Dr. Bhimrao Ambedkar Education Qualification:ಡಾ.ಬಿ.ಆರ್. ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರಿಗೆ 9 ಭಾಷೆಗಳ ಜ್ಞಾನವಿತ್ತು. ಒಟ್ಟು 32 ಡಿಗ್ರಿಗಳನ್ನು ಹೊಂದಿದ್ದರು. ಸುಮಾರು 21 ವರ್ಷಗಳ ಕಾಲ ಜಗತ್ತಿನ ಎಲ್ಲ ಧರ್ಮಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದರು. ಡಾ.ಭೀಮರಾವ್ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ 8 ವರ್ಷಗಳ ಅಧ್ಯಯನವನ್ನು ಕೇವಲ 2 ವರ್ಷ, 3 ತಿಂಗಳಲ್ಲಿ ಪೂರ್ಣಗೊಳಿಸಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ 'ಡಾಕ್ಟರ್ ಆಫ್ ಸೈನ್ಸ್' ಎಂಬ ಡಾಕ್ಟರೇಟ್ ಪದವಿಯನ್ನು ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿಯಾಗಿದ್ದಾರೆ.
Alladi Krishnaswamy Iyer Education Qualification: ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಒಬ್ಬ ಭಾರತೀಯ ಕಾನೂನು ಪಂಡಿತರಾಗಿದ್ದರು, ಅವರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾದರು. ಕೃಷ್ಣಸ್ವಾಮಿ ಅವರು 1899 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಬಿಡುವಿನ ವೇಳೆಯಲ್ಲಿ ಕಾನೂನು ಅಧ್ಯಯನ ತರಗತಿಗಳಿಗೆ ಹಾಜರಾಗುತ್ತಿದ್ದರು. ನಂತರ ಅವರು ಬಿಎಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರನ್ನು ದಿವಾನ್ ಬಹದ್ದೂರ್ ಎಂದು ಕರೆಯಲಾಯಿತು.
Kanhaiyalal Maneklal Munshi Education: ಕನ್ಹಯ್ಯಾಲಾಲ್ ಮುನ್ಷಿ (ಡಾ. ಕೆ.ಎಂ. ಮುನ್ಷಿ) ಅವರು ಗುಜರಾತ್ ನ ಭರೂಚ್ ನಲ್ಲಿ 30 ಡಿಸೆಂಬರ್ 1887 ರಂದು ಜನಿಸಿದರು. ಅವರು 1902 ರಲ್ಲಿ ಬರೋಡಾ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. 1907 ರಲ್ಲಿ, ಅವರು ಇಂಗ್ಲಿಷ್ ವಿಷಯದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸುವ ಮೂಲಕ ಬಿಎ ಪದವಿಯೊಂದಿಗೆ ಎಲೈಟ್ ಪ್ರಶಸ್ತಿಯನ್ನು ಪಡೆದರು. ನಂತರ ಅವರು ಅದೇ ವಿಶ್ವವಿದ್ಯಾಲಯದಿಂದ ಗೌರವ ಪದವಿಯನ್ನು ಪಡೆದರು. 1910 ರಲ್ಲಿ ಮುಂಬೈನಿಂದ LLB ಪದವಿಯನ್ನು ಪಡೆದ ನಂತರ ಅವರು ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು.
Muhammed Saadulah Education Qualification: ಸರ್ ಸೈಯದ್ ಮುಹಮ್ಮದ್ ಸಾದುಲ್ಲಾ ಅವರು ಬ್ರಿಟಿಷ್ ಭಾರತದಲ್ಲಿ ಅಸ್ಸಾಂನ ಪ್ರಧಾನ ಮಂತ್ರಿ ಮತ್ತು ರಾಜಕಾರಣಿ, ಕಾನೂನು ಪಂಡಿತರು, ಸಂವಿಧಾನ ಸಭೆಯ ಪ್ರಮುಖ ಸದಸ್ಯ ಮತ್ತು ಅಸ್ಸಾಂ ಯುನೈಟೆಡ್ ಮುಸ್ಲಿಂ ಪಕ್ಷದ ಪ್ರಮುಖ ರಾಜಕಾರಣಿಯಾಗಿದ್ದಾರು. ಅವರು ಗುವಾಹಟಿಯ ಕಾಟನ್ ಕಾಲೇಜು ಮತ್ತು ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಎಂಎ ಮತ್ತು ಬಿಎಲ್ ಪದವಿ ಪಡೆದಿದ್ದರು.
N. Madhava Rao Education Qualification: ಸರ್ ನ್ಯಪತಿ ಮಾಧವ ರಾವ್ ಒಬ್ಬ ಭಾರತೀಯ ನಾಗರಿಕ ಸೇವಕ ಮತ್ತು ಆಡಳಿತಗಾರ. ಅವರು 1941 ರಿಂದ 1945 ರವರೆಗೆ ಮೈಸೂರು ರಾಜ್ಯದ ದಿವಾನರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಡಾ.ಭೀಮರಾವ್ ಅಂಬೇಡ್ಕರ್ ನೇತೃತ್ವದ ಭಾರತೀಯ ಸಂವಿಧಾನದ ಕರಡು ಸಮಿತಿಯ ಸದಸ್ಯರಾದರು. ಎನ್.ಎಂ.ರಾವ್ ಅವರು ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ.
TT Krishnamachari Education Qualification: ತಿರುವೆಲ್ಲೋರ್ ಥಟ್ಟೈ ಕೃಷ್ಣಮಾಚಾರಿ ಅವರು 1956-1958 ಮತ್ತು 1964 ರಿಂದ 1966 ರವರೆಗೆ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅವರು ತಮಿಳುನಾಡಿನಲ್ಲಿರುವ D.R.B.C.C.C ಅನ್ನು ಪ್ರಾರಂಭಿಸಿದರು. ಹಿಂದೂ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದರು.