿಯಲ್ಲಿ ಟಾಪರ್ ಆಗಿದ್ದಾರೆ. ಹಜಾರಿಕಾ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ, ಅವರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ.

    MORE
    GALLERIES

  • 37

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    MBBS ಪರೀಕ್ಷೆಯ ನಂತರ ಹಜಾರಿಕಾ ಅವರು ಯುಪಿಎಸ್ಸಿಗೆ ತಯಾರಿ ನಡೆಸುತ್ತಿದ್ದರು. ಆದರೆ ಅವರು ಅಖಿಲ ಭಾರತ 5ನೇ ಶ್ರೇಣಿಯನ್ನು ಪಡೆಯುವ ನಿರೀಕ್ಷೆಯಲ್ಲಿ ಇರಲಿಲ್ಲವಂತೆ. ಮಯೂರ್ ಅವರ ಈ ಸಾಧನೆ ಅಸ್ಸಾಂ ಮುಖ್ಯಮಂತ್ರಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

    MORE
    GALLERIES

  • 47

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಮಯೂರ್ ಅವರ ತಂದೆ ಕೃಷ್ಣ ಹಜಾರಿಕಾ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮೌಶುಮಿ ಹಜಾರಿಕಾ ಗೃಹಿಣಿ ಆಗಿದ್ದಾರೆ.

    MORE
    GALLERIES

  • 57

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಮಯೂರ್ ಪ್ರಿಲಿಮ್ಸ್ ಗೆ ತಯಾರಿ ನಡೆಸುತ್ತಿರುವಾಗ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಗ್ರಾಮೀಣ ಪೋಸ್ಟಿಂಗ್ ನ ಭಾಗವಾಗಿ ನಾಗಾನ್ ಜಿಲ್ಲೆಯ ಆಸ್ಪತ್ರೆಯಲ್ಲಿ ಕರ್ತವ್ಯಗಳನ್ನು ಪೂರೈಸಿದ್ದಾರೆ. ಮಯೂರ್ ತಮ್ಮ ಇಂಟರ್ನ್ ಶಿಪ್ ಸಮಯದಲ್ಲಿ ಕೋವಿಡ್ -19 ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ತಮ್ಮ ಜವಾಬ್ದಾರಿಗಳ ನಡುವೆ ಅವರು ತಮ್ಮ ಪರೀಕ್ಷಾ ತಯಾರಿಯನ್ನು ಮುಂದುವರೆಸಿದ್ದರು.

    MORE
    GALLERIES

  • 67

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಮಾಧ್ಯಮದವರೊಂದಿಗೆ ಮಾತನಾಡಿದ ಹಜಾರಿಕ್, ನಾನು ಉತ್ತಮ ಶ್ರೇಣಿಯನ್ನು ನಿರೀಕ್ಷಿಸಿರಲಿಲ್ಲ. ಆದರೆ, ಫಲಿತಾಂಶದಿಂದ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

    MORE
    GALLERIES

  • 77

    UPSC Success Story: 5ನೇ Rank ಮೂಲಕ ಪುರುಷ ಅಭ್ಯರ್ಥಿಗಳಲ್ಲಿ ಟಾಪರ್ ಆದ ಡಾಕ್ಟರ್ ಮಯೂರ್

    ಮಯೂರ್ ಪ್ರಿಲಿಮ್ಸ್ ತಯಾರಿಗಾಗಿ ಆಯ್ದ ಟಿಪ್ಪಣಿಗಳನ್ನು ಸಿದ್ಧಪಡಿಸಿದರು ಮತ್ತು ವಿಷಯವಾರು ಅಭ್ಯಾಸ ಮಾಡಿದರು. ನನ್ನ ಮೊದಲ ಆದ್ಯತೆಯು ಭಾರತೀಯ ವಿದೇಶಾಂಗ ಸೇವೆ (IFS) ಆಗಿರುತ್ತದೆ ಎಂದು ಅವರು ಹೇಳಿದರು. ಆ ಮೂಲಕ ಭಾರತೀಯ ವಿದೇಶಾಂಗ ಅಧಿಕಾರಿ ಆಗುವ ಹಾದಿಯಲ್ಲಿದ್ದಾರೆ.

    MORE
    GALLERIES