Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಕೆಲಸಗಳನ್ನು ಬದಲಿಸಬೇಕಾಗುತ್ತದೆ. ಇದು ಕಾಮನ್ ವಿಷಯ ಕೂಡ. ಆದರೆ ನಿಮ್ಮ ನಿರ್ಧಾರ ಪ್ರೊಫೆಷನಲ್ ಆಗಿ ಇರಬೇಕು. ಸ್ಮಾರ್ಟ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇರುವ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಜಾಯ್ನ್ ಆಗುವಾಗ ಕೆಲವು ವಿಷಯಗಳನ್ನು ಗಮನಿಸಬೇಕು.

First published:

  • 17

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    ಜಾಬ್ ಸ್ವಿಚಿಂಗ್ ವೇಳೆ ಅನೇಕರು ಗೊಂದಲ ಮಾಡಿಕೊಳ್ಳುತ್ತಾರೆ. ಹಳೆಯ ಕಂಪನಿ ಬಿಟ್ಟರೆ ಸಾಕಪ್ಪಾ ಎಂದು ಹೊಸ ಕಂಪನಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದೇ ಇಲ್ಲ. ತರಾತುರಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬಿಡುತ್ತೀರಿ. ಕೆಲವೇ ದಿನಗಳಲ್ಲಿ ಹೊಸ ಕಂಪನಿಯಲ್ಲೂ ನಿಮ್ಮ ಹಳೆ ವ್ಯಥೆಯೇ ಮುಂದುವರೆಯುತ್ತೆ.

    MORE
    GALLERIES

  • 27

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    ಹಾಗಾದರೆ ಕೆಲಸ ಬದಲಾಯಿಸುವ ಮುನ್ನ ಉದ್ಯೋಗಿ ಯಾವ ವಿಷಯಗಳನ್ನು ಗಮನಿಸಬೇಕು. ಹೊಸ ಕಂಪನಿಯ ಬಗ್ಗೆ ಯಾವೆಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂಬದನ್ನು ಇಲ್ಲಿ ನೀಡಲಾಗಿದೆ.

    MORE
    GALLERIES

  • 37

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    1) ಯಾವ ಉದ್ದೇಶಕ್ಕಾಗಿ ನೀವು ಕೆಲಸ ಬದಲಿಸುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಮೊದಲು ನಿಮಗೇ ನೀವೇ ಕೇಳಿಕೊಳ್ಳಿ. ಹೊಸ ಕಂಪನಿಯಲ್ಲಿ ಆ ವಿಷಯ ಸಿಗಲಿದೆಯೇ ಎಂಬುದಕ್ಕೆ ಉತ್ತರ ಹೌದು ಎಂದಾದರೆ ಮಾತ್ರ ಕೆಲಸ ಬದಲಿಸಿ. ಉದಾಹರಣೆಗೆ ಹೆಚ್ಚಿನ ಸಂಬಳ, ದೊಡ್ಡ ಹುದ್ದೆ, ಕಡಿಮೆ ಕೆಲಸ, ವರ್ಕ್ ಫ್ರಮ್ ಹೋಮ್ ಆಯ್ಕೆ ಈ ರೀತಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯೋಚಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    2) ಈಗಿನ ಕಂಪನಿಯಲ್ಲಿರುವ ಬೆನಿಫಿಟ್ಸ್, ಹೊಸ ಕಂಪನಿಯಲ್ಲಿರುವ ಸೌಲಭ್ಯಗಳನ್ನು ಹೋಲಿಸಿ. ವೈದ್ಯಕೀಯ ವಿಮೆ ಅಥವಾ ಆರೋಗ್ಯ ವಿಮೆಯಂತಹ ಯೋಜನೆಗಳು, PF, ಸಂಬಳ ಹೆಚ್ಚಳ ವಿಧಾನ, ಹುದ್ದೆಗಳ ಪ್ರಮೋಷನ್ ಅನ್ನು ಹೋಲಿಸಿ ನೋಡಬೇಕು. ಈಗ ಇರುವುದಕ್ಕಿಂತ ಉತ್ತಮವಾಗಿದ್ದರೆ ಮಾತ್ರ ಕೆಲಸ ಬದಲಿ. ಇಲ್ಲವಾದರೆ ಕೆಲಸ ಬದಲಿಸಿಯೂ ಯಾವುದೇ ಲಾಭ ಇರುವುದಿಲ್ಲ.

    MORE
    GALLERIES

  • 57

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    3) ರಜೆಯ ನೀತಿಯ ಬಗ್ಗೆ ಗಮನಿಸಿ. ಉದ್ಯೋಗದಲ್ಲಿರುವಾಗ ಯಾವ ರೀತಿಯ ರಜೆಗಳನ್ನು ತೆಗೆದುಕೊಳ್ಳಬಹುದು. ಹಳೆಯ ಕೆಲಸಕ್ಕಿಂತ ಉತ್ತಮವಾದ ಲಾಭವನ್ನು ನೀವು ಪಡೆಯಬಹುದೇ? ಈ ರೀತಿಯಾಗಿ ರಜೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಅರ್ಥಮಾಡಿಕೊಳ್ಳಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    4) ಕಲಿಯಲು-ಬೆಳಿಯಲು ಅವಕಾಶವಿದೆಯೇ? ನಿಮ್ಮ ಕರಿಯರ್ ಅಭಿವೃದ್ಧಿಗೆ ಒಳ್ಳೆಯ ಅವಕಾಶವಿದೆಯೇ, ಹೊಸದನ್ನು ಕಲಿಯಬಹುದೇ ಎಂದು ಗಮನಿಸಿ. ಒಂದೇ ರೀತಿಯ ಕೆಲಸವನ್ನು ವರ್ಷಗಟ್ಟಲೇ ಮಾಡಬೇಕು, ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದರೆ ನಿಮ್ಮ ವೃತ್ತಿ ನಿಂತ ನೀರಾಗುತ್ತದೆ ಎಚ್ಚರ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Job Switch Tips: ಉದ್ಯೋಗ ಬದಲಿಸುವಾಗ ಹೊಸ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಲೇಬೇಕು

    5) ಕಂಪನಿಯ ಬಗ್ಗೆ ವಿಚಾರಿಸಿ: ಉದ್ಯೋಗ ಬದಲಾಯಿಸುವಾಗ ಹೊಸ ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಕಂಪನಿಯು ಹೇಗಿದೆ, ಅದರ ಮುಖ್ಯ ಕಚೇರಿ ಎಲ್ಲಿದೆ? ಕಂಪನಿಯ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ಕೆಲಸದ ಸಂಸ್ಕೃತಿ ಹೇಗಿದೆ ಎಂಬ ಮಾಹಿತಿಯನ್ನೂ ಪಡೆಯಿರಿ. (ಸಾಂಕೇತಿಕ ಚಿತ್ರ)

    MORE
    GALLERIES