ದ್ವಿತೀಯ ಪಿಯು ನಂತರ ಸರಿಯಾದ ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ವಿಜ್ಞಾನ ವಿಭಾಗದಿಂದ ಉತ್ತೀರ್ಣರಾದ ವಿದ್ಯಾರ್ಥಿಗಳು ಅನೇಕ ವೃತ್ತಿ ಆಯ್ಕೆಗಳನ್ನು ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರವು ಬೇಡಿಕೆಯಲ್ಲಿದೆ. ಹಾಗಾಗಿ ನೀವು ಈ ಕೋರ್ಸ್ ಗಳನ್ನು ಮಾಡುವುದು ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಲು ಬುನಾದಿಯಾಗುತ್ತದೆ.
BTech Course List: 2nd PU ಬಳಿಕ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬಿಟೆಕ್ ಪದವಿಯನ್ನು ಮಾಡುತ್ತಾರೆ. ಇದು 4 ವರ್ಷಗಳ ಡಿಗ್ರಿಯಾಗಿದೆ. ಇದು ಅನೇಕ ಶಾಖೆಗಳನ್ನು ಹೊಂದಿದೆ. ನಿಮ್ಮ ಆಸಕ್ತಿ ಮತ್ತು ಶ್ರೇಣಿಯ ಪ್ರಕಾರ, ನೀವು ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್, ಪೆಟ್ರೋಲಿಯಂ ಮುಂತಾದ ವಿಷಯಗಳಲ್ಲಿ ಬಿ.ಟೆಕ್ ಪದವಿಯನ್ನು ತೆಗೆದುಕೊಳ್ಳಬಹುದು. IIT, NIT, BITS ಮತ್ತು DTU ನಂತಹ ಉನ್ನತ ಸಂಸ್ಥೆಗಳಿಂದ B.Tech ಕೋರ್ಸ್ ಮಾಡುವುದರಿಂದ, ನೀವು ಅತ್ಯುತ್ತಮ ಪ್ಯಾಕೇಜ್ ಉದ್ಯೋಗವನ್ನು ಪಡೆಯಬಹುದು.
B.E. Courses List: BE ಅಂದರೆ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಕೂಡ 4 ವರ್ಷಗಳ ಪದವಿ ಕಾರ್ಯಕ್ರಮವಾಗಿದೆ. ಬಿಟೆಕ್ ನಂತೆ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್ನಂತಹ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಬಿಇ ಪದವಿಯನ್ನು ಸಹ ತೆಗೆದುಕೊಳ್ಳಬಹುದು. ನೀವು ಈ ಕೋರ್ಸ್ ಅನ್ನು IIT, NIT, BITS ಮತ್ತು DTU ನಿಂದ ಅಧ್ಯಯನ ಮಾಡಬಹುದು. ಬಿ.ಟೆಕ್ ಕೌಶಲ್ಯ ಆಧಾರಿತ ಕೋರ್ಸ್ ಆಗಿದ್ದು, ಬಿ.ಇ. ಜ್ಞಾನವನ್ನು ಆಧರಿಸಿದೆ.
BCA ಕಂಪ್ಯೂಟರ್ ಸೈನ್ಸ್: BCA ಅಂದರೆ ಬ್ಯಾಚುಲರ್ ಆಫ್ ಕಂಪ್ಯೂಟರ್ ಸೈನ್ಸ್ ಎನ್ನುವುದು 3 ವರ್ಷಗಳ ಪದವಿ ಕಾರ್ಯಕ್ರಮವಾಗಿದೆ. ಈ ಕೋರ್ಸ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿ ಮೇಲೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ, ಸಿಂಬಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸ್ಟಡೀಸ್ ಅಂಡ್ ರಿಸರ್ಚ್ (SICSR), ಪುಣೆ, ಕ್ರಿಸ್ತ ಜಯಂತಿ ಕಾಲೇಜು ಬೆಂಗಳೂರು ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ನಂತಹ ಉನ್ನತ ಸಂಸ್ಥೆಗಳಿಗೆ ದಾಖಲಾಗಬಹುದು.