Interview Tips-15: ಐಟಿ ಉದ್ಯೋಗಿಗಳ ನೇಮಕಕ್ಕೆ ಬಳಸುವ Coding Interviewನಲ್ಲಿ ಯಶಸ್ವಿಯಾಗುವುದು ಹೇಗೆ?
ಪ್ರತಿಯೊಂದು ಉದ್ಯೋಗಕ್ಕೂ ಭಿನ್ನ ಮಾದರಿಯ ಸಂದರ್ಶನಗಳು ನಡೆಯುತ್ತವೆ. ಸಂದರ್ಶಕರು ಅಭ್ಯರ್ಥಿಗಳ ಸಾಮರ್ಥ್ಯವನ್ನು ಅಳೆಯಲು ಹಲವು ರೀತಿಯ ಟೆಸ್ಟ್ ಗಳ ಮೊರೆ ಹೋಗುತ್ತಾರೆ. ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕೋಡಿಂಗ್ ಇಂಟರ್ ವ್ಯೂ ನಡೆಯುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೋಡಿಂಗ್ ಸಂದರ್ಶನವೊಂದು ತಾಂತ್ರಿಕ ಇಂಟರ್ ವ್ಯೂ ಆಗಿದೆ. ಪ್ರೋಗ್ರಾಮಿಂಗ್ ಸಮಸ್ಯೆಗಳನ್ನು ನೀಡುವ ಮೂಲಕ ಸಾಫ್ಟ್ವೇರ್ ಇಂಜಿನಿಯರ್ ಅಭ್ಯರ್ಥಿಯ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತೆ. ಈ ಪರೀಕ್ಷೆ ಡೇಟಾ ರಚನೆಗಳು ಮತ್ತು ಅಲ್ಗಾರಿದಮ್ ಗಳ ಮೇಲೆ ಕೇಂದ್ರೀಕರಿಸುತ್ತವೆ.
2/ 7
ಕೋಡಿಂಗ್ ಸಂದರ್ಶನವು ಸಾಮಾನ್ಯವಾಗಿ 30 - 45 ನಿಮಿಷಗಳಲ್ಲಿ ನಡೆಯುತ್ತೆ. ಸಂದರ್ಶಕರು ನಿಮಗೆ ತಾಂತ್ರಿಕ ಪ್ರಶ್ನೆಯನ್ನು ನೀಡುತ್ತಾರೆ. ಕೋಡಿಂಗ್ ಇಂಟರ್ ವ್ಯೂನಲ್ಲಿ ಯಶಸ್ವಿಯಾಗಲು ಒಂದಷ್ಟು ಸಲಹೆಗಳು ಇಲ್ಲಿವೆ.
3/ 7
ಮೊದಲಿಗೆ ಉತ್ತಮ ಪ್ರೋಗ್ರಾಮಿಂಗ್ ಭಾಷೆಯನ್ನು ಆರಿಸಿಕೊಳ್ಳಿ. ಸಮಯವನ್ನು ಯೋಜಿಸಿ ಮತ್ತು ಮುಖ್ಯವಾದ ವಿಷಯಗಳು ಮತ್ತು ಪ್ರಶ್ನೆಗಳನ್ನು ಮೊದಲು ಬಗೆಹರಿಸಿ. ಒಂದೇ ವಿಷಯಕ್ಕಾಗಿ ಅಧ್ಯಯನ ಮತ್ತು ಅಭ್ಯಾಸವನ್ನು ಸಂಯೋಜಿಸಿ.
4/ 7
ಉತ್ತಮ ಸ್ವಯಂ ಪರಿಚಯ ಮತ್ತು ಅಂತಿಮ ಪ್ರಶ್ನೆಗಳನ್ನು ತಯಾರಿಸಿ. Google ಮತ್ತು Facebook ಇಂಜಿನಿಯರ್ಗಳೊಂದಿಗೆ ಅಣಕು ಕೋಡಿಂಗ್ ಸಂದರ್ಶನಗಳನ್ನು ಪ್ರಯತ್ನಿಸಿ.
5/ 7
ನಿಮಗೆ Java, Python, C++, JavaScript ನಲ್ಲಿ ಆಯ್ದ ಪ್ರಶ್ನೆಗಳನ್ನು ಅಭ್ಯಾಸ ಮಾಡಲು ಅನುಮತಿಸುತ್ತದೆ. ಆ ಭಾಷೆಗಳಲ್ಲಿ ಮಾದರಿ ಪರಿಹಾರಗಳನ್ನು ಸಹ ಒದಗಿಸುತ್ತದೆ.
6/ 7
ನಿಮ್ಮ ಕೋಡಿಂಗ್ ಸಂದರ್ಶನಗಳಿಗಾಗಿ ತಯಾರಿ ಆರಂಭಿಸಿದ್ದರೆ, ನಿಮ್ಮ ಸಮಯವನ್ನು ಹೇಗೆ ಗರಿಷ್ಠಗೊಳಿಸಬೇಕೆಂದು ತಿಳಿಯಿರಿ. ಮೇಲೆ ತಿಳಿಸಲಾದ ಅಂಶಗಳನ್ನು ಅನುಸರಿಸಿದರೆ ಕೊಟ್ಟ ಸಮಯದಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಬಹುದು. (ಸಾಂದರ್ಭಿಕ ಚಿತ್ರ)
7/ 7
ಸಂದರ್ಶನಕ್ಕೂ ಮುನ್ನ ಅಡಕು ಪರೀಕ್ಷೆಗಳ ಮೂಲಕ ಅಭ್ಯಾಸ ಮಾಡಿ. ಸಮಯವೇ ಇಲ್ಲಿ ನಿಜವಾದ ಪರೀಕ್ಷೆಯಾಗಿರುದರಿಂದ ವೇಗವಾಗಿ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.